Uncategorized

ಹಿಮ ತುಂಬಿದ್ದ ಜಾಗದಲ್ಲಿ ಹೂತಿದ್ದ ಕಾರೊಳಕ್ಕೆ ನುಗ್ಗಿದ ಪೊಲೀಸರು ದಂಗಾದರೇಕೆ?

Pinterest LinkedIn Tumblr

himaನ್ಯೂಯಾರ್ಕ್: ಹಿಮ ತುಂಬಿದ್ದ ಜಾಗದಲ್ಲಿ ಕಾರೊಳಗೆ ಚಳಿಗೆ ಹೆಪ್ಪುಗಟ್ಟಿದಂತಿದ್ದ ಮಹಿಳೆಯನ್ನು ರಕ್ಷಿಸುವ ಸಲುವಾಗಿ ಕಾರಿನ ಗಾಜು ಒಡೆದು ಒಳನುಗ್ಗಿದ ಪೊಲೀಸರು ಒಳಗಿನ ದೃಶ್ಯ ಕಂಡು ದಂಗಾದ ಘಟನೆ ನ್ಯೂರ್ಯಾನಲ್ಲಿ ಘಟಿಸಿದೆ.

ನ್ಯೂರ್ಯಾನ ಹಡ್ಸನ್ ಸಿಟಿಯಲ್ಲಿ ಶುಕ್ರವಾರ ಪೊಲೀಸರಿಗೆ ಕರೆಮಾಡಿದ ವ್ಯಕ್ತಿಯೊಬ್ಬ ನಿಲ್ಲಿಸಲಾಗಿದ್ದ ಕಾರಿನ ಒಳಗೆ ಮಹಿಳೆಯೊಬ್ಬಳು ಚಳಿಗೆ ಹೆಪ್ಪುಗಟ್ಟಿ ಸತ್ತುಹೋಗಿದ್ದಾಳೆ ಎಂದು ತಿಳಿಸಿದ. ತತ್ ಕ್ಷಣವೇ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದರು. ತಾಪ 13 ಡಿಗ್ರಿ ಸೆಂಟಿಗ್ರೇಡ್ಗೆ ಇಳಿದಿದ್ದ ರಾತ್ರಿಯಲ್ಲಿ ವ್ಯಾಪಕ ಹಿಮಪಾತದಿಂದ ಕಾರು ಹಿಮರಾಶಿಯಡಿ ಮುಚ್ಚಿಹೋಗಿತ್ತು.

ಹಿಮಾವೃತ ಕಾರಿನ ಒಳಗೆ ಆಮ್ಲಜನಕರ ಮುಖವಾಡ ಹಾಕಿಕೊಂಡಿದ್ದ ಚಲನೆರಹಿತ ಮಾನವಾಕೃತಿ ಕಾಣಿಸುತ್ತಿತ್ತು. ವಸ್ತ್ರಧರಿಸಿ, ಕನ್ನಡಕ ಹಾಕಿಕೊಂಡು, ಕಾಲುಗಳಿಗೆ ಶೂ ಧರಿಸಿದ್ದ ಈ ಮಾನವಾಕೃತಿಯ ಬಾಯಿಯಲ್ಲಿ ಹಲ್ಲುಗಳಿದ್ದರೆ, ಚರ್ಮ ಕಾಂತಿಯುಕ್ತವಾಗಿತ್ತು. ಸೀಟ್ ಬೆಲ್ಟ್ ಧರಿಸಲಾಗಿತ್ತು.

ತಡಮಾಡದ ಪೊಲೀಸರು ಕಾರಿನ ಗಾಜು ಒಡೆದು ಒಳಗಿದ್ದ ವ್ಯಕ್ತಿಯನ್ನು ಪಾರು ಮಾಡಲು ಯತ್ನಿಸಿದರು. ಹಾಗೆ ಒಳಗೆ ನುಗ್ಗಿದ ಬಳಿಕ ಪೊಲೀಸರು ದಂಗಾದರು. ಏಕೆಂದರೆ- ಅದು ನಿಜವಾದ ವ್ಯಕ್ತಿಯಾಗಿರದೆ, ಕೇವಲ ಮಾನವ ಪ್ರತಿಕೃತಿಯಾಗಿತ್ತು. ಆದರೆ ನೈಜ ಮಾನವನಂತೆಯೇ ಕಾಣುತ್ತಿತ್ತು. ಕಾರು ಮಾಲೀಕನನ್ನು ಸಂರ್ಪಸಿದ ಬಳಿಕ ಆತ ತಾನು ವೈದ್ಯಕೀಯ ತರಬೇತಿಗಾಗಿ ಈ ಪ್ರತಿಕೃತಿಯನ್ನು ಬಳಸುತ್ತಿದ್ದುದಾಗಿ ತಿಳಿಸಿದ ಎಂದು ಪೊಲೀಸ್ ಅಧಿಕಾರಿಗಳು ಹೇಳಿದರು.

Comments are closed.