ಮಂಗಳೂರು: ಇತ್ತೀಚೆಗೆ ಮೂಡಬಿದ್ರೆಯಲ್ಲಿ ಹತ್ಯೆಯಾದ ಪ್ರಶಾಂತ್ ಪೂಜಾರಿಯವರ ಮನೆಗೆ ಕಾಂಗ್ರೆಸ್ ಸಚಿವರು ಹೋಗದಿರುವುದಕ್ಕೆ ಆಕ್ರೋಶ ವ್ಯಕ್ತವಾಗಿದ್ದು, ನಾಲ್ಕು ಮಂದಿ ಸಚಿವರ ವಿರುದ್ಧ ಜನ ಕಿಡಿಕಾರಿದ್ದಾರೆ.
ನಮ್ಮ ಟಿವಿಯ ‘ಜನ ಧ್ವನಿ’ ಫೋನ್ ಇನ್ ಕಾರ್ಯಕ್ರಮದಲ್ಲಿ ಶ್ರೀರಾಮ ಸೇನೆಯ ರಾಷ್ಟ್ರಾಧ್ಯಕ್ಷ ಪ್ರಮೋದ್ ಮುತಾಲಿಕ್‌ರೊಂದಿಗೆ ಹತ್ಯೆಯಾದ ಪ್ರಶಾಂತ್ ಪೂಜಾರಿಯ ಸಂಬಂಧಿ ಮಹಿಳೆಯೊಬ್ಬರು ಫೋನ್‌ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದು, ಸಚಿವರಾದ ಅಭಯಚಂದ್ರ ಜೈನ್, ರಮಾನಾಥ ರೈ, ಯು.ಟಿ.ಖಾದರ್ ಹಾಗೂ ವಿನಯ ಕುಮಾರ್ ಸೊರಕೆ ವಿರುದ್ಧ ಹರಿಹಾಯ್ದಿದ್ದಾರೆ.
ಇದೇ ಕೊಲೆ ಓರ್ವ ಮುಸ್ಲಿಂ ಸಮುದಾಯದವನಾಗಿದ್ದರೆ ನಾಲ್ಕೂ ಮಂದಿ ಸಚಿವರು ಆತನ ಮನೆಗೆ ಹೋಗಿ ಪರಿಹಾರ ಘೋಷಿಸುತ್ತಿದ್ದರು. ಮುಸ್ಲಿಮರನ್ನು ಓಟಿಗಾಗಿ ಬಳಸಿಕೊಳ್ಳುತ್ತಿರುವ ಕಾಂಗ್ರೆಸ್ ಸಚಿವರಿಗೆ ಹಿಂದುಗಳ ಹತ್ಯೆಗೆ ಬೆಲೆ ಇಲ್ಲವೇ ಎಂದು ಪ್ರಶ್ನಿಸುತ್ತಿದ್ದಾರೆ. ಈ ವೀಡಿಯೋ ಇದೀಗ ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿದೆ.
ಜಿಲ್ಲೆಯ ನಾಲ್ಕು ಮಂದಿ ಸಚಿವರಿದ್ದರೂ, ಓರ್ವನೂ ಕೂಡಾ ಹತ್ಯೆಗೀಡಾದ ಪ್ರಶಾಂತ್‌ನ ಮನೆಗೆ ಹೋಗಿಲ್ಲ. ಇಂಥ ನಾಲಾಯಕ್ ಸಚಿವರಿದ್ದರೇನು…ಇಲ್ಲದಿದ್ದರೇನು ಎಂದು ಪ್ರಶ್ನಿಸುತ್ತಿರುವ ಮಹಿಳೆ, ಅಭಯಚಂದ್ರ ಜೈನ್‌ರ ವಿರುದ್ಧ ಕಿಡಿಕಾರಿದ್ದಾರೆ.
