ಉಪ್ಪಳ,ಮಾರ್ಚ್.30 : ಕೊಂಡೆವೂರಿನಲ್ಲಿ ನಡೆಯುತ್ತಿರುವ ಮಹಾಯಾಗದ ಸಮಾರೋಪ ಸಭೆಯಲ್ಲಿ ಶ್ರೀಮದ್ ಎಡನೀರು ಮಠದ ಪರಮ ಪೂಜ್ಯ ಶ್ರೀ ಶ್ರೀ ಕೇಶವಾನಂದ ಭಾರತೀ ಶ್ರೀ ಪಾದಂಗಳವರು ಈ ಧರ್ಮಭೂಮಿಯಲ್ಲಿ ಸುಲಭ ಸಾಧ್ಯವಲ್ಲದ ಈ ಯಾಗ ಧೂಮ ಆಧ್ಯಾತ್ಮಿಕ ಧೂಮವಾಗಿ ಪ್ರಚುರ ವಾಗಿ ದೇಶದೆಲ್ಲೆಡೆ ಸುಖ ಸಮೃದ್ಧಿ ಉಂಟಾಗಲೆಂದು ತಮ್ಮ ಆರ್ಶಿರ್ವಚನದಲ್ಲಿ ನುಡಿದರು. ಮಾಣಿಲ ಶ್ರೀಗಳು ಯಾಗದ ಸದುದ್ದೇಶ ಸಾರ್ಥಕತೆ ಆಗಬೇಕು ಎಂದರು.
ಕೊಂಡೆಯೂರು ಶ್ರೀಗಳು ದೇವರ ಆಂಗೈಯಲ್ಲಿರುವ ನಾವು ಯಾವುದೇ ಭಯಪಡದೇ ಒಳ್ಳೆ ಕೆಲಸ ಹೆಚ್ಚುಮಾಡಿ ಮುಂದಿನ ಪೀಳಿಗೆಗೆ ಕೊಡುವಂತಾಗಬೇಕು ಎಂದರು ಮುಖ್ಯ ಅಥಿತಿಗಳಾಗಿ ಆಗಮಿಸಿದ ಅರ್ಥಿಕ ತಜ್ಞರಾದ ಮಾಜಿ ಕೇಂದ್ರ ಮಂತ್ರಿಗಳಾದ ಡಾ.ಸುಬ್ರಹ್ಮಣ್ಯ ಸ್ವಾಮಿ ಯವರು ಮಾತನಾಡುತ್ತಾ ಎಲ್ಲಾ ರಂಗಗಳಲ್ಲಿ ಸಂಶೋಧನೆ ಮಾಡಿದ ಭಾರತ ಅನ್ಯ ಆಕ್ರಮಣಗಳಿಂದ ವಿಚಲಿತವಾಗದೇ ಇರಲು ಮಠ ಮಠಾಧೀಶರುಗಳು ಕಾರಣ. ಯುನೆಸ್ಕೋ ಪ್ರಕಾರ ಪ್ರಪಂಚದಲ್ಲಿದ್ದ 46 ನಾಗರೀಕತೆಗಳಲ್ಲಿ ಇಂದು ಉಳಿದ ಏಕೈಕ ಹಿಂದೂ ನಾಗರೀಕತೆಯಾಗಿದೆ. ದೇಶದ ಎಲ್ಲಾ ಭಾಷೇಯ ಮುಖ್ಯಭಾಗ ಸಂಸ್ಕತ ಭಾಷೆಯಾಗಿದೆ. ಬೇರೆ ಭಾಷೆಯ ಜೊತೆ ಸಂಸ್ಕ್ರತವನ್ನು ಕಡ್ಡಾಯಗೊಳಿಸಬೇಕು ಎಂದು ತಮ್ಮ ಉದ್ಫೋದಕ ಭಾಷಣದಲ್ಲಿ ನುಡಿದರು.
ಅನೇಕ ಶಿಕ್ಷಣ ಸಂಸ್ಥೆಗಳನ್ನು ಉಳಿಸಿ ಬೆಳೆಸಿ ಸಾಧನೆ ಮಾಡಿದ ಬೆಂಗಳೂರು ಆಕ್ಸಫರ್ಡ್ ಶಿಕ್ಷಣ ಸಂಸ್ಥೆಗಳ ಸಮೂಹದ ಶ್ರೀ ನರಸ ರಾಜು ಮತ್ತು ಜೌದ್ಯಮಿಕ ರಂಗದಲ್ಲಿ ವಿಶೇಷ ಸಾಧನೆ ಮಾಡಿ ಪ್ರಸ್ತುತ ರಷ್ಯಾದಲ್ಲಿ ಜೌದ್ಯಮಿಕ ಸಂಸ್ಥೆ ನಡೆಸುತ್ತಿರುವ ಎಡಕ್ಕಾನ ಮಹಾಬಲೇಶ್ವರ ಭಟ್ ಇವರಿಗೆ ಶಾಲು ಹೊದಿಸಿ ಸ್ಮರಣಿಕೆ , ಸನ್ಮಾನ ಪತ್ರ ನೀಡಿ ಸನ್ಮಾನಿಸಲಾಯಿತು. ಈ ಸಭೆಯ ಸ್ವಾಗತವನ್ನು ಡಾ.ಆಶಾಜ್ಯೋತಿ ರೈ ಯವರು ಮಾಡಿ ಹರೀಶ್ ವಂದಿಸಿದರು. ಕದ್ರಿ ನವನೀತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಶ್ರೀ ಪಾದಂಗಳವರಿಂದ ಸುಶ್ರಾವ್ಯ ” ಭಕ್ತಿ ಸಂಗೀತ ಕಾರ್ಯಕ್ರಮ ಹಾಗೂ ಕೋಝಿಕ್ಕೋಡಿನ ಎನ್.ಶ್ರೀಕಾಂತ್ ಮತ್ತು ಅಶ್ವಿನಿ ಶ್ರೀಕಾಂತ್ ಬಳಗದವರಿಂದ ಸನ್ಮಥ ನೃತ್ಯ ರೂಪಕ ನಡೆಯಿತು.















