* ಡೇತ್ ನೋಟಿನಲ್ಲಿತ್ತು, ತಂದೆ-ತಾಯಿ ಪ್ರೀತಿಯಿಂದಲೂ ನಾನು ವಂಚಿತೆ…
* ತನಗೆ ಹಿಂದಿ ಆಕ್ಟರೊಬ್ಬನ ನೋಡುವಾಸೆ
* 4 ದಿನವಾದ್ರೂ ಇಶಿಕಾ ಸುಳಿವಿಲ್ಲ…
* ಶಾಲಾ ಆಡಳಿತ ಮಂಡಳಿ ಏನು ಮಾಡ್ತಿದೆ..? ಪೊಲೀಸರು ಏನು ಮಾಡ್ತಿದ್ದಾರೆ..?
ಉಡುಪಿ: ಇಲ್ಲಿನ ಕುಂಜಿಬೆಟ್ಟುವಿನಲ್ಲಿರುವ ಶಾರದಾ ವಸತಿ ಶಾಲೆ (ಎಸ್.ಆರ್.ಎಸ್.)ಯಲ್ಲಿ ಕಲಿಯುತ್ತಿದ್ದ 8ನೇ ತರಗತಿ ವಿದ್ಯಾರ್ಥಿನಿ ಇಶಿಕಾ ಶೆಟ್ಟಿ (13) ನಿಗೂಢವಾಗಿ ನಾಪತ್ತೆಯಾಗಿರುವ ಪ್ರಕರಣ ನ.15 ರಂದು ಶನಿವಾರ ನಡೆದಿದ್ದು ಇಶಿಕಾ ಕುಟುಂಬಿಕರಿಗೆ ಬುಧವಾರ ಈ ಮಾಹಿತಿ ಸ್ಪಷ್ಟ ಸಿಕ್ಕಿದ್ದು ಶಾಲೆಯ ಆಡಳಿತ ಮಂಡಳಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಮೂಲ್ಕಿ ಕಿನ್ನಿಗೋಳಿಯಎಳಿಂಜೆ ನಿವಾಸಿ ಶೇಖರ ಶೆಟ್ಟಿ ಮತ್ತು ಯಶೋಧ ಶೆಟ್ಟಿ ದಂಪತಿಯ ಪುತ್ರಿಯಾಗಿರುವ ಇಶಿಕಾ ಕುಂಜಿಬೆಟ್ಟುವಿನಲ್ಲಿರುವ ವಸತಿ ಶಾಲೆಯ 8ನೇ ತರಗತಿ ವಿದ್ಯಾರ್ಥಿನಿ. ಈಕೆಯ ತಂದೆ ತಾಯಿ ಮಸ್ಕತ್ ನಲ್ಲಿ ಉದ್ಯೋಗದಲ್ಲಿದ್ದಾರೆ.
ಘಟನೆ ವಿವರ: ನವಂಬರ್ 15ರಂದು ಶಾಲೆಯಲ್ಲಿ ಬಾಸ್ಕೆಟ್ ಬಾಲ್ ಆಟವನ್ನು ಆಯೋಜಿಸಲಾಗಿತ್ತು. ಈ ವೇಳೆ ಖುಷಿಯಿಂದಲೇ ಇದ್ದ ಆಕೆ ತಲೆನೋವೆಂದು ತಿಳಿಸಿ ವಸತಿ ನಿಲಯಕ್ಕೆ ವಾಪಾಸ್ಸಾಗಿದ್ದಳಂತೆ. ಈಕೆ ಹೀಗೆ ಹೋಗುವ ವೇಳೆಯಲ್ಲಿ ಶಿಕ್ಷಕಿಯೊಬ್ಬರು ತಡೆದು ವಿಚಾರಿಸಿದಾಗ ಅನುಮತಿ ತೆಗೆದುಕೊಂಡೇ ಹೋಗುತ್ತಿರುವುದಾಗಿ ತಿಳಿಸಿದ್ದಳಂತೆ. ಆ ಬಳಿಕ ಶಿಕ್ಷಕಿಯೇ ಅವಳ ಕೊಠಡಿವರೆಗೂ ಆಕೆಯನ್ನು ಬಿಟ್ಟು ಬಂದಿದ್ದರಂತೆ. ಹೀಗೆ ರಾತ್ರಿ 8 ಗಂಟೆಯ ನಂತರ ಎಲ್ಲಾ ವಿದ್ಯರ್ಥಿಗಳು ಮನೆಗೆ ದೂರವಾಣಿ ಕರೆ ಮಾಡು ವ್ಯವಸ್ಥೆಯಿದ್ದು ಆಕೆಯ ಕೊಠಡಿಗೆ ಅಕೆಯ ಮೊಬೈಲ್ ಕೊಂಡೊಯ್ದ ಶಿಕ್ಷಕಿಗೆ ಇಷಿಕಾ ಕಾಣಿಸಿರಲಿಲ್ಲ. ಎಷ್ಟೇ ಹುಡುಕಾಡುದರೂ ಅವಳು ಪತ್ತೆಯಾಗದಿದ್ದಾಗ ಆಕೆ ವಸತಿ ನಿಲಯದಿಂದ ನಾಪತ್ತೆಯಾಗಿರುವುದು ತಿಳಿದಿದೆ. ಸಾಕಷ್ಟು ಹುಡುಕಾಟದ ಬಳಿಕ ಶಾಲೆಯ ಆಡಲಿತ ಮಂಡಲಿ ಪೊಲೀಸರ ಮೊರೆಹೊಕ್ಕು ನಾಪತ್ತೆ ಪ್ರಕರಣ ದಾಖಲಿಸಿದೆ ಎನ್ನುವುದು ಈ ಶಾಲೆಯಾಂಶುಪಾಲ ವಿದ್ಯಾವಂತ ಆಚಾರ್ಯ ಹೇಳುವ ಮಾತುಗಳು.
ಆದರೇ ಇಶಿಕಾ ತಾಯಿ ಯಶೋಧ ಹೇಳುವುದೇ ಬೇರೆ, ಮಗಳ ಜೊತೆ ಮಾತನಾಡಲೆಂದು ಆಕೆಯ ಮೊಬೈಲ್ ಗೆ ಕರೆ ಮಾಡಿದಾಗ ಮೊಬೈಲ್ ಸ್ವಿಚ್ ಆಫ್ ಬಂದಿತ್ತು, ನಂತರ ಹಾಸ್ಟೇಲ್ ಗೆ ಕರೆ ಮಾಡಿ ವಿಚಾರಿಸಿದಾಗ ಅಲ್ಲಿನವರು ಯಾವುದೇ ಸ್ಪಷ್ಟ ಉತ್ತರ ನೀಡಿರಲ್ಲ, ಆಗಲೇ ಏನೋ ಸಮಸ್ಯೆಯಾಗಿರಬಹುದೆಂದು ತಿಳಿದು ಮಸ್ಕತ್ ನಿಂದ ಉಡುಪಿಗೆ ಹೊರಟು ಇಂದು ಬಂದಿದ್ದೇನೆ. ಇಲ್ಲಿನ ಆಡಳಿತ ಮಂಡಲಿ ಮಕ್ಕಳ ಪಾಲನೆ ಬಗ್ಗೆ ನಿರ್ಲಕ್ಷ್ಜ್ಯ ತೋರುತ್ತಿದೆ ಎಂದು ಮಗಳ ನಾಪತ್ತೆಯನ್ನು ಸಹಿಸದ ಅವರು ದುಖಿಃತರಾಗಿ ಹೇಳಿದ್ದಾರೆ.
ಇದ್ದು ಇಲ್ಲದಂತಾದ ಸಿ.ಸಿ. ಕ್ಯಾಮೆರಾ: ಶಾಲೆಯ ಆಡಳಿತ ಮಂಡಲಿ ಹೇಳುವ ಪ್ರಕಾರ ಶಾಲೆಲ್ಲಿ 80 ಕ್ಕೂ ಅಧಿಕ ಸಿ.ಸಿ. ಕ್ಯಾಮೆರಾಗಳನ್ನು ಅಳವಡಿಸಿದ್ದು ಈಕೆ ನಾಪತ್ತೆಯಗಿರುವುದು ಮಾತ್ರ ಯಾವುದೇ ಕ್ಯಾಮೆರಾದಲ್ಲಿ ರೆಕಾರ್ಡ್ ಆಗಿಲ್ಲವಂತೆ. ಈಕೆ ಕ್ಯಾಮೆರಾ ಕಣ್ತಪ್ಪ್ಸಿ ಓಡಿಹೋಗಿದ್ದಾಳೆನ್ನುವುದು ಶಾಲೆಯವರ ವಾದ. ಇನ್ನೊಂದು ಮೂಲದ ಪ್ರಕಾರ ಹುಡುಕಾಟದ ವೇಳೆ ಆಕೆ ಮೊದಲು ಧರಿಸಿದ್ದ ಟೀ-ಶರ್ಟ್ ಹಾಗೂ ಸ್ಕರ್ಟ್ ಮತ್ತು ಪಾದರಕ್ಷೆಗಳು ಶಾಲೆಯಾ ಕಾಂಫೌಂಡ್ ಸಮೀಪ ಸಿಕ್ಕಿದ್ದು, ಈಕೆ ತೆರಳುವ ಮೊದಲು ಬಟ್ಟೆ ಎಸೆದು ಹೋಗಿರಬೇಕೆಂದು ಅಂದಾಜಿಸಲಾಗಿದೆ.
ಶಾಲೆ ವಿರುದ್ಧ ಪ್ರತಿಭಟನೆ: ಬುಧವಾರ ಬೆಳಿಗ್ಗೆ ಶಾಲೆಗೆ ದೌಡಾಯಿಸಿದ ಇಶಿಕಾ ಪೋಷಕರು, ಕುಟುಂಬಿಕರು, ಸಾರ್ವಜನಿಕರು ಹಾಗೂ ಇನ್ನಿತರ ಮಕ್ಕಳ ಪೋಷಕರು ಶಾಲಾ ಆಡಳಿತ ಮಂಡಳಿ ಮತ್ತು ಮುಖ್ಯೋಪಾಧ್ಯಾಯರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಇಶಿಕಾ ನಾಪತ್ತೆಯ ಕುರಿತು ಶಾಲಾ ಆಡಳಿತ ಮಂಡಳಿ, ಆಕೆಯ ಸಹಪಾಠಿಗಳು ಹಾಗೂ ಪೋಷಕರಿಂದ ಮಾಹಿತಗಳನ್ನು ಕಲೆಹಾಕಿ ವಿಚಾರಣೆ ನಡೆಸುತ್ತಿದ್ದಾರೆ.
ಇಶಿಕಾ ಡೇತ್ ನೋಟ್ ಬರದಿದ್ದಳೇ?: ಇಶಿಕಾ ಕೋಣೆಯಲ್ಲಿ ಡೆತ್ ನೋಟ್ ಒಂದು ಪತ್ತೆಯಾಗಿದ್ದು ಅದರಲ್ಲಿ ತಾನು ಎಲ್ಲಾ ವ್ಯವಸ್ಥೆಯಿದ್ದರೂ ತಂದೆ-ತಾಯಿರನು ಬಿಟ್ಟು ವಸತಿ ಶಾಲೆಯಲ್ಲಿ ಉಳಿಯುವಂತಗಿದೆ. ಯಾರು ನನ್ನವರಿಲ್ಲ ಎಂದು ಕೊರಗುತ್ತ್ತಿದ್ದೇನೆ. ನನಗೆ ನಟನೆ ಇಷ್ಟ. ಹಾಗೆಯೇ ತಾನು ಹಿಂದಿ ಧಾರಾವಾಹಿಯ ನಟನೊಬ್ಬನನ್ನು ಅತಿಯಾಗಿ ಮೆಚ್ಚಿಕೊಂಡಿದ್ದು ಆತನನ್ನು ನೋಡಲು ತೆರಳುತ್ತಿದ್ದೇನೆ. ಆತನನ್ನು ಭೇಟಿಯಾಗಲು ಸಾಧ್ಯವಿಲ್ಲ ಎಂದಾದರೆ ಸಾಯುತ್ತೇನೆ ಎಂದು ಹಿಂದಿಯಲ್ಲಿ ಬರೆದಿರುವುದಾಗಿ ತಿಳಿದುಬಂದಿದೆ. ಆದರೆ ಈ ಪತ್ರದ ಬಗ್ಗೆ ಪೋಷಕರು ಸಂಶಯ ವ್ಯಕ್ತಪಡಿಸಿದ್ದಾರೆ. ಮರಣ ಪತ್ರದಲ್ಲಿ ಡೆತ್ ನೋಟ್ ಎಂಬ ಶಬ್ದವನ್ನು ಇಂಗ್ಲೀಷ್ ನಲ್ಲಿ ಬರೆದಿದ್ದು ಉಳಿದವೆಲ್ಲಾ ಹಿಂದಿಯಲ್ಲಿದೆ ಅದು ತಮ್ಮ ಮಗಳು ಬರೆದಿಲ್ಲವೆಂಬುದುಆಕೆ ಫೋಷಕರ ವಾದವಾಗಿದೆ.
ಇಶಿಕಾ ಪ್ರಕರಣದಲ್ಲಿ ಶಾಲಾ ಆಡಳಿತ ಮಂಡಳಿ ಪೊಲೀಸರಿಗೆ ದೂರು ನೀಡಿದ್ದರೂ ಅದು ಪೊಲೀಸ್ ಬ್ಲಾಗ್ ಅಥವಾ ಯಾವುದೇ ಮಾಧ್ಯಮಕ್ಕೆ ಸಿಕ್ಕಿಲ್ಲ ಎನ್ನುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.