ರಾಷ್ಟ್ರೀಯ

ಕಾರ್ಯಭಾರ ಮುಗಿದ ಮೇಲೂ ವಿದೇಶದಲ್ಲೇ ಇದ್ದರೆ ಅಧಿಕಾರಿಗಳ ಕೆಲಸಕ್ಕೆ ಕುತ್ತು

Pinterest LinkedIn Tumblr

parliamentನವದೆಹಲಿ: ಸರ್ಕಾರಿ ಕೆಲಸದ ನಿಮಿತ್ತ ವಿದೇಶಗಳಿಗೆ ತೆರಳಿ, ಕಾರ್ಯಭಾರ ಮುಕ್ತಾಯಗೊಂಡ ನಂತರವೂ ವಿದೇಶದಲ್ಲೇ ಮೋಜು ಮಾಡುವ ಅಧಿಕಾರಿಗಳಿಗೆ ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿದೆ.

ಕೇಂದ್ರ ಸರ್ಕಾರ ಹೊಸದಾಗಿ ರೂಪಿಸಿರುವ ನಿಯಮದ ಪ್ರಕಾರ ಐಎಎಸ್, ಐಪಿಎಸ್ ಅಧಿಕಾರಿಗಳು ಕಾರ್ಯಭಾರ ಮುಕ್ತಾಯಗೊಂಡ ನಂತರವೂ ಅನುಮತಿ ಇಲ್ಲದೇ ವಿದೇಶದಲ್ಲೇ ಇದ್ದರೆ, ಅಂಥಹ ಅಧಿಕಾರಿಗಳು ಕೆಲಸ ಕಳೆದುಕೊಳ್ಳಲಿದ್ದಾರೆ.

ವಿದೇಶಕ್ಕೆ ತೆರಳುವ ಕೆಲವು ಐಎಎಸ್, ಐಪಿಎಸ್, ಐಎಫ್ಎಸ್ ಅಧಿಕಾರಿಗಳು, ಕೆಲಸ ಮುಕ್ತಾಯಗೊಂಡ ನಂತರವೂ ವಿದೇಶದಿಂದ ವಾಪಸ್ಸಾಗದೇ ಅನಧಿಕೃತವಾಗಿ ರಜೆ ಹಾಕುತ್ತಿರುವುದು ಕೇಂದ್ರ ಸರ್ಕಾರದ ಗಮನಕ್ಕೆ ಬಂದಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ನಿಯಮಗಳ ಪ್ರಕಾರ ಅಧಿಕಾರಿಗಳ ಅಧ್ಯಯನ ಪ್ರವಾಸ, ವಿದೇಶದಲ್ಲಿ ಕಾರ್ಯಭಾರದ ಅವಧಿಗೆ ಒಂದು ತಿಂಗಳ ಕಾಲಾವಕಾಶ ನೀಡಲಾಗುತ್ತದೆ. ನಿಗದಿಗಿಂತಲೂ ಹೆಚ್ಚು ಕಾಲ ವಿದೇಶದಲ್ಲಿರಬೇಕಾದರೆ ಅವರು ಸರ್ಕಾರದಿಂದ ಅನುಮತಿ ಪಡೆಯಬೇಕಾಗುತ್ತದೆ. ಅನುಮತಿ ಇಲ್ಲದೇ ಅನಧಿಕೃತ ರಜೆ ಹಾಕಿ ಮೋಜು ಮಾಡಲು ತೊಡಗಿದರೆ ಅಂಥವರು ಕೆಲಸ ಕಳೆದುಕೊಳ್ಳುವುದು ನಿಶ್ಚಿತವಾಗಿದೆ.

ಅಧಿಕಾರಿಗಳ ವಿದೇಶ ಪ್ರವಾಸಗಳ ಬಗ್ಗೆ ರಾಜ್ಯ ಸರ್ಕಾರ ಕೇಂದ್ರಕ್ಕೆ ಮಾಹಿತಿ ನೀಡಬೇಕು, ವಿದೇಶದಿಂದ ವಾಪಸ್ಸಾಗುವುದು ತಡವಾದರೆ ಅಧಿಕಾರಿ ರಾಜ್ಯ ಸರ್ಕಾರಕ್ಕೆ ಸೂಕ್ತ ಕಾರಣ ನೀಡಬೇಕು, ಒಂದು ವೇಳೆ ಈ ನಿಯಮವನ್ನು ಪಾಕಿಸಲು ರಾಜ್ಯ ಸರ್ಕಾರ ಈ ಸೂಚನೆಗಳನ್ನು ಅನುಸರಿಸಲು ವಿಫಲವಾದರೆ, ಕೇಂದ್ರ ಸರ್ಕಾರ ನೇರವಾಗಿ ನಿಯಮ ಉಲ್ಲಂಗಿಸಿದ ಅಧಿಕಾರಿಯನ್ನು ವಜಾಗೊಳಿಸಲಿದೆ. ಹೊಸ ನಿಯಮಗಳ ಬಗ್ಗೆ ಕೇಂದ್ರ ಸರ್ಕಾರ ಎಲ್ಲಾ ರಾಜ್ಯಗಳ ಕಾರ್ಯದರ್ಶಿಗಳಿಗೆ ಮಾಹಿತಿ ನೀಡಿದೆ.

Write A Comment