ಕರ್ನಾಟಕ

ಸರ್ಕಾರ ಜನರ ದಿಕ್ಕು ತಪ್ಪಿಸುತ್ತಿದೆ : ಡಿವಿಎಸ್

Pinterest LinkedIn Tumblr

dvs

ಕೆಂಗೇರಿ, ಡಿ.13- ಕೇಂದ್ರದ ಜನಪರ ಯೋಜನೆಗಳನ್ನು ರಾಜ್ಯ ಸರ್ಕಾರ ಹೈಜಾಕ್ ಮಾಡಿ ನಮ್ಮ ಯೋಜನೆಗಳೆಂದು ಬಿಂಬಿಸುವ ಮೂಲಕ ಜನರ ದಿಕ್ಕು ತಪ್ಪಿಸಲು ಹೊರಟಿದೆ ಎಂದು ಕೇಂದ್ರ ಕಾನೂನು ಸಚಿವ ಡಿ.ವಿ.ಸದಾನಂದಗೌಡ  ಆರೋಪಿಸಿದರು.

ವಿಧಾನಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಕೆಂಗೇರಿ ಹೋಬಳಿಯ ತಗಚುಗುಪ್ಪೆ ಗ್ರಾಮದಲ್ಲಿ  ಹಮ್ಮಿಕೊಂಡಿದ್ದ ಪ್ರಚಾರ ಸಭೆಯಲ್ಲಿ  ಕಾಂಗ್ರೆಸ್ ಬೆಂಬಲಿತ ಗ್ರಾಮಪಂಚಾಯತಿ ಸದಸ್ಯೆ ಜ್ಯೋತಿ ಸಂಜೀವರಾಜ್ ರವರನ್ನ್ನು ಪಕ್ಷಕ್ಕೆ ಸೇರ್ಪಡಿಸಿಕೊಳ್ಳುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಪರಿಷತ್ ಚುನಾವಣೆಯಲ್ಲಿ ಕನಿಷ್ಠ 14 ಸ್ಥಾನಗಳನ್ನು ಬಿಜೆಪಿ ಗೆಲ್ಲುವುದು ಖಚಿತ ಬಿಜೆಪಿ ಸರ್ಕಾರದಲ್ಲಿ ತಂದ ಹಲವಾರು ಜನಪರ ಯೋಜನೆಗಳನ್ನು ಸರ್ಕಾರ ನಿರ್ಲಕ್ಷಸುತ್ತಿರುವುದು ಸರಿಯಾದ ಧೋರಣೆಯಲ್ಲ ಎಂದು ಅವರು ತಿಳಿಸಿದರು.

ಅಭ್ಯರ್ಥಿ ದೊಡ್ಡಬಸವರಾಜು ಮಾತನಾಡಿ,  ಪಕ್ಷ ವಿಶ್ವಾಸವಿಟ್ಟು ನನಗೆ ಟಿಕೆಟ್ ನೀಡಿ ಬೆಂಬಲಿಸಿದ್ದಾರೆ. ಅವರ ವಿಶ್ವಾಸಕ್ಕೆ ಧಕ್ಕೆ ಬಾರದಂತೆ ಚುನಾವಣೆಯಲ್ಲಿ ಗೆದ್ದು ಪಕ್ಷ ಸಂಘಟನೆಗೆ ಒತ್ತು ನೀಡುತ್ತೇನೆ ಎಂದು ತಿಳಿಸಿದರು.

ರಾಜ್ಯ ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಪಿ.ಮುನಿರಾಜುಗೌಡ, ವಿಧಾನಪರಿಷತ್ ಸದಸ್ಯ ಅಶ್ವತ್ ನಾರಾಯಣ, ಬಿಜೆಪಿ ಮುಖಂಡರಾದ ಎ.ರವಿ, ಗಿರಿಯಪ್ಪ, ಎ.ಶಿವಕುಮಾರ್, ಜಿ.ಮುನಿರಾಜು, ಬೆಟ್ಟಯ್ಯ, ರ.ಆಂಜನಪ್ಪ, ವಿ.ವಿ.ಸತ್ಯನಾರಾಯಣ, ಜಿ.ವಿಜಯಕುಮಾರ್, ಹೆಚ್.ನಾಗರಾಜ್, ಜೆ.ರಮೇಶ್ ಮತ್ತಿತರರು ಉಪಸ್ಥಿತರಿದ್ದರು.

Write A Comment