ಕರ್ನಾಟಕ

ಜೀವಕ್ಕೆ ಕಂಟಕ ತಂದ ಹುಚ್ಚು ಅಭಿಮಾನ; ತನ್ನ ಕೈ ಮೇಲೆ ನಟ ದುನಿಯಾ ವಿಜಿ ಹಚ್ಚೆ ಹಾಕಿಸಿಕೊಂಡ ಅಭಿಮಾನಿಯೊಬ್ಬನಿಗೆ ಬಂದೊದಗಿದೆ ಚರ್ಮದ ಕ್ಯಾನ್ಸರ್..!

Pinterest LinkedIn Tumblr

viji abhimani

ಕೋಲಾರ: ಸಿನಿಮಾ ಎಂದರೆ ಕನಸು, ಅಭಿಮಾನಿಗಳು ತಮ್ಮ ನೆಚ್ಚಿನ ನಟರ ಸಿನಿಮಾಗಳನ್ನು ಮೂರ್ನಾಲ್ಕು ಬಾರಿ ನೋಡುವುದು, ಕಟೌಟ್‍ಗಳಿಗೆ ಹಾಲು ಅಭಿಷೇಕ ಮಾಡುವುದು, ಇನ್ನಿತರ ರೀತಿಯಲ್ಲಿ ಅಭಿಮಾನ ವ್ಯಕ್ತಪಡಿಸೋದನ್ನು ನೋಡಿದ್ದೇವೆ. ಆದರೆ ದುನಿಯಾ ವಿಜಿ ಹುಚ್ಚು ಅಭಿಮಾನಿಯೊಬ್ಬ ತನ್ನ ಕೈ ಮೇಲೆ ಹಚ್ಚೆ ಹಾಕಿಸಿಕೊಳ್ಳುವ ಮೂಲಕ ತನ್ನ ಬದುಕಿಗೆ ಕಂಟಕ ತಂದುಕೊಂಡಿದ್ದಾನೆ.

ಅಭಿಮಾನಿಗಳ ಅಭಿಮಾನ ಎಂದರೆ ಹಾಗೆ. ತಮ್ಮ ನೆಚ್ಚಿನ ನಾಯಕರಿಗೆ ಏನು ಮಾಡಲೂ ಸಿದ್ಧರಿರುತ್ತಾರೆ. ಅದೇ ರೀತಿ ಕೋಲಾರ ಜಿಲ್ಲೆಯ ಬಂಗಾರಪೇಟೆಯ ಗೌತಮ್ ನಗರ ನಿವಾಸಿ ಮಂಜುನಾಥ್, ಅಲಿಯಾಸ್ ದುನಿಯಾ ಮಂಜು ದುನಿಯಾ ವಿಜಿ ಅವರ ಸಿನಿಮಾಗಳಿಂದ ಪ್ರಭಾವಿತನಾಗಿ ತನ್ನ ಬಲಗೈ ಮೇಲೆ ದುನಿಯಾ ಅಂತ ಹಚ್ಚೆ ಹಾಕಿಸಿಕೊಂಡಿದ್ದಾನೆ. ಈ ಅಭಿಮಾನವೀಗ ದುರಂತವಾಗಿ ಚರ್ಮ ಕ್ಯಾನ್ಸರ್ ಆಗಿ ಮಾರ್ಪಟ್ಟಿದೆ.

ಇನ್ನೂ ಈತನ ಅಂಧಾಭಿಮಾನ ಎಷ್ಟರ ಮಟ್ಟಿಗೆ ಇತ್ತು ಎಂದರೆ, ನಟ ದುನಿಯಾ ವಿಜಿ ಜೊತೆಗೆ ಮಾತನಾಡಿದ ನಂತರವೇ ವೈದ್ಯರ ಬಳಿ ಹೋಗಿದ್ದಾನೆ. ರಕ್ತ ಹೆಪ್ಪುಗಟ್ಟಿ ಸ್ಕಿನ್ ಅಲರ್ಜಿ ಆಗಿದ್ದು ಕೈಯನ್ನು ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಳ್ಳಬೇಕು ಇಲ್ಲದಿದ್ದರೆ ಜೀವಕ್ಕೆ ಅಪಾಯ ಎಂದು ವೈದ್ಯರು ಹೇಳಿದ್ದಾರೆ.

ಅಭಿಮಾನ ಇರಬೇಕು ನಿಜ. ಆದರೆ ಯಾವುದೂ ಅತಿರೇಕವಾಗಬಾರದು ಇಂತಹ ಹುಚ್ಚು ಹಚ್ಚಿಕೊಳ್ಳುವುದಕ್ಕೂ ಮುನ್ನ ಜೀವನದ ಜವಾಬ್ದಾರಿ ಜೊತೆಗೆ ಮನೆಯವರಿಗೆ ಎಷ್ಟು ತೊಂದರೆ ಆಗುತ್ತದೆ ಎನ್ನುವುದನ್ನು ಅರಿತುಕೊಳ್ಳಬೇಕು.

Write A Comment