ವಾಷಿಂಗ್ಟನ್: ಸೊಂಟದ ಸುತ್ತ ಮಾಂಸ ಬೆಳೆಯುತ್ತಿರುವ ಅನುಭವ ಎಲ್ಲರಿಗೂ ಆಗುತ್ತದೆ? ಆದರೆ ಅದರಲ್ಲಿ ವಿಶೇಷವೇನು ಇಲ್ಲ. ನಿಮ್ಮ ಆಹಾರ ಪದ್ದತಿಯೇ ಇದಕ್ಕೆ ಕಾರಣ. ನೀವು ಏನನ್ನು ತಿನ್ನುತ್ತಿದ್ದಿರಿ ಅಂತ ನೋಡಬೇಡಿ, ನೀವು ಹೇಗೆ ತಿನ್ನುತ್ತೀರಿ ಎಂದು ನೋಡಿ ಎಂಬುದನ್ನು ಅಧ್ಯಯನವೊಂದು ತಿಳಿಸಿದೆ.
ಅಮೆರಿಕನ್ ಹಾರ್ಟ್ ಅಸೋಸಿಯೆಷನ್ ಸೈಂಟಿಫಿಕ್ ಸೆಷನ್ಸ್ 2017ರ ಪ್ರಕಾರ, ನಿಧಾನವಾಗಿ ಊಟ ಮಾಡುವವರು ಬೊಜ್ಜು ಅಥವಾ ಮೆಟಾಬಾಲಿಕ್ ಸಿಂಡ್ರೋಮ್, ಹೃದ್ರೋಗ, ಮಧುಮೇಹ ಮತ್ತು ಸ್ಟ್ರೋಕ್ ಅಪಾಯದ ಅಂಶಗಳನ್ನು ಒಂದು ಮಟ್ಟಿಗೆ ಕಡಿಮೆಗೊಳಿಸಬಹುದು ಎಂಬುದನ್ನು ಪ್ರಸ್ತುತಪಡಿಸಿದೆ.
ಕಿಬ್ಬೊಟ್ಟೆಯ ಸ್ಥೂಲಕಾಯ, ಹೆಚ್ಚಿನ ಉಪವಾಸದಿಂದಾಗುವ ಸಕ್ಕರೆ ಕಾಯಿಲೆ, ಅಧಿಕ ರಕ್ತದೊತ್ತಡ, ಅಧಿಕ ಟ್ರೈಗ್ಲಿಸರೈಡ್ಗಳು ಅಥವಾ ಕಡಿಮೆ ಕೊಬ್ಬ ಒಳಗೊಂಡಿರುವ ಮೂರು ಅಪಾಯಕಾರಿ ಅಂಶಗಳನ್ನು ಯಾರಾದರೂ ಹೊಂದಿದ್ದಾಗ ಅಂತವರಿಗೆ ಮೆಟಾಬಾಲಿಕ್ ಸಿಂಡ್ರೋಮ್ ಸಂಭವಿಸುತ್ತದೆ ಎಂದು ಜಪಾನಿನ ಸಂಶೋಧಕರು ಹೇಳಿದ್ದಾರೆ.
2008ರ ನಂತರ ಯಾರು ಮೆಟಾಬಾಲಿಕ್ ಸಿಂಡ್ರೋಮ್ ಗೆ ಒಳಗಾಗಿಲ್ಲವೋ ಅಂತಹ ಸರಾಸರಿ 51 ವರ್ಷದ 642 ಪುರುಷರು ಹಾಗೂ 441 ಮಹಿಳೆಯರನ್ನು ಈ ಸಂಶೋಧನೆಗೆ ಬಳಸಿಕೊಳ್ಳಲಾಗಿತ್ತು. ಅವರ ಆಹಾರ ಪದ್ದತಿಗೆ ಅಂದರೆ ವೇಗ: ನಿಧಾನ, ಸಾಮಾನ್ಯ ಅಥವಾ ವೇಗ ಈಗೆ ಮೂರು ಗುಂಪುಗಳಾಗಿ ವಿಂಗಡಿಸಿ ಅವರ ಮೇಲೆ ಪ್ರಯೋಗ ಮಾಡಲಾಯಿತು.
ಸುದೀರ್ಘ ಐದು ವರ್ಷಗಳ ಅಧ್ಯಾಯನದ ನಂತರ ಸಂಶೋಧಕರು ವೇಗವಾಗಿ ಆಹಾರ ಸೇವಿಸುವವರಲ್ಲಿ ಶೇಖಡ 11.6ರಷ್ಟು ಮೆಟಾಬಾಲಿಕ್ ಸಿಂಡ್ರೋಮ್ ಗೆ ಒಳಗಾಗುವ ಸಾಧ್ಯತೆಗಳು ಹೆಚ್ಚಿವೆ. ಇನ್ನು ಸಾಮಾನ್ಯವಾಗಿ ಆಹಾರ ಸೇವಿಸುವವರಲ್ಲಿ ಶೇ.6.5ರಷ್ಟು, ನಿಧಾನವಾಗಿ ಆಹಾರ ಸೇವಿಸುವವರಲ್ಲಿ ಶೇಖಡ 2.3ರಷ್ಟು ಮಂದಿ ಮಾತ್ರ ಮೆಟಾಬಾಲಿಕ್ ಸಿಂಡ್ರೋಮ್ ಗೆ ಒಳಗಾಗುತ್ತಾರೆ ಎಂಬುದು ಬಹಿರಂಗವಾಗಿದೆ.
ವೇಗವಾಗಿ ಆಹಾರ ಸೇವನೆ ಮಾಡುವುದರಿಂದ ಅಧಿಕ ತೂಕ, ಅಧಿಕ ರಕ್ತದೊತ್ತಡ ಮತ್ತು ಸೊಂಟದ ಸುತ್ತ ಬೊಜ್ಜು ಹೆಚ್ಚಾಗುತ್ತದೆ ಎಂಬುದು ಸಂಶೋಧನೆಯಿಂದ ಬಹಿರಂಗಗೊಂಡಿದೆ.