ರಾಷ್ಟ್ರೀಯ

ಪುರುಷರ ಮೇಲೆ ಮಹಿಳಾ ದೌರ್ಜನ್ಯದಲ್ಲಿ ಕರ್ನಾಟಕಕ್ಕೆ 2ನೇ ಸ್ಥಾನ

Pinterest LinkedIn Tumblr

menನವದೆಹಲಿ: ಮಹಿಳಾ ದೌರ್ಜನ್ಯ ಪ್ರಕರಣಗಳಂತೆ ಭಾರತದಲ್ಲಿ ಇದೀಗ ಪುರುಷರ ಮೇಲೆ ಮಹಿಳಾ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿದೆ. ಸೇವ್ ಇಂಡಿಯನ್ ಫ್ಯಾಮಿ ಹೆಸರಿನ ಸಹಾಯವಾಣಿಗೆ ಬಂದಿರುವ ಕರೆಗಳನ್ನು ಗಮನಿಸಿದರೆ ಮಹಿಳೆಯರಿಂದ ಪುರುಷರ ಮೇಲೆಯೂ ದೌರ್ಜನ್ಯ ನಡೆಯುತ್ತಿದೆ ಎಂಬುದಕ್ಕೆ ಸಾಕ್ಷಿ.

ದೇಶದ 40 ಸ್ವಯಂಸೇವಾ ಸಂಸ್ಥೆಗಳು ಒಟ್ಟಾಗಿ ಪುರುಷರಿಗಾಗಿ ‘ಸೇವ್‌ ಇಂಡಿಯನ್‌ ಫ್ಯಾಮಿಲಿ’ ಹೆಸರಿನಲ್ಲಿ 8882498498 ಸಂಖ್ಯೆಯ ಸಹಾಯವಾಣಿಯನ್ನು 1 ವರ್ಷದ ಹಿಂದೆ ಸ್ಥಾಪಿಸಿದ್ದವು. ಸ್ಥಾಪಿತವಾದ ಒಂದೇ ವರ್ಷದಲ್ಲಿ 37 ಸಾವಿರ ಕರೆಗಳು ಬಂದಿವೆ. ಈ ಕರೆಗಳಲ್ಲಿ ಪುರುಷರು ತಮ್ಮ ಮೇಲೆ ಮಹಿಳೆಯರು ದೌರ್ಜನ್ಯ ನಡೆಸಿದ್ದಾರೆ ಎಂದು ದೂರಿದ್ದಾರೆ. ವಿಶೇಷವೆಂದರೆ ದಕ್ಷಿಣ ಭಾರತದ ಕರ್ನಾಟಕ ರಾಜ್ಯದಿಂದ ಹೆಚ್ಚು ಕರೆಗಳು ಬಂದಿವೆಯಂತೆ.

ಭಾರತದ ಅತ್ಯಾಚಾರ ತಡೆ ಕಾನೂನಿನಲ್ಲಿ ಮಹಿಳೆಯರ ರಕ್ಷಣೆಗೆ ಸಂಬಂಧಿಸಿದ ಅಂಶಗಳಿವೆಯೇ ಹೊರತು ಪುರುಷರನ್ನು ಅತ್ಯಾಚಾರ ಸಂತ್ರಸ್ತ ಎಂದು ಪರಿಗಣಿಸುವ ನಿಯಮಗಳಿಲ್ಲ ಎಂದು ಸಂಸ್ಥೆಯ ಸದಸ್ಯರೊಬ್ಬರು ಹೇಳಿದ್ದಾರೆ.

ದಕ್ಷಿಣ ಭಾರತದಲ್ಲಿ ಕರ್ನಾಟಕ ನಂ.1
ಈ ಸಹಾಯವಾಣಿಗೆ ನಿತ್ಯ ಸುಮಾರು 110 ಕರೆಗಳು ಬರುತ್ತವೆ. ಇವುಗಳಲ್ಲಿ ಹೆಚ್ಚು ಕರೆಗಳು ಅವಿಭಜಿತ ಮಧ್ಯಪ್ರದೇಶ (ಮ.ಪ್ರ. ಮತ್ತು ಛತ್ತೀಸ್‌ ಗಢ)ದಿಂದ ಬಂದಿವೆ. ಇದನ್ನು ಬಿಟ್ಟು ನಂತರ ಸ್ಥಾನದಲ್ಲಿ ಕರ್ನಾಟಕ ಇದೆ.  ಕರ್ನಾಟಕದಿಂದ ಪುರುಷ ಸಹಾಯವಾಣಿಗೆ ಶೇ.12.34ರಷ್ಟು ಕರೆ ಹೋಗಿವೆ.

ರಾಷ್ಟ್ರರಾಜಧಾನಿಗೆ 3ನೇ ಸ್ಥಾನ
ದೆಹಲಿ ಮೂರನೇ ಸ್ಥಾನದಲ್ಲಿದ್ದು, ಶೇ.11.27 ರಷ್ಟು ಕರೆಗಳು ಬಂದಿವೆ ಎಂದು ಆಂಗ್ಲ ಪತ್ರಿಕೆಯೊಂದು ವರದಿ ಮಾಡಿದೆ. ಇನ್ನು ಮಹಿಳಾ ಸಹಾಯವಾಣಿ ಸಂಖ್ಯೆಯಾದ 181ಕ್ಕೂ ಪುರುಷರ ಮೇಲಿನ ದೌರ್ಜನ್ಯದ ದೂರು ಬರುತ್ತಂತೆ.

Write A Comment