ಕನ್ನಡ ವಾರ್ತೆಗಳು

ಗಂಗೊಳ್ಳಿ: ಕಾಡಿನಿಂದ ನಾಡಿಗೆ  ಬಂದ ಮಾನಸಿಕ ಅಸ್ವಸ್ಥನಿಗೆ ಆಶಾಕಿರಣವಾದ ಮಂಗಳೂರು ‘ಸ್ನೇಹಾಲಯ’

Pinterest LinkedIn Tumblr

ಕುಂದಾಪುರ: ಇಲ್ಲಿಗೆ ಸಮೀಪದ ಹೊಸಾಡು ಗ್ರಾಮದ ಕಾಡಿನಲ್ಲಿ ಕಳೆದ ಎಂಟು ತಿಂಗಳಿನಿಂದ ವಾಸವಾಗಿದ್ದ ಮಾನಸಿಕ ಅಸ್ವಸ್ಥ ಯುವಕನನ್ನು ಗಂಗೊಳ್ಳಿಯ ಚರ್ಚಿನ ಫಾದರ್ ಅಲ್ಫೋನ್ಸ್ ಡಿ ಲೀಮಾ ಅವರ ಮಧ್ಯಸ್ಥಿಕೆಯಲ್ಲಿ 24/7 ಹೆಲ್ಪ್ ಲೈನ್ ಗಂಗೊಳ್ಳಿ ಹಾಗೂ ದಿವಂಗತ ಮುಹಮ್ಮದ್ ಸುಹೈಲ್ ಗೆಳೆಯರ ಬಳಗ ಸದಸ್ಯರು ಮಂಗಳೂರಿನ “ಸ್ನೇಹಾಲಯ” ಮಾನಸಿಕ ಅಸ್ವಸ್ಥರ ಕೇಂದ್ರಕ್ಕೆ ಕಳುಹಿಸಿ ಮಾನವೀಯತೆಯನ್ನು ಮೆರೆದಿದ್ದು, ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

ಕೆಲವು ದಿನಗಳ ಹಿಂದೆ ಇದೆ ತಂಡ ಗಂಗೊಳ್ಳಿ ಪೊಲೀಸರ ಮದ್ಯಸ್ಥಿಕೆಯಲ್ಲಿ ಓರ್ವ ಮಾನಸಿಕ ಅಸ್ವಸ್ಥ ಪದವೀದರ ಯವಕನನ್ನು ಕೆದೂರಿನ ಸ್ಪೂರ್ತಿಧಾಮದ “ನೆಲೆ” ಪುನರ್ವಸತಿ ಕೇಂದ್ರಕ್ಕೆ ಸೇರಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

Man_Admitted_Snehalaya Man_Admitted_Snehalaya (1) Man_Admitted_Snehalaya (2) Man_Admitted_Snehalaya (3) Man_Admitted_Snehalaya (4) Man_Admitted_Snehalaya (5)

ಕಳೆದ ಜನವರಿ ತಿಂಗಳಿನಲ್ಲಿ ತ್ರಾಸಿ ಬಸ್ಸು ನಿಲ್ದಾಣದಲ್ಲಿ ಕಾಣಸಿಕ್ಕಿದ್ದ ಓರ್ವ ಮಾನಸಿಕ ಅಸ್ವಸ್ಥ ಯುವಕ ತದನಂತರ ತನ್ನ ನೆಲೆಯನ್ನು ಸಮೀಪದ ಕಾಡಿಗೆ ಬದಲಾಯಿಸಿ ಅಲ್ಲಿಯೇ ಹಗಲು ರಾತ್ರಿ ಕಳೆಯುತ್ತಿದ್ದ.ಗಂಗೊಳ್ಳಿಯ ಈ ಯವಕರು ಹಲವು ಬಾರಿ ಈತನನ್ನು ಭೇಟಿಯಾಗಿದ್ದರು ಹಾಗೂ ಈತನನ್ನು ಆಶ್ರಮಕ್ಕೆ ಸೇರಿಸುವ ಪ್ರಯತ್ನದಲ್ಲಿದ್ದರು.. ದುರಾಂತವೆಂದರೆ ಇವರು ಭೇಟಿ ನೀಡಿದಾಗಲೆಲ್ಲ ಆತ ಮರದ ಎಲೆಯೋ, ಕಾಗದವೋ ಅಥವಾ ತ್ಯಾಜ್ಯದೊಳಗಿನ ವಸ್ತುಗಳನ್ನು ತಿನ್ನುತ್ತಿದ್ದ..ಅಸ್ಪಷ್ಟ ಹಿಂದಿಯಲ್ಲಿ ಉತ್ತರ ಕೊಡುತ್ತಿದ್ದ ಈತ ತನ್ನ ಹೆಸರನ್ನು ಸರಿಯಾಗಿ ಇನ್ನೂ ತನಕ ಹೇಳಿಲ್ಲ.

ಕಳೆದ ಶನಿವಾರ ಯವಕರು ಗಂಗೊಳ್ಳಿ ಚರ್ಚಿನ ಫಾದರ್ ಅಲ್ಫೋನ್ಸ್ ಡ್ ಲೀಮಾ ಅವರನ್ನು ಭೇಟಿ ಮಾಡಿ ಮಾನಸಿಕ ಅಸ್ವಸ್ಥನ ಬಗ್ಗೆ ಹೇಳಿದರು ಹಾಗೂ ಮಂಗಳೂರಿನ “ಸ್ನೇಹಾಲಯ” ಮಾನಸಿಕ ಅಸ್ವಸ್ಥರ ಕೇಂದ್ರವನ್ನು ಸಂಪರ್ಕಿಸಿ ಈತನಿಗೆ ಆಶ್ರಯ ಕಲ್ಪಿಸಲು ಕೋರಿಕೊಳ್ಳಬೇಕು ಎಂದರು.. ಇದಕ್ಕೆ ಪ್ರತಿಕ್ರಿಯಿಸಿದ ಚರ್ಚ್ ಫಾದರ್ “ಸ್ನೇಹಾಲಾಯದ” ಮುಖ್ಯಸ್ಥರಾದ ಬ್ರದರ್ ಜೊಸೆಫ್ ಕ್ರಾಸ್ತಾ ಇವರನ್ನು ಸಂಪರ್ಕಿಸಿದಾಗ ಅವರು ಪ್ರತಿಕ್ರಿಯಿಸಿ , ಮುಂದಿನ ಶುಕ್ರವಾರ ಗಂಗೊಳ್ಳಿಗೆ ಬರುತ್ತೇನೆ ಎಂದು ಹೇಳಿದರು… ಮಾತಿಗೆ ತಕ್ಕಂತೆ ತಂಡದೊಂದಿಗೆ ಇಂದು ಬೆಳಿಗ್ಗೆ ಗಂಗೊಳ್ಳಿಗೆ ಆಗಮಿಸಿದ “ಸ್ನೇಹಾಲಯ”ದ ವರು ಮಾನಸಿಕ ಅಸ್ವಸ್ಥ ಇದ್ದ ಕಾಡಿಗೆ ಹೋದಾಗ ಕಾಡಿನಲ್ಲಿ ಆತ ಎದುರಾದನು..

ಈ ಸಂಧರ್ಭದಲ್ಲಿಯೂ ಆತನ ಬಾಯಿಯಲ್ಲಿ ಮರಗಳ ಎಲೆಗಳು ಇದ್ದಿದ್ದವು.. ಇದನ್ನು ಗಮನಿಸಿದ “ಸ್ನೇಹಾಲಯ”ದವರು ಈತನನ್ನು ತಾವು ತಂದಿದ್ದ ವಾಹನದಲ್ಲಿ ಬರುತ್ತೀಯಾ ಎಂದು ಹಿಂದಿಯಲ್ಲಿ ಕೇಳಿದಾಗ ಆತ ನೇರವಾಗಿ ವಾಹನ ಹತ್ತಿದನು. ಅಂತೂ ಎಂಟು ತಿಂಗಳ ಕಾಡಿನ ವಾಸದ ಬಳಿಕ ಇಂದು ಆತ ನಾಡಿಗೆ ಪ್ರಯಾಣ ಬೆಳೆಸಿದ್ದಾನೆ.. ಆದಸ್ತು ಶೀಗ್ರಾ ಗುಣಮುಖರಾಗಲಿ ಎಂಬುದೇ ಎಲ್ಲರ ಆಶಯ..

ಈ ಸಂಧರ್ಭದಲ್ಲಿ ಗಂಗೊಳ್ಳಿ ಚರ್ಚಿನ ಫಾದರ್ ಅಲ್ಫೋನ್ಸ್ ಡಿ ಲೀಮಾ, ಸ್ನೇಹಾಲಾಯದ ಜೊಸೆಫ್ ಕ್ರಾಸ್ತಾ, ಅವರ ಪತ್ನಿ ಒಲಿವಿಯಾ ಕ್ರಾಸ್ತಾ, ಪ್ರವೀಣ್ ಕಲ್‌ಬಾವೋ, ಸುಪ್ರೀತ್ ಕ್ರಾಸ್ತಾ, ಗಂಗೊಳ್ಳಿ 24/7 ಹೆಲ್ಪ್ ಲೈನ್ ಹಾಗೂ ದಿವಂಗತ ಮುಹಮ್ಮದ್ ಸುಹೈಲ್ ಮಿತ್ರರ ಬಳಗದ ಮುಹಮ್ಮದ್ ಇಬ್ರಾಹಿಂ ಎಂ ಎಚ್, ವಿಲ್‌ಸನ್ ರೆಬೇರೊ,ಆಹ್ತಶಾಂ ಎಂ ಎಚ್, ಜಾಹಿದ್, ಮುಜಾಹಿದ ಮೌಲಾನಾ, ಇಮ್ತಿಯಾಜ್, ನೌಫಾಲ್ ಹಾಗೂ ದಿವಂಗತ ಮುಹಮ್ಮದ್ ಸುಹೈಲ್ ಸಹೋದರ ಅಬ್ರಾರ್ ಜೊತೆಗಿದ್ದರು.

Write A Comment