ಶ್ರೀನಗರ, ಡಿ.13- ಮಿಲಿಟರಿ ಪ್ರಾಯೋಜಿತ ರಾಷ್ಟ್ರೀಯ ಸೌಹಾರ್ದತಾ ಪ್ರವಾಸದಲ್ಲಿ ಭಾಗವಹಿಸಿರುವ ನಗರಪ್ರದೇಶಗಳ ವಿವಿಧ ಶಾಲೆಗಳ ಬಾಲಕಿಯರಿಗೆ, ಗುಂಡಿಟ್ಟು ಸಾಯಿಸುವ ಬೆದರಿಕೆ ಕರೆಗಳು ಬಂದಿವೆ.
ನೋಡಿ, ಮಿಲಿಟರಿ ಪ್ರವಾಸದಲ್ಲಿರುವ ಹುಡಿಗಿಯರನ್ನು… ಅವರ ಹೆತ್ತವರಿಗೆ ಸಲಾಂ…. ಎಂಬ ಫೇಸ್ಬುಕ್ ಸಂದೇಶದೊಂದಿಗೆ, ಪ್ರವಾಸ ಹೋಗಿರುವ ಹುಡುಗಿಯರ ಭಾವಚಿತ್ರ ಹಾಕಿ, ಅನೇಕ ಹುಡುಗರು ಶ್ರದ್ಧಾಂಜಲಿ ಸಲ್ಲಿಸುತ್ತಿರುವಂತೆ ಪ್ರಕಟಿಸಲಾಗಿದೆ. ಇನ್ನೊಂದು ಫೇಸ್ಬುಕ್ ಸಂದೇಶದಲ್ಲಿ ಮತ್ತೊಬ್ಬನು ಆ ಹುಡುಗಿಯರಲ್ಲಿ ಒಬ್ಬಳು ಸಾವನ್ನಪ್ಪಿದರೆ ಅವರಿಗೆಲ್ಲಾ ಅರ್ಥವಾಗುತ್ತದೆ ಎಂದು ಹೇಳಲಾಗಿದೆ.
ಹೀಗೆ ಹಲವು ರೀತಿಯಲ್ಲಿ ಬಾಲಕಿಯರ ಈ ಪ್ರವಾಸವನ್ನು ವಿರೋಧಿಸಿರುವ ದುಷ್ಕರ್ಮಿಗಳು, ಅವರನ್ನು ಗುಂಡಿಕ್ಕಿ ಕೊಲ್ಲುವ ಬೆದರಿಕೆಯನ್ನೂ ಹಾಕಿದ್ದಾರೆ. ಜಮ್ಮು-ಕಾಶ್ಮೀರದಲ್ಲಿ ಈಗ ಈ ಲಿಂಗ ತಾರತಮ್ಯದ ಸಮರ ಷುರುವಾಗಿರುವುದು ಪೊಲಿಸರಲ್ಲಿ ಆತಂಕ ಮೂಡಿಸಿದೆ.