ಬೆಂಗಳೂರು: ಕಿಲ್ಲಿಂಗ್ ವೀರಪ್ಪನ್ ಸಿನಿಮಾದಿಂದ ಕನ್ನಡ ಮಾತ್ರವಲ್ಲ ಪರಭಾಷೆಗಳಲ್ಲೂ ತನ್ನ ಹವಾ ಕ್ರಿಯೇಟ್ ಮಾಡಿರುವ ಸ್ಯಾಂಡಲ್‍ವುಡ್‍ನ ನಟ ಶಿವರಾಜ್‍ಕುಮಾರ್ ಅವರಿಗೆ ಈಗ ಟಾಲಿವುಡ್‍ನಿಂದ ಮತ್ತೊಂದು ಆಫರ್ ಬಂದಿದೆ.
ತೆಲುಗು, ತಮಿಳು, ಮಲೆಯಾಳಂ ಮತ್ತು ಕನ್ನಡದಲ್ಲಿ ಸಿದ್ಧವಾಗಲಿರುವ ಸಿನಿಮಾದಲ್ಲಿ ಶಿವರಾಜ್‍ಕುಮಾರ್ ಕನ್ನಡ ವರ್ಶನ್‍ಗಾಗಿ ಬಣ್ಣ ಹಂಚಲು ಅವಕಾಶ ಬಂದಿದೆ. ಮಲೆಯಾಳಂನ ಸೂಪರ್ ಸ್ಟಾರ್ ಮೋಹನ್ ಲಾಲ್ ಮತ್ತು ಗೌತಮಿ ಉಳಿದ ಮೂರು ಭಾಷೆಗಳಲ್ಲಿ ಕಾಣಿಸುವುದು ಕನ್‍ಫರ್ಮ್ ಆಗಿದೆ. ಈ ಚಿತ್ರವನ್ನು ಐತೆ, ಅನುಕೊಕುಂಡ ಓಕ ರೋಜು, ಸಾಹಸಂನಂತಹ ಉತ್ತಮ ಚಿತ್ರಗಳನ್ನು ನಿರ್ದೇಶಿಸಿದ ಚಂದ್ರಶೇಖರ್ ಎಲ್ಲೇಟಿ, ಶಿವಣ್ಣನಿಗಾಗಿ ಸಿನಿಮಾ ಮಾಡಲು ಮುಂದಾಗಿದ್ದಾರಂತೆ.
ಈಗ, ಅಂದಾಲ ರಾಕ್ಷಸಿ, ಲೆಜೆಂಡ್ ಸಿನಿಮಾಗಳ ನಿರ್ಮಾಪಕ ಸಾಯಿ ಕ್ರೊರಪಾಟಿ ಟೈಟಲ್ ಫೈನಲ್ ಆಗದ ಚಿತ್ರಕ್ಕೆ ಬಂಡವಾಳ ಹಾಕಲಿದ್ದಾರೆ. ಈಗಾಗಲೇ ಒಂದು ಸುತ್ತಿನ ಮಾತುಕಥೆ ಮುಗಿದಿದ್ದು, ಶಿವಣ್ಣ ಒಪ್ಪಿಗೆಗಾಗಿ ಚಿತ್ರತಂಡ ಕಾಯುತ್ತಿದೆ. ಅಂದು ಕೊಂಡತೆ ಆದರೆ ಶಿವಣ್ಣ ಮತ್ತೊಬ್ಬ ಪರಭಾಷ ನಿರ್ದೇಶಕರ ಜೊತೆಯಲ್ಲಿ ಕೆಲಸ ಮಾಡಲಿದ್ದಾರೆ.
