ರಾಷ್ಟ್ರೀಯ

ನಹಾಮ್ ನಲ್ಲಿ ಗೋ ಕಳ್ಳಸಾಗಣೆದಾರನ ಹತ್ಯೆ: ಓರ್ವನ ಸೆರೆ

Pinterest LinkedIn Tumblr

Cattle-Smuggler...್ಇನಹಾಮ್: ಹಿಮಾಚಲದ ಸಿರಮೌರ್‌ ಜಿಲ್ಲೆಯಲ್ಲಿ ಗೋವುಗಳನ್ನು ಕಳ್ಳಸಾಗಣೆ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಬಡಿದುಕೊಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಓರ್ವನನ್ನು ಬಂಧಿಸಿದ್ದಾರೆ.

ಲಾರಿಯಲ್ಲಿ ಗೋವುಗಳ ಕಳ್ಳಸಾಗಣೆ ವೇಳೆ ಕಳ್ಳಸಾಗಣೆಯನ್ನು ತಡೆಯಲು ಉದ್ರಿಕ್ತರ ಗುಂಪು ಸುಮೋ ವಾಹನವನ್ನು ಬಳಸಿತ್ತು. ಈ ವಾಹನ ಚಾಲಕನನ್ನು ಸದ್ಯ ಬಂಧಿಸಲಾಗಿದ್ದು, ಕೆಲ ದಿನಗಳಲ್ಲೇ ಉಳಿದ ಆರೋಪಿಗಳನ್ನು ಬಂಧಿಸಲಾಗುವುದು ಎಂದು ನಹಾನ್ ನ ಪೊಲೀಸ್ ಅಧೀಕ್ಷಕ ಸೌಮ್ಯ ಸಾಂಬಶಿವನ್ ಹೇಳಿದ್ದಾರೆ.

ಹತ್ಯೆಗೀಡಾದ ವ್ಯಕ್ತಿ ಸೇರಿ ನಾಲ್ವರು ಕಳೆದ ಬುಧವಾರ ಲಾರಿಯೊಂದರಲ್ಲಿ 10 ದನ ಮತ್ತು 5 ಆಕಳನ್ನು ಸಾಗಿಸುತ್ತಿದ್ದರು. ಇದನ್ನು ಗಮನಿಸಿದ ಜನರು ಟ್ರಕ್‌ ಮೇಲೆ ದಾಳಿ ಮಾಡಿದ್ದಾರೆ. ಆಗ ಹೆದರಿದ ಲಾರಿಯಲ್ಲಿದ್ದ ವ್ಯಕ್ತಿಗಳು ಕೆಲ ಆಕಳನ್ನು ಟ್ರಕ್‌ನಿಂದ ಕೆಳಗೆ ನೂಕಿದ್ದಾರೆ. ಆಗ ಒಂದು ಗೋವು ಸತ್ತುಹೋಗಿದೆ. ಇನ್ನು 5 ಗೋವುಗಳು ಗಾಯಗೊಂಡಿವೆ. ಅನಂತರ ಗೋಕಳ್ಳರು ಸ್ಥಳವೊಂದರಲ್ಲಿ ಅವಿತಿದ್ದಾಗ, ಜನರು ಇವರನ್ನು ಬೆನ್ನಟ್ಟಿ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಆದರೆ ಜನರಿಂದ ಥಳಿತಕ್ಕೊಳಗಾಗಿದ್ದ ಉತ್ತರಪ್ರದೇಶದ ಸಹಾರನ್‌ಪುರದ ನೋಮಾನ್‌ (28) ಎಂಬಾತ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ.

Write A Comment