ರಾಷ್ಟ್ರೀಯ

ಪಾಕಿಸ್ತಾನ ರಚಿಸಿದ ಮಹಮದ್ ಅಲಿ ಜಿನ್ನಾಗೆ ನಮನ: ಶಾಸಕ ಅಬ್ದುಲ್ ರಶೀದ್

Pinterest LinkedIn Tumblr

mla-newದೆಹಲಿ: ಮುಸಲ್ಮಾನರಿಗಾಗಿ ಪ್ರತ್ಯೇಕ ಪಾಕಿಸ್ತಾನ ರಚಿಸಿದ ಮಹಮದ್ ಆಲಿ ಜಿನ್ನಾಗೆ ನನ್ನ ನಮನ ಎಂದು ಜಮ್ಮು ಕಾಶ್ಮೀರ ಪಕ್ಷೇತರ ಶಾಸಕ ಅಬ್ದುಲ್ ರಶೀದ್ ಹೇಳಿದ್ದಾರೆ.

ಭೀಫ್ ಪಾರ್ಟಿ ನೀಡಿದ್ದಕ್ಕೆ ದೆಹಲಿಯಲ್ಲಿ ಅವರ ಮುಖಕ್ಕೆ ಮಸಿ ಎರಚಿದ ಘಟನೆಗೆ ತೀವ್ರ ಆಕ್ರೋಶ ವ್ಯಕ್ತ ಪಡಿಸಿರುವ ಅಬ್ದುಲ್ ರಶೀದ್ ಭಾರತದಲ್ಲಿ ಮುಸಲ್ಮಾನರು ಬದುಕಲು ಸಾಧ್ಯವಿಲ್ಲ ಎಂದು ಅರಿತ ಮಹಮದ್ ಆಲಿ ಜಿನ್ನಾ ಪ್ರತ್ಯೇಕ ಪಾಕಿಸ್ತಾನ ರಚನೆ ಮಾಡಿದರು ಎಂದು ತಿಳಿಸಿದ್ದಾರೆ.

ನಮಗೆ ಮಹಾತ್ಮ ಗಾಂಧಿ ಅವರ ಭಾರತದಲ್ಲಿ ನಂಬಿಕೆಯಿತ್ತು. ಹಿಂದೂ ಮಹಾಸಭಾ ಪ್ರವೀಣ್ ತೊಗಾಡಿಯಾ ಅಂಥವರ ಭಾರತದಲ್ಲಿ ನಂಬಿಕೆ ಇಲ್ಲ. ಪ್ರಧಾನಿ ನರೇಂದ್ರ ಮೋದಿ ದೇಶದ ಜನತೆಯ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ.

ಗೋಮಾಂಸ ಔತಣಕೂಟವನ್ನು ಆಯೋಜಿಸಿದ್ದ ಜಮ್ಮು ಮತ್ತು ಕಾಶ್ಮೀರದ ಪಕ್ಷೇತರ ಶಾಸಕ ಎಂಜಿನಿಯರ್ ರಶೀದ್ ಮುಖಕ್ಕೆ ನವದೆಹಲಿಯ ಪ್ರೆಸ್ ಕ್ಲಬ್ ನಲ್ಲಿ ಹಿಂದೂ ಸೇನೆ ಕಾರ್ಯಕರ್ತ ಮಸಿ ಬಳಿದಿದ್ದರು.

Write A Comment