ದಾದ್ರಿ: ಮೊಹಮ್ಮದ್ ಇಕ್ಲಾಖ್ ಎಂಬುವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಪ್ರಮುಖ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಉತ್ತರಪ್ರದೇಶದ ದಾದ್ರಿ ಬಳಿಯ ಬಿಶಾದಾ ಗ್ರಾಮದಲ್ಲಿರುವ ಮುಸ್ಲಿಂ ಕುಟುಂಬವೊಂದು ಮನೆಯಲ್ಲಿ ಗೋಮಾಂಸವಿಟ್ಟುಕೊಂಡಿದ್ದಾರೆ ಎಂಬ ಶಂಕೆ ಹಿನ್ನೆಲೆ ಮನೆಗೆ ನುಗ್ಗಿದ ಉದ್ರಿಕ್ತ ಗುಂಪೊಂದು ಮೊಹಮ್ಮದ್ ಇಕ್ಲಾಖ್ ಹತ್ಯೆ ಮಾಡಿತ್ತು. ಈ ಪ್ರಕರಣ ದೇಶಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಪ್ರಕರಣ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದು ಈ ನಡುವೆ ಉತ್ತರ ಪ್ರದೇಶ ಪೊಲೀಸರು ಶಿವಂ ಮತ್ತು ವಿಶಾಲ್ ಎಂಬ ಪ್ರಮುಖ ಆರೋಪಿಗಳನ್ನು ಬಂಧಿಸಿದ್ದಾರೆ.
ಮೊಹಮ್ಮದ್ ಇಕ್ಲಾಖ್ ಮನೆ ಮೇಲೆ ದಾಳಿ ಮಾಡುವಂತೆ ಪ್ರೇರೇಪಿಸಿದ್ದು ಸ್ಥಳೀಯ ಬಿಜೆಪಿ ಮುಖಂಡನೊಬ್ಬನ ಪುತ್ರ ಎಂದು ಮೃತ ಕುಟುಂಬದವರು ಆರೋಪಿಸಿದ್ದರು. ಈ ಸಂಬಂಧ ತನಿಖೆ ನಡೆಸಿದ ಉತ್ತರ ಪ್ರದೇಶ ಪೊಲೀಸರು ಬಿಜೆಪಿ ಮುಖಂಡನ ಪುತ್ರ ವಿಶಾಲ್ ಹಾಗೂ ಶಿವಂ ಎಂಬುವರನ್ನು ಬಂಧಿಸಿದ್ದಾರೆ.