ರಾಷ್ಟ್ರೀಯ

`ಅಮ್ಮಾ ಮೊಬೈಲ್’ ಜಯಾ ಕೊಡುಗೆ

Pinterest LinkedIn Tumblr

jaya

ಚೆನ್ನೈ,ಸೆ.29: ತಮಿಳುನಾಡಿನ ಸ್ವಯಂ ಸೇವಾ ಸಂಸ್ಥೆಗಳಿಗೆ ಮುಖ್ಯಮಂತ್ರಿ ಜಯಲಲಿತಾ ಭರ್ಜರಿ ಕೊಡುಗೆ ಘೋಷಿಸಿದ್ದಾರೆ.

ಅಮ್ಮಾ ಕ್ಯಾಂಟೀನ್, ಅಮ್ಮಾ ಫಾರ್ಮಸಿ, ಅಮ್ಮಾ ಸಿಮೆಂಟ್, ಅಮ್ಮಾ ಮಿನರಲ್ ವಾಟರ್… ಹೀಗೆ ಅನೇಕ ಸವಲತ್ತುಗಳನ್ನು ಉಚಿತವಾಗಿ, ಅತ್ಯಂತ ಕಡಿಮೆ ದರದಲ್ಲಿ ನೀಡುವ ಯೋಜನೆಗಳನ್ನು ಜಾರಿ ಮಾಡಿರುವ ಜಯಲಲಿತಾ ಇಂದು `ಅಮ್ಮಾ ಮೊಬೈಲ್’ ಯೋಜನೆ ಘೋಷಿಸಿದ್ದಾರೆ.

ಇಂದು ನಡೆದ ವಿಧಾನಸಭಾ ಕಲಾಪದಲ್ಲಿ ಜಯಲಲಿತಾ ಈ ಭರ್ಜರಿ ಕೊಡುಗೆಯನ್ನು ಘೋಷಿಸಿದ್ದಾರೆ. ರಾಜ್ಯದಲ್ಲಿ 6.8 ಲಕ್ಷ ಸ್ವಯಂ ಸೇವಾ ಸಂಸ್ಥೆಗಳಿದ್ದು, ಒಟ್ಟು 92 ಲಕ್ಷ ಮಂದಿ ಸದಸ್ಯರಿದ್ದಾರೆ. ಪ್ರತಿ ಸ್ವಯಂಸೇವಾ ಸಂಘಕ್ಕೆ ಉಚಿತವಾಗಿ ಮೊಬೈಲ್ ನೀಡುವುದಾಗಿ ಜಯಲಲಿತಾ ಹೇಳಿದ್ದಾರೆ.

ಅಮ್ಮಾ ಸವಲತ್ತುಗಳ ಸರಣಿಗೆ ಇದೀಗ ಮೊಬೈಲ್ ಸೇವೆಯೂ ಕೂಡಾ ಸೇರಿದಂತಾಗಿದೆ. ಸದರಿ ಯೋಜನೆಯ ಮೂಲಕ ಸ್ವಯಂ ಸೇವಾ ಸಂಸ್ಥೆಗಳಿಗೆ ಅನುಕೂಲ ಕಲ್ಪಿಸುವುದು ಯೋಜನೆಯ ಪ್ರಮುಖ ಉದ್ದೇಶವಾಗಿದೆ ಎಂದು ಜಯಲಲಿತಾ ಅವರು ತಿಳಿಸಿದ್ದಾರೆ. ಜಯಲಲಿತಾ ಅವರು ಈ ಯೋಜನೆಯನ್ನು ಘೋಷಿಸುತ್ತಿದ್ದಂತೆ ಆಡಳಿತ ಪಕ್ಷದ ಸದಸ್ಯರು ಮೇಜು ಕುಟ್ಟುವ ಮೂಲಕ ಸ್ವಾಗತಿಸಿದರು.

Write A Comment