ನವದೆಹಲಿ: ರಾಷ್ಟ್ರಪಿತ ಮಹಾತ್ಮ ಗಾಂಧಿ ಹಿಂದು- ಮುಸ್ಲಿಂ ಏಕತೆಯನ್ನು ಬಯಸಿದ್ದರು. ಒಂದು ವೇಳೆ ಗಾಂಧಿ ಭಾರತವಾಗಿದ್ದಲ್ಲಿ ಕನಿಷ್ಠ ನಮಗೆ ನ್ಯಾಯ ದೊರೆತಂತಾಗುತ್ತಿತ್ತು. ನಮಗೆ ಗೊಡ್ಸೆ, ಮೋಹನ್ ಭಾಗವತ್, ಸಾಕ್ಷಿ ಮಹಾರಾಜ್ ಅಥವಾ ಪ್ರವೀಣ್ ತೊಗಾಡಿಯಾರಂತಹ ಭಾರತ ಬೇಕಾಗಿಲ್ಲ ಎಂದು ಜಮ್ಮು ಕಾಶ್ಮಿರದ ಸ್ವತಂತ್ರ ಶಾಸಕ ಇಂಜಿನಿಯರ್ ರಷೀದ್ ಹೇಳಿದ್ದಾರೆ.
ಹಿಂದು ಸೇನಾ ಕಾರ್ಯಕರ್ತರು ಶಾಸಕ ಇಂಜಿನಿಯರ್ ರಷೀದ್ ಮೇಲೆ ಕಪ್ಪು ಪೇಂಟ್ ಬಳೆದು ಇಂಕ್ ಎಸೆದಿದ್ದರು.
ಮಹಾತ್ಮ ಗಾಂಧಿಯವರ ಅಹಿಂಸೆಯನ್ನು ಪ್ರತ್ಯೇಕತಾವಾದಿ ಗುಂಪುಗಳು ಬದಿಗಿಟ್ಟು ಕಾನೂನು ಕೈಗೆತ್ತಿಕೊಳ್ಳುವಂತಹ ಕೃತ್ಯಗಳಲ್ಲಿ ತೊಡಗಿವೆ. ದೇಶದಲ್ಲಿ ಹಿಂಸಾಚಾರದಲ್ಲಿ ಹೆಚ್ಚಳವಾಗುತ್ತಿದೆ ಎಂದು ಟೀಕಿಸಿದರು.
ಕೋಮುಗಲಭೆಗಳನ್ನು ತಡೆಯಲು ತಮ್ಮ ಜೀವನವನ್ನೇ ತ್ಯಾಗ ಮಾಡಿದ ಮಹಾತ್ಮಾ ಗಾಂಧಿ, ತೋರಿಸಿದ ದಾರಿಯಲ್ಲಿ ಸಾಗದಿರುವುದು ವಿಷಾದಕರ ಸಂಗತಿಯಾಗಿದೆ ಎಂದು ತಿಳಿಸಿದ್ದಾರೆ.
ದೇಶದಲ್ಲಿ ಏಕತೆ ಸಾರುವುದು ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಆದ್ಯ ಕರ್ತವ್ಯ. ಒಂದು ವೇಳೆ, ಪ್ರಧಾನಿ ಮೋದಿ ಇದೀಗ ಎಚ್ಚರಗೊಳ್ಳದಿದ್ದಲ್ಲಿ ಮುಂಬರುವ ದಿನಗಳಲ್ಲಿ ದೇಶ ತುಂಬಾ ಸಂಕಷ್ಟಕ್ಕೆ ಸಿಲುಕಲಿದೆ ಎಂದು ಎಚ್ಚರಿಸಿದರು.
ಒಂದು ವೇಳೆ, ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರಿಗೆ ದೇಶದಲ್ಲಿ ನಡೆಯುತ್ತಿರುವ ವಿಚ್ಚಿದ್ರಕಾರಿ ಚಟುವಟಿಕೆಗಳು ಅರ್ಥವಾಗುತ್ತಿವೆಯಾದರೆ, ಇತರರಿಗೂ ಅರ್ಥವಾಗಬೇಕಾಗಿದೆ ಎಂದು ಜಮ್ಮು ಕಾಶ್ಮಿರದ ಶಾಸಕ ಇಂಜಿನಿಯರ್ ರಷೀದ್ ಹೇಳಿದ್ದಾರೆ.