ಉಡುಪಿ: ಸೋಮವಾರ ವಿಶ್ವಹಿಂದೂ ಪರಿಷತ್ ವತಿಯಿಂದ ಉಡುಪಿಯಲ್ಲಿ ನಡೆಯಲಿರುವ ‘‘ವಿರಾಟ್ ಹಿಂದೂ ಸಮಾಜೋತ್ಸವ’ ಕಾರ್ಯಕ್ರಮಕ್ಕೆ ಮುಖ್ಯ ಭಾಷಣಕಾರರಾಗಿ ವಿ.ಹಿಂ.ಪ. ಅಂತರಾಷ್ಟ್ರೀಯ ಕಾರ್ಯಾಧ್ಯಕ್ಷ ಪ್ರವೀಣ್ ಬಾಯೀ ತೋಗಾಡಿಯಾ ಅವರು ಆಗಮಿಸಬೇಕಿತ್ತು. ಆದರೇ ಶನಿವಾರ ನಡೆದ ಅನಿರೀಕ್ಷಿತ ಬೆಳವಣಿಗೆಯಲಿ ತೊಗಾಡಿಯವರನ್ನು ಒಂದು ವಾರಗಳ ಕಾಲ ಜಿಲ್ಲೆಗೆ ಬರದಂತೆ ನಿಶೇಧ ಹೇರಲಾಗಿದೆ. ಈ ನಿಟ್ಟಿನಲ್ಲಿ ಸೋಮವಾರ ನಡೆಯುವ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಸಾದ್ವಿ ಬಾಳಿಕಾ ಸರಸ್ವತಿ ಬರುತ್ತಾರಾ..? ಹೀಗೊಂದು ಪ್ರಶ್ನೆ ಈಗ ಹಲವರನ್ನು ಕಾಡುತ್ತಿದೆ.

ಮೂಲವೊಂದರ ಪ್ರಕಾರ ಕಾರ್ಯಕ್ರಮ ಆಯೋಜಿಸಿದ ವಿ.ಹಿಂ.ಪ. ಮುಖಂಡರು ಈಗಾಗಲೇ ಸಾದ್ವಿ ಅವರನ್ನು ಸಂಪರ್ಕಿಸಿದ್ದಾರೆನ್ನಲಾಗಿದ್ದು ಯಾವುದೇ ದ್ರಡೀಕರಣ ಈ ಬಗ್ಗೆ ಇನ್ನು ಸಿಕ್ಕಿಲ್ಲ. ಅಲ್ಲದೇ ನಾಳೆ ಕಾರ್ಯಕ್ರಮದ ಮುಖ್ಯ ಭಾಷಣಕಾರರು ಯಾರು ಎಂಬ ಗುಟ್ಟನ್ನೂ ಈವರೆಗೂ ವಿ.ಹಿಂಪ. ರಟ್ಟು ಮಾಡಿಲ್ಲ..!
ಸಜ್ಜುಗೊಂಡಿದೆ ಉಡುಪಿ: ಕಾರ್ಯಕ್ರಮಕ್ಕೆ ಉಡುಪಿ ಸಕಲವಾಗಿ ಸಜ್ಜುಗೊಂಡಿದೆ. ಕೇಸರಿ ಪತಾಕೆಗಳು ನಗರದೆಲ್ಲೇಡೆ ರಾರಾಜಿಸುತ್ತಿದೆ. ಬ್ರಹತ್ ಮೈದಾನದಲ್ಲಿ ಅದ್ದೂರಿ ವೇದಿಕೆಯೂ ಸಿದ್ದಗೊಂಡಿದ್ದು ಸಾವಿರಾರು ಜನರಿಗೆ ಕುಳಿತುಕೊಳ್ಳಲು ಯೋಗ್ಯವಾಗಿ ಬ್ರಹತ್ ಮೈದಾನ ಸಜ್ಜಾಗಿದೆ. ಹಿಂದೂ ಸಮಾಜೋತ್ಸವದ ಪೂರ್ವಿಭಾವಿಯಾಗಿ ಶೋಭಯಾತ್ರೆಯು ಅಂದು ಮದ್ಯಾಹ್ನ 2 ಗಂಟೆಗೆ ಉಡುಪಿ ಜೋಡುಕಟ್ಟೆಯಿಂದ ಲಯನ್ಸ್ ಸರ್ಕಲ್, ಡಯಾನ ಸರ್ಕಲ್, ಕೆ.ಎಂ ಮಾರ್ಗ, ಹನುಮಾನ್ ವೃತ್ತ, ಸರ್ವಿಸ್ ಬಸ್ಸು ನಿಲ್ದಾಣ, ಶೀರಿಬೀಡು ಜಂಕ್ಷನ್, ಸಿಟಿ ಬಸ್ಸು ನಿಲ್ದಾಣ, ಕಲ್ಸಂಕ, ಕಡಿಯಾಳಿ, ಕುಂಜಿಬೆಟ್ಟು, ಮಾರ್ಗವಾಗಿ ಕುಂಜಿಬೆಟ್ಟು ಎಂ.ಜಿ.ಎಂ ಮೈದಾನದ ಸಭಾ ಕಾರ್ಯಕ್ರಮ ಸ್ಥಳಕ್ಕೆ ತಲುಪಲಿದೆ.
ಬಿಗು ಬಂದೋಬಸ್ತ್: ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ತೆ ಕಾಪಾಡುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಂಡಿದ್ದಾರೆ. 6 ಡಿವೈಎಸ್ಪಿ, 20 ಸರ್ಕಲ್ ಇನ್ಸ್‌ಪೆಕ್ಟರ್, 75 ಉಪನಿರೀಕ್ಷಕರು (ಎಸ್ಸೈ), 145 ಸಹಾಯಕ ಉಪನಿರೀಕ್ಷಕರು (ಎ.ಎಸ್ಸೈ), 1005 ಪೊಲೀಸ್ ಕಾನ್ಸ್‌ಟೇಬಲ್, 48 ಡಬ್ಲ್ಯೂ.ಪಿ.ಸಿ. ಹಾಗೂ 100 ಮಂದಿ ಗೃಹರಕ್ಷಕ ದಳ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಅಲ್ಲದೇ 15 ಕೆ.ಎಸ್.ಆರ್.ಪಿ., ಮತ್ತು 24 ಡಿ.ಎ.ಆರ್. ವಾಹನಗಳು ಸ್ಥಳದಲ್ಲಿ ಮೊಕ್ಕಾಂ ಹೂಡಲಿದೆ.
ಆಗು ಹೋಗುಗಳ ಮೇಲೆ ಕಣ್ಗಾವಲಿಡಲು ಸಿಸಿ ಕೆಮೆರಾಗಳನ್ನು ಅಳವಡಿಸಲಾಗಿದೆ. ಜಿಲ್ಲೆಯ ಗಡಿಭಾಗ ಸೇರಿದಂತೆ ಆಯಕಟ್ಟಿನ ಇತರೆಡೆಗಳಲ್ಲಿ 22 ಚೆಕ್ ಪೋಸ್ಟ್ ಗಳನ್ನು ತೆರೆಯಲಾಗುವುದು. ಹಲವೆಡೇ ಚೆಕ್ ಪೋಸ್ಟುಗಳು ಇಂದಿನಿಂದಲೇ ಕಾರ್ಯಚರಿಸುತ್ತಿದ್ದು ಎಲ್ಲೆಡೇ ವ್ಯಾಪಕವಾಗಿ ಪೊಲೀಸು ಬಂದೋಬಸ್ತ್ ಹಾಕಲಾಗಿದೆ.
ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಮಾ.9 ಸೋಮವಾರ ಬೆಳಿಗ್ಗೆ 6.೦೦ ಗಂಟೆಯಿಂದ ಮಾ.10 ರಂದು ಬೆಳಿಗ್ಗೆ 6.೦೦ ಗಂಟೆಯವರೆಗೆ ಜಿಲ್ಲೆಯಾದ್ಯಂತ ಪಾನ ನಿಷೇಧ ಜ್ಯಾರಿಗೊಳಿಸಲಾಗಿದೆ.