ರಾಷ್ಟ್ರೀಯ

ವಾಯುಪಡೆಗೆ ಮಹಿಳಾ ಪೈಲಟ್‌ಗಳ ಸೇರ್ಪಡೆ : ರೂಪ್ ರಹಾ ಘೋಷಣೆ

Pinterest LinkedIn Tumblr

vayuನವದೆಹಲಿ, ಅ.8-ಭಾರತೀಯ ವಾಯುಪಡೆಗೆ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಪೈಲಟ್‌ಗಳನ್ನು ಸೇರ್ಪಡೆ ಮಾಡಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಏರ್‌ಫೋರ್ಸ್ ಮುಖ್ಯಸ್ಥ ಅರೂಪ್ ರಹಾ ಅವರು ಹೇಳಿದ್ದಾರೆ.

ಇಲ್ಲಿಯವರೆಗೆ ವಾಯು ಸಾರಿಗೆಯಲ್ಲಿ ಮಹಿಳೆಯರು ಇದ್ದರಾದರೂ, ಕೇವಲ ಸರಕು ಸಾಗಣೆ ವಿಮಾನಗಳು ಹಾಗೂ ಹೆಲಿಕಾಪ್ಟರ್‌ಗಳನ್ನು ನಿರ್ವಹಿಸುವುದಕ್ಕಷ್ಟೇ ಸೀಮಿತವಾಗಿದ್ದರು. ಆದರೆ ಈಗ ಮಹಿಳೆಯರನ್ನು ಭಾರತೀಯ ವಾಯುಪಡೆಯ ಯುದ್ಧ ವಿಮಾನಗಳ ಪೈಲಾಟ್‌ಗಳಾಗಿ ಸೇರ್ಪಡೆ ಮಾಡಿಕೊಳ್ಳುವ ಮೂಲಕ ಗಗನ ಸಾರಿಗೆಯಲ್ಲಿ ಅವರನ್ನು ಮುಖ್ಯ ವಾಹಿನಿಗೆ ಕರೆ ತರಲಾಗುವುದು ಎಂದು ರಹಾ ತಿಳಿಸಿದ್ದಾರೆ.

ಭಾರತೀಯ ಯುವತಿಯರ ಬಹುದಿನದ ಕನಸಾಗಿರುವ ಯುದ್ಧ ವಿಮಾನಗಳ ಚಾಲನೆಗೆ ನೇಮಕ ಮಾಡಿಕೊಳ್ಳುವುದರೊಂದಿಗೆ ಅವರ ಕನಸುಗಳನ್ನು ನನಸು ಮಾಡಲಾಗುವುದು ಎಂದು ಅವರು ಹೇಳಿದ್ದಾರೆ.

ಭಾರತೀಯ ವಾಯುಪಡೆಯ 83ನೇ ವಾರ್ಷಿಕೋತ್ಸವದ ಸಂದರ್ಭ ರಹಾ ಇಂದು ಈ ಘೋಷಣೆ ಮಾಡಿದ್ದಾರೆ. ಮೋದಿ ಶುಭಾಶಯ: ಭಾರತೀಯ ವಾಯು ಪಡೆಯ 83ನೇ ವಾರ್ಷಿಕ ಸಮಾರಂಭದ ಸಂದರ್ಭ ವಾಯುಪಡೆಗೆ ಶುಭಕೋರಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಏರ್‌ಫೋರ್ಸ್‌ನ ಸಾಹಸ, ಧೈರ್ಯ-ಸ್ಥೈರ್ಯಗಳು ಹಾಗೂ ಹೋರಾಟದ ಕಿಚ್ಚನ್ನು ಪ್ರಶಂಶಿಸಿದ್ದಾರೆ.

Write A Comment