ಕರ್ನಾಟಕ

ರಿಯಾಲಿಟಿ ಶೋಗಳಲ್ಲಿ ನಟರು ಭಾಗವಹಿಸಿದರೆ ಧರಣಿ : ನಿರ್ಮಾಪಕರ ಎಚ್ಚರ

Pinterest LinkedIn Tumblr

Reality-Show

ಬೆಂಗಳೂರು, ಮೇ 31-ಇನ್ನು ಮುಂದೆ ಯಾವುದೇ ಸ್ಟಾರ್ ನಟರು ಟಿವಿ ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿದರೆ ಚಲನಚಿತ್ರ ವಾಣಿಜ್ಯ ಮಂಡಳಿ ಮುಂದೆ ಧರಣಿ ನಡೆಸುವುದಾಗಿ ನಿರ್ಮಾಪಕ ಜಯಸಿಂಹ ಮುಸುರಿ ತಿಳಿಸಿದ್ದಾರೆ. ಗಾಂಧಿನಗರದಲ್ಲಿರುವ ಬಸಂತ್ ರೆಸಿಡೆನ್ಸಿಯಲ್ಲಿ ಇಂದು ಹಮ್ಮಿಕೊಳ್ಳಲಾಗಿದ್ದ

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಪದಾಧಿಕಾರಿಗಳು ಹಾಗೂ ನಿರ್ಮಾಪಕರ  ಮಹತ್ವದ ಸಭೆಯಲ್ಲಿ ಪಾಲ್ಗೊಂಡ ನಂತರ ಅವರು ಈ ಸಂಜೆಯೊಂದಿಗೆ ಮಾತನಾಡಿದರು. ಸಭೆಯಲ್ಲಿ ಇನ್ನು ಮುಂದೆ ಯಾವುದೇ ಸ್ಟಾರ್ ನಟರು ಟಿವಿ ರಿಯಾಲಿಟಿ ಶೋಗಳಲ್ಲಿ ಭಾಗವಹಿಸಬಾರದು ಎಂಬ ಕುರಿತು ಗಹನವಾದ ಚರ್ಚೆ ನಡೆಸಲಾಗಿದೆ.  ಒಂದು ವೇಳೆ  ಇನ್ನು ಮುಂದೆ ಯಾವುದೇ ನಟರು ಇಂತಹ ಶೋಗಳಲ್ಲಿ ಭಾಗವಹಿಸಿದರೆ ಇತರೆ ನಿರ್ಮಾಪಕರೊಂದಿಗೆ ಸೇರಿ ಚಲನಚಿತ್ರ ವಾಣಿಜ್ಯ ಮಂಡಳಿ ಮುಂದೆ ಧರಣಿ ಮಾಡಲು ನಿರ್ಧರಿಸಿದ್ದೇವೆ ಎಂದು ಹೇಳಿದರು.

ಈ ಹಿಂದೆ ಕೂಡ ಇಂತಹುದೇ ನಿರ್ಧಾರ ಕೈಗೊಂಡಾಗ ವಿವಾದ ಉಂಟಾಗಿತ್ತು. ಈಗ ಮತ್ತೆ ಇದು ಭುಗಿಲೇಳುವ ಸಾಧ್ಯತೆ ಇದೆ.  ಇಂದಿನ ಸಭೆಯಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಥಾಮಸ್ ಡಿಸೋಜಾ, ನಿರ್ಮಾಪಕರ ಮಂಡಳಿ ಕಾರ್ಯದರ್ಶಿ ಭಾಮಾ ಹರೀಶ್ ಹಾಗೂ ಪದಾಧಿಕಾರಿಗಳು ಪಾಲ್ಗೊಂಡು ವಿವಿಧ ಸಮಸ್ಯೆಗಳ ಕುರಿತು ಸುದೀರ್ಘ ಚರ್ಚೆ ನಡೆಸಿದರು. ಒಂದು ಹಂತದಲ್ಲಿ ಸಭೆಯಲ್ಲಿ ಗೊಂದಲ ಉಂಟಾಗುವ ಸನ್ನಿವೇಶ ಎದುರಾದರೂ  ಇಂದು ತೆಗೆದುಕೊಂಡ ಕೆಲವು ನಿರ್ಧಾರ ನಿರ್ಮಾಪಕರಿಗೆ ಅನುಕೂಲವಾಗುವಂತಿದೆ. ಇನ್ನು ಮುಂದೆ ಚಿತ್ರಮಂದಿರದ ಮಾಲೀಕರು ಕನ್ನಡ ಚಿತ್ರಗಳಿಗೆ ಪರ್ಸೆಂಟೇಜ್ ರೂಪದಲ್ಲಿ ಚಿತ್ರಗಳನ್ನು ಬಿಡುಗಡೆ ಮಾಡಬೇಕು. ಸ್ಟಾರ್ ನಟರು, ಹೊಸ ನಟರುಗಳ ರೇಟಿಗೆ ತಕ್ಕಂತೆ ಪರ್ಸಂಟೇಜ್ ರೂಪದಲ್ಲಿ ಹಂಚಿಕೆದಾರರು ನಿರ್ಮಾಪಕರಿಗೆ ನೀಡಬೇಕು, ಸ್ಟಾರ್ ನಟರು ರಿಯಾಲಿಟಿ ಶೋಗಳಲ್ಲಿ ಭಾಗವಹಿಸಬಾರದು  ಎಂಬುದು ಸೇರಿದಂತೆ ಹಲವು ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳಲಾಯಿತು.

Write A Comment