ಉಳ್ಳಾಲ. ಸೆ.01 : ಅಲ್ ಮದೀನಾ ವಿದ್ಯಾಸಂಸ್ಥೆಯ ಪ್ರಥಮ ಸನದುದಾನ ಸಮ್ಮೇಳನದ ಪ್ರಯುಕ್ತ ಎಸ್ಸೆಸ್ಸೆಫ್ ಮಂಜನಾಡಿ ಸೆಕ್ಟರ್ ವತಿಯಿಂದ ಸೆಕ್ಷರ್ ಅಧ್ಯಕ್ಷ ಇಬ್ರಾಹಿಂ ಅಹ್ಸನಿರವರ ನೇತೃತ್ವದಲ್ಲಿ ಹೊರೆಕಾಣಿಕೆ ನಡೆಯಿತು.
ಮಂಜನಾಡಿ ಮುದರ್ರಿಸ್ ಅಹಮ್ಮದ್ ಬಾಖವಿಯವರ ನೇತೃತ್ವದಲ್ಲಿ ಮಂಜನಾಡಿ ದರ್ಗಾ ಝಿಯಾರತ್ ನಂತರ ಕಾರ್ಯಕರ್ತರ ಬೈಕ್ ರ್‍ಯಾಲಿ ಮುಖಾಂತರ ಅಲ್ ಮದೀನಾದ ಶಿಲ್ಪಿ ಅಬ್ಬಾಸ್ ಉಸ್ತಾದ್‌ರವರಿಗೆ ಹೊರೆಕಾಣಿಕೆಯನ್ನು ಹಸ್ತಾಂತರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಸೆಕ್ಟರ್ ಪ್ರ.ಕಾರ್ಯದರ್ಶಿ ಇಬ್ರಾಹಿಂ ಪೂಡಲ್, ಅಬ್ದುಲ್ ಅಝೀಝ್ ಮದನಿ ನೆಕ್ಕರೆ, ಹನೀಸ್ ಕೊಲ್ಲರಕೋಡಿ, ಹಮೀದ್ ಬಂಡಸಾಲೆ, ಹಮೀದ್ ಕೊಲ್ಲರಕೋಡಿ, ಶರೀಫ್ ಕಲ್ಕಟ್ಟ, ಅಬ್ದುಲ್ ಮಜೀದ್ ಮಂಜನಾಡಿ, ದಿಲ್‌ಶಾದ್ ಮೋರ್ಲ, ಮುನೀರ್ ಕಲ್ಮಿಂಜ ಉಪಸ್ಥಿತರಿದ್ದರು.
