ರಾಷ್ಟ್ರೀಯ

ಅನಕ್ಷರಸ್ಥ ದಂಪತಿ ಮನೆಗೆ ವಿದ್ಯುತ್ ಸಂಪರ್ಕವೇ ಇಲ್ಲ, ಆದರೂ ಬಿಲ್ ನೀಡಿದ ಮಂಡಳಿ!

Pinterest LinkedIn Tumblr

power-pollರಾಮನಾಥಪುರಂ(ತಮಿಳುನಾಡು): ಇಲ್ಲಿನ ವೃದ್ಧ ಅನಕ್ಷರಸ್ಥ ದಂಪತಿ ಮನೆಗೆ ವಿದ್ಯುತ್ ಸಂಪರ್ಕವೇ ಇಲ್ಲ. ಆದರೂ, ಕಳೆದ ಮೂರು ತಿಂಗಳಿನಿಂದ ವಿದ್ಯುತ್ ಮಂಡಳಿ ಬಿಲ್ ನೀಡಿದ್ದು, ಅದರ ಅರಿವೆ ಇಲ್ಲದ ದಂಪತಿಗಳು ಬಿಲ್ ಪಾವತಿಸಿದ್ದಾರೆ.

ದಂಪತಿ ವಿದ್ಯುತ್ ಸಂಪರ್ಕ ಪಡೆಯಲು ಅರ್ಜಿ ಸಲ್ಲಿಸಿದ್ದರು. ಸಂಪರ್ಕ ಕಲ್ಪಿಸಿದ ನಂತರ ಹಣ ಪಾವತಿಸಲು 6 ಸಾವಿರ ರು. ಒಟ್ಟು ಮಾಡಿಕೊಂಡಿದ್ದರು. ವಿದ್ಯುತ್ ಮಂಡಳಿ ಸಿಬ್ಬಂದಿ ಬಂದು ಮೀಟರ್ ಬೋರ್ಡ್ ಹಾಕಿ, ಸಮೀಪದಲ್ಲಿ ವಿದ್ಯುತ್ ಕಂಬ ಹಾಕಿದ ಕೂಡಲೇ, ವಿದ್ಯುತ್ ಸಂಪರ್ಕ ಕಲ್ಪಿಸುವುದಾಗಿ ಹೇಳಿ ಹೋಗಿದ್ದರು.

ನಂತರ ಏಪ್ರಿಲ್‌ ಹಾಗೂ ಮೇ ತಿಂಗಳಲ್ಲಿ ಕನಿಷ್ಠ ವಿದ್ಯುತ್ ಬಳಕೆ ಶುಲ್ಕ 86 ರೂ.ಬಿಲ್ ಬಂದಿತ್ತು. ಮೀಟರ್ ಹಾಕಿದ ಶುಲ್ಕ ಇರಬಹುದು, ಎಂದು ಭಾವಿಸಿದ ದಂಪತಿ ಅದನ್ನು ಪಾವತಿಸಿದ್ದರು. ಮತ್ತೆ ಜೂನ್‌ನಲ್ಲಿ 110 ರೂ. ಬಿಲ್ ಬಂದಿದ್ದನ್ನೂ ಪಾವತಿಸಿದ್ದಾರೆ. ಈ ವಿಷಯ ತಿಳಿದ ನೆರೆಹೊರೆಯವರು ಅವರಿಗೆ ಸಹಕರಿಸಿದ್ದು, ವಿದ್ಯುತ್ ಮಂಡಳಿಗೆ ಅರ್ಜಿ ಹಾಕಿ, ಆದ ಪ್ರಮಾದದ ಬಗ್ಗೆ ಮಂಡಳಿಗೆ ಅರ್ಜಿ ಬರೆದು ತಿಳಿಸಿದ್ದಾರೆ. ತಪ್ಪನ್ನು ಒಪ್ಪಿಕೊಂಡಿರುವ ಮಂಡಳಿ, ಸರಿಪಡಿಸಿಕೊಳ್ಳುವುದಾಗಿ ದಂಪತಿಗೆ ಭರವಸೆ ನೀಡಿದೆ.

Write A Comment