ರಾಷ್ಟ್ರೀಯ

ಪತ್ನಿಯನ್ನೇ ಆಕೆಯ ಪ್ರಿಯಕರನಿಗೆ ಮದುವೆ ಮಾಡಿಸಿದ ಪತಿ !

Pinterest LinkedIn Tumblr

marriageಮದುವೆಯಾದ ನಂತರ ಪತ್ನಿ ಬೇರೊಬ್ಬನ ಜತೆ ಸಂಬಂಧ ಹೊಂದಿದ್ದಾಳೆ ಎಂದು ತಿಳಿದರೆ ಪತಿಯಾದವನು ಪತ್ನಿಯನ್ನೂ ಅಥವಾ ಆಕೆಯ ಪ್ರಿಯತಮನನ್ನೋ ಮುಗಿಸಲು ಮುಂದಾದ ಹಲವಾರು ಪ್ರಕರಣಗಳ ಕುರಿತು ಕೇಳಿದ್ದೀರಿ. ಆದರೆ ಇಲ್ಲೊಬ್ಬ ಪತಿ ಮಹಾಶಯ ಬೇರೊಬ್ಬನ ಸಂಗ ಬಯಸಿದ ಪತ್ನಿಯನ್ನು ಆತನೊಂದಿಗೇ ಮದುವೆ ಮಾಡಿಕೊಟ್ಟು ‘ಉದಾರತೆ’ ಮೆರೆದಿದ್ದಾನೆ.

ಹೌದು. ಉತ್ತರಪ್ರದೇಶದ ಫೈಸಾಬಾದ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು ಇಲ್ಲಿನ ಬಿಕಾಪುರ್ ಹಳ್ಳಿಯ ಹುಡುಗಿ ಚಂಡಾಹಾಗೂ ಅದೇ ಹಳ್ಳಿಯ ಯುವಕ ಸೂರಜ್ ಇಬ್ಬರೂ ಒಬ್ಬನ್ನೊಬ್ಬರು ಮನಸಾರೆ ಪ್ರೀತಿಸುತ್ತಿದ್ದರು. ಆದರೆ ಈ ನಡುವೆ  ಪೋಷಕರು ಪಲಿಪೂರಬ್ ನ ಪೋಲ್ ಚಂದ್ ಎಂಬಾತನಿಗೆ ಆಕೆಯನ್ನು ಕೊಟ್ಟು ವಿವಾಹ ಮಾಡಿದ್ದರು.ಪತ್ನಿಯನ್ನು ಸಂತಸದಿಂದ ಕರೆದೊಯ್ದ ಪೂಲ್‘ಚಂದ್ ತನ್ನ ಮನೆಯಲ್ಲೇ ಹೆಂಡತಿಯನ್ನ ಬಿಟ್ಟು ಕೆಲಸದ ನಿಮಿತ್ತ ಜಲಂದರ್ ಗೆ ತೆರಳಿದ್ದ. ಈ ಸಮಯದಲ್ಲಿ ಮತ್ತೆ ಒಂದಾದ ಪ್ರೇಮಿಗಳು ಸರಸ ಸಲ್ಲಾಪ ನಡೆಸಿದ್ದಾರೆ.

ಊರಿಗೆ ಬಂದ ಪತಿ ಮಹಾಶಯನಿಗೆ ಈ ಪತ್ನಿ ತನ್ನ ‘ಪ್ರೀತಿ’ಯ ವಿಚಾರ ತಿಳಿಸಿದ್ದು, ವಿಷಯ ಕೇಳಿದ ಪೂಲ್‘ಚಂದ್ ಮೊದಲಿಗೆ ಆಕೊಶಗೊಂದಿದ್ದು ನಂತರ ಚಂಡಾಳ ಹಳ್ಳಿಗೆ ತೆರಳಿದ ಪೋಲ್ ಚಂದ್ ಪಂಚಾಯ್ತಿ ಸೇರಿಸಿ ತನ್ನ ಪತ್ನಿಯ ಪ್ರೇಮದ ಬಗ್ಗೆ ತಿಳಿಸಿ, ಅವರಿಬ್ಬರಿಗೂ ವಿವಾಹ ಮಾಡುವಂತೆ ಮನವಿ ಮಾಡಿದ್ದಾನೆ.

ಪೋಲ್ ಚಂದ್ ಹೃದಯ ವೈಶಾಲ್ಯತೆಯನ್ನ ಮೆಚ್ಚಿದ ಪಂಚಾಯ್ತಿ ಮುಖಂಡರು, ಸೂರಜ್ ಜೊತೆ ಚಂಡಾಳ ವಿವಾಹ ನೆರವೇರಿಸಿದ್ದು ಈತನ ಗುಣದ ಕುರಿತಾಗಿ ಭಾರೀ ಪ್ರಶಂಸೆ ವ್ಯಕ್ತವಾಗಿದೆ.

Write A Comment