ರಾಷ್ಟ್ರೀಯ

ದಾದ್ರಿ ಹತ್ಯೆ ಪ್ರಕರಣ: ಅಖ್ಲಾಕ್ ಕುಟುಂಬ ದೆಹಲಿಯಲ್ಲಿರುವ ವಾಯುನೆಲೆಗೆ ಸ್ಥಳಾಂತರ

Pinterest LinkedIn Tumblr

dadri

ನವದೆಹಲಿ: ಉತ್ತರ ಪ್ರದೇಶದ ದಾದ್ರಿಯಲ್ಲಿ ಗೋಮಾಂಸ ಸೇವನೆ ಮಾಡಿದ್ದಾರೆಂಬ ಆರೋಪದಲ್ಲಿ ಹಲ್ಲೆಗೊಳಗಾಗಿ ಮೃತ ಪಟ್ಟ ಅಕ್ಲಾಕ್ ಕುಟುಂಬಸ್ಥರು ದೆಹಲಿಗೆ ಸ್ಥಳಾಂತರಗೊಂಡಿದ್ದಾರೆ.

ಭಾರತೀಯ ವಾಯುಪಡೆ ಮೃತ ಅಖ್ಲಾಕ್ ಕುಟುಂಬವನ್ನು ದೆಹಲಿಯಲ್ಲಿರುವ ವಾಯುನೆಲೆಗೆ ಸ್ಥಳಾಂತರಿಸಿದೆ. ಅಕ್ಲಾಕ್ ಅವರ ಹಿರಿಯ ಮಗ ಭಾರತೀಯ ವಾಯುಪಡೆಯಲ್ಲಿ ಕೆಳಗಿನ ದರ್ಜೆಯ ಟೆಕ್ನಿಷಿಯನ್‌ ಆಗಿದ್ದಾರೆ.

ಇಕ್ಲಾಖ್ ಕುಟುಂಬ ಸೋಮವಾರ ರಾತ್ರಿಯೇ ದಾದ್ರಿಯಿಂದ ದೆಹಲಿಯ ಸುಬ್ರತೊ ಪಾರ್ಕ್‌ಗೆ ಸ್ಥಳಾಂತರಗೊಂಡಿದೆ. ಇಕ್ಲಾಖ್ ಕುಟುಂಬವನ್ನು ದೆಹಲಿಗೆ ಸ್ಥಳಾಂತರಿಸಲು ಇರುವ ಸಾಧ್ಯತೆಗಳನ್ನು ಪರಿಶೀಲಿಸುತ್ತಿರುವುದಾಗಿ ‘ಐಎಎಫ್‌’ ಮುಖ್ಯಸ್ಥ ಅರೂಪ್‌ ರಾಹ ಅವರು ಅಕ್ಟೋಬರ್‌ 3 ರಂದು ಹೇಳಿದ್ದರು.

ಅಖ್ಲಾಕ್ ನಿಧನದ ನಂತರ, ದಾದ್ರಿಯಲ್ಲಿ ಹೇರಿದ್ದ ನಿಷೇಧ ಉಲ್ಲಂಘಿಸಿದ ಕಾರಣಕ್ಕೆ ಕೇಂದ್ರ ಸಚಿವ ಮಹೇಶ್‌ ಶರ್ಮಾ, ಬಿಜೆಪಿ ಮುಖಂಡ ಸಂಗೀತ್‌ ಸೋಮ್‌, ಬಿಎಸ್‌ಪಿ ಮುಖಂಡ ನಸೀಮುದ್ದೀನ್‌ ಸಿದ್ದಿಕಿ, ಹಿಂದೂ ರಕ್ಷಾದಳದ ಓಂಜಿ ಮಹಾರಾಜ್‌ ಮತ್ತು ಪರ್ವೇಜ್‌ ವಿರುದ್ಧ ಸ್ಥಳೀಯ ಜಿಲ್ಲಾಡಳಿತ ಪ್ರಕರಣ ದಾಖಲಿಸಿಕೊಂಡಿದೆ.

Write A Comment