ರಾಷ್ಟ್ರೀಯ

ಗೋವಾ ಬೀಚಿನಲ್ಲಿ ಮೊಸಳೆ; ವೈರಲ್ ಆದ ಫೋಟೋಗಳು

Pinterest LinkedIn Tumblr

crocodileಗೋವಾ ಬೀಚಿನಲ್ಲಿ ಕಂಡುಬಂದ ಮೊಸಳೆ (ಚಿತ್ರಕೃಪೆ: ನೀಲೇಶ್ ಬಹ್ಕರ್ ಫೇಸ್ಬುಕ್ ಪುಟ)

ಗೋವಾ ಬೀಚಿನಲ್ಲಿ ಕಂಡುಬಂದ ಮೊಸಳೆಯ ಚಿತ್ರದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

ಗೋವಾ ನಿವಾಸಿ ನೀಲೇಶ್ ಬಹ್ಕರ್ ಎಂಬುವವರು ಗೋವಾದ ಮಾರ್ಜಿಂ ಬೀಚಿನಲ್ಲಿ ಈ ಮೊಸಳೆಯ ಫೋಟೋ ತೆಗೆದು ಗುರುವಾರ ಫೇಸ್ಬುಕ್ ನಲ್ಲಿ ಹಾಕಿದ್ದರೆ. ತಕ್ಷಣವೇ ಈ ಫೋಟೋಗಳು ವೈರಲ್ ಆಗಿವೆ.

ಇದನ್ನು ಗೋವಾದ ಅಧಿಕಾರಿಗಳು ಧೃಢೀಕರಿಸಿದ್ದರೆ. ಇದು ಬೀಚಿನ ಹತ್ತಿರದ ಚಪೋರಾ ನದಿಯ ಮೊಸಳೆಯಿರಬೇಕು ಅದು ತಪ್ಪಿ ಅರಬ್ಬೀ ಸಮುದ್ರಕ್ಕೆ ನಡೆದು ಬಂದಿರುವ ಸಾಧ್ಯತೆಯಿದೆ ಎಂದು ಅವರು ತಿಳಿಸಿದ್ದಾರೆ.

ಅಂಡಮಾನ್ ನಿಕೋಬಾರಿನ ಬೀಚುಗಳಲ್ಲಿ ಮೊಸಳೆಗಳಿರುವ ತಿಳಿದ ಸಂಗತಿಯೇ! ಆದರೆ ಗೋವಾ ಬೀಚಿನಲ್ಲೂ ಇದು ಕಂಡುಬಂದಿರುವುದು ಪ್ರವಾಸಿಗರಿಗೆ ಆತಂಕ ಸೃಷ್ಟಿಸಿರುವುದಂತೂ ನಿಜ!

Write A Comment