Uncategorized

ಜಹೀರ್ ಮದುವೆ ಪಾರ್ಟಿಯಲ್ಲಿ ಸಕತ್ ಸ್ಟೆಪ್ ಹಾಕಿದ ವಿರುಷ್ಕಾ

Pinterest LinkedIn Tumblr


ಹೊಸದಿಲ್ಲಿ: ಈಗಷ್ಟೇ ಬಾಲಿವುಡ್ ನಟಿ ಸಾಗರಿಕಾ ಘಾಟ್ಗೆ ಅವರನ್ನು ವರಿಸಿಕೊಂಡಿರುವ ಭಾರತ ಕ್ರಿಕೆಟ್ ತಂಡದ ಮಾಜಿ ವೇಗದ ಬೌಲರ್ ಜಹೀರ್ ಖಾನ್, ಮುಂಬೈನಲ್ಲಿ ವಿಶೇಷವಾದ ಪಾರ್ಟಿಯನ್ನು ಏರ್ಪಡಿಸಿದ್ದಾರೆ.

ಜಹೀರ್ ಮದುವೆ ವೇಳೆಯಲ್ಲ ನಾಗ್ಪುರ ಟೆಸ್ಟ್ ಪಂದ್ಯದಲ್ಲಿ ಬ್ಯುಸಿಯಾಗಿದ್ದ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೋಹ್ಲಿ, ಇದೀಗ ಮದುವೆ ಪಾರ್ಟಿಯಲ್ಲಿ ಭಾಗವಹಿಸುವ ಮೂಲಕ ಗಮನ ಸೆಳೆದಿದ್ದಾರೆ.

ವಿರಾಟ್ ಅವರು ತಮ್ಮ ಪ್ರೇಯಸಿ ಹಾಗೂ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಜತೆಗೆ ಪಾಲ್ಗೊಂಡಿದ್ದರು. ಈ ವೇಳೆಯಲ್ಲಿ ವಿರುಷ್ಕಾ ಜೋಡಿಯು ಬಾಂಗ್ರಾ ನೃತ್ಯಕ್ಕೆ ಸ್ಟೆಪ್ ಹಾಕುವ ಮೂಲಕ ಗಮನ ಸೆಳೆದರು.

ಸಚಿನ್ ತೆಂಡೂಲ್ಕರ್, ಸುರೇರ್ ರೈನಾ, ಯುವರಾಜ್ ಸಿಂಗ್, ವೀರೇಂದ್ರ ಸೆಹ್ವಾಗ್ ಸೇರಿದಂತೆ ಅನೇಕ ಮಾಜಿ ಹಾಗೂ ಸಮಕಾಲೀನ ಕ್ರಿಕೆಟಿಗರು ಜಹೀರ್ ವಿವಾಹ ಪಾರ್ಟಿಯಲ್ಲಿ ಭಾಗವಹಿಸಿದ್ದರು.

ಇದಕ್ಕೂ ಮೊದಲು ಮಗದೋರ್ವ ಭಾರತೀಯ ಆಟಗಾರ ಭುವನೇಶ್ವರ್ ಕುಮಾರ್ ಸಹ ವಿವಾಹ ಜೀವನಕ್ಕೆ ಕಾಲಿರಿಸಿದ್ದರು.

Comments are closed.