ರಾಷ್ಟ್ರೀಯ

ಆಮಿರ್ ಖಾನ್ ಹೇಳಿಕೆ; ಸ್ನ್ಯಾಪ್ ಡೀಲ್ ವಿರುದ್ಧ ಟ್ವಿಟ್ಟರಾತಿ ಆಕ್ರೋಶ

Pinterest LinkedIn Tumblr

12Snap-dealನವದೆಹಲಿ: ಭಾರತದಲ್ಲಿ ನಡೆಯುತ್ತಿರುವ ‘ಅಸಹಿಷ್ಣುತೆ ಚರ್ಚೆ’ಯಲ್ಲಿ ಪಾಲ್ಗೊಂಡ ಆಮಿರ್ ಖಾನ್ ವಿರುದ್ಧ ಸೋಮವಾರದಿಂದ ಹಲವಾರು ಜನ ಟ್ವೀಟ್ ಮಾಡುತ್ತಿದ್ದರೆ, ಆಮಿರ್ ಪ್ರಚಾರ ರಾಯಭಾರಿ ಆಗಿರುವ ಇ-ಕಾಮರ್ಸ್ ಸಂಸ್ಥೆ ಸ್ನ್ಯಾಪ್ ಡೀಲ್ ಗೆ ಕೂಡ ಬಿಸಿ ತಟ್ಟಿದೆ.

ದೇಶದಲ್ಲಿ ಹೆಚ್ಚುತ್ತಿರುವ ಅಸಹಿಷ್ಣುತೆಗೆ ಬೇಸತ್ತು ತಮ್ಮ ಪತ್ನಿ ಕಿರಣ್ ರಾವ್ ದೇಶ ತೊರೆಯುವ ಮಾತನಾಡಿದ್ದರು ಎಂದು ಅಮೀರ್ ಖಾನ್ ಸೋಮವಾರ ಹೇಳಿದ್ದರು. ದೇಶದಲ್ಲಿ ಅಸಿಹಿಷ್ಣುತೆ ಇಲ್ಲ ಎಂದು ಚರ್ಚಿಸುತ್ತಿರುವ ಹಲವಾರು ಜನರು ಟ್ವಿಟ್ಟರ್ ಮೂಲಕ ಇದಕ್ಕೆ ಪ್ರತಿಕ್ರಿಯಿಸಿದ್ದು, ತಮ್ಮ ಫೋನುಗಳಿಂದ ಆಮಿರ್ ಖಾನ್ ಪ್ರಚಾರ ರಾಯಭಾರಿಯಾಗಿರುವ ಸ್ನ್ಯಾಪ್ ಡೀಲ್ ಆಪ್ ತೆಗೆದು ಹಾಕಿರುವುದಾಗಿ ಬರೆದುಕೊಂಡಿದ್ದಾರೆ.

ಇಲ್ಲೊಬ್ಬರು ಟ್ವಿಟ್ಟರ್ ಬಳೆಕೆದಾರರ ಟ್ವೀಟನ್ನು ಕಾಣಬಹುದು.

Write A Comment