Uncategorized

ಎಲ್ಲೆಲ್ಲೂ ಲೈಂಗಿಕ ಶೋಷಣೆ…ಶೋಷಿತ ನಟಿಯರಲ್ಲಿ ಯಾರೆಲ್ಲಾ ಇದ್ದಾರೆ ?

Pinterest LinkedIn Tumblr

1actressಮುಂಬೈ: ಪತ್ರಕರ್ತೆ ಬರ್ಖಾ ದತ್‌‌ ಅವರ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಬಾಲಿವುಡ್‌‌ ನಟಿ ಕಂಗನಾ ರನೌತ್‌‌ ಬಾಲಿವುಡ್‌‌ನಲ್ಲಿ ಓರ್ವ ವ್ಯಕ್ತಿಯಿಂದ ತಾವು ಅನುಭವಿಸಿದ ದೈಹಿಕ ಶೋಷಣೆ ಬಗ್ಗೆ ಹೇಳಿಕೆ ನೀಡಿದ್ದಾರೆ. ಆ ಮೂಲಕ ಬಾಲಿವುಡ್‌ನಲ್ಲಿನ ಸ್ತ್ರೀ ಶೋಷಣೆಯ ಮುಖ ಪರಿಚಯ ಮಾಡಿಸಿದ್ದಾರೆ.

ಈ ಸಂದರ್ಭದಲ್ಲಿ ದೈಹಿಕ, ಮಾನಸಿಕ, ಲೈಂಗಿಕ ಶೋಷಣೆಗೆ ಗುರಿಯಾದ  ಕೆಲ ಬಾಲಿವುಡ್ ನಟಿಯರ ಕುರಿತು ಇಲ್ಲಿ ಹೇಳುತ್ತೇವೆ. ಅವರು ಯಾರ‍್ಯಾರು ಅಂತೀರಾ..ಈ ಸ್ಟೋರಿ ಓದಿ.

ಸೋನಾಕ್ಷಿ ಸಿನ್ಹಾ
ಬಾಲಿವುಡ್‌‌ನ ಹಿರಿಯ ನಟ ಹಾಗೂ ಬಿಜೆಪಿ ಸಂಸದ ಶತೃಘ್ನ ಸಿನ್ಹಾ ಪುತ್ರಿ ಸೋನಾಕ್ಷಿ ಸಿನ್ಹಾ ಕೂಡಾ ದೈಹಿಕ ಶೋಷಣೆಗೊಳಗಾಗಿದ್ದರಂತೆ. 2010 ರಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಹಲವಾರು ಪತ್ರಕರ್ತರ ಸಮ್ಮುಖದಲ್ಲಿಯೇ ಕಾಮಿ ಪತ್ರಕರ್ತನೋರ್ವ ಸೋನಾಕ್ಷಿ ಅವರ ಭುಜ ಹಾಗೂ ಮೈ ಮುಟ್ಟಲು ಯತ್ನಿಸಿದ್ದನು.

ಕತ್ರಿನಾ ಕೈಫ್‌‌
ಬಾಲಿವುಡ್‌‌ನ ಹಾಟ್‌‌ ಬೆಡಗಿ ಕತ್ರಿನಾ ಕೈಫ್‌‌ 2005ರಲ್ಲಿ ಕೋಲ್ಕತ್ತಾದಲ್ಲಿ ನಡೆದ ದುರ್ಗಾ ಪೂಜಾ ಕಾರ್ಯಕ್ರಮದ ವೇಳೆ ಸಾಕಷ್ಟು ಜನಜಂಗುಳಿ ಇತ್ತು. ಇದೇ ಸಂದರ್ಭದಲ್ಲಿ ಕೆಲವು ವ್ಯಕ್ತಿಗಳು ತಮ್ಮ ಮೈ ಮುಟ್ಟಲು ಯತ್ನಿಸಿದ್ದರು ಎಂದು ಕತ್ರಿನಾ ಹೇಳಿಕೊಂಡಿದ್ದಾರೆ.

ಬಿಪಾಶಾ ಬಸು
ಬಾಲಿವುಡ್‌‌ನ ಕೃಷ್ಣ ಸುಂದರಿ ಬಿಪಾಶಾ ಕೂಡಾ ದೈಹಿಕ ಶೋಷಣೆಗೆ ಒಳಗಾಗಿದ್ರಂತೆ. ಅಹಮದಾಬಾದ್‌‌‌ನಲ್ಲಿ ರಾಜ್‌ 3 ಚಿತ್ರದ ಶೂಟಿಂಗ್‌ ವೇಳೆ ಅಪರಿಚಿತ ವ್ಯಕ್ತಿಯೋರ್ವ ಬಿಪಾಶಾ  ಸ್ಕರ್ಟ್‌‌ನ ಮುಟ್ಟಿದ್ನಂತೆ.

ಸೋಮ್ಯಾ ಅಲಿ
ಸಲ್ಮಾನ್‌ ಖಾನ್‌‌ ಮಾಜಿ ಗೆಳತಿ ಸೋಮ್ಯಾ ಅಲಿ ತಮ್ಮ 5ನೇ ವಯಸ್ಸಿನಲ್ಲಿಯೇ ದೈಹಿಕ ಶೋಷಣೆಗೆ ಒಳಗಾಗಿದ್ದರು ಎಂದು ತಮ್ಮ ಆತ್ಮಚರಿತ್ರೆಯಲ್ಲಿ ಬರೆದುಕೊಂಡಿದ್ದಾರೆ.

ರಿಯಾ ಚಕ್ರಬೋರ್ತಿ
ಸಭ್ಯರಂತೆ ವೇಷಭೂಷಣ ತೊಟ್ಟುಕೊಂಡಿದ್ದ ಮಹಾಶಯನೊಬ್ಬ ರಿಯಾ ಚಕ್ರಬೋರ್ತಿ ಅವರ ಅಪಾರ್ಟ್‌‌ಮೆಂಟ್‌‌ನಲ್ಲಿ ರಿಯಾಗೆ ದೈಹಿಕ ಶೋಷಣೆ ನೀಡಲು ಮುಂದಾಗಿದ್ನಂತೆ. ಅದು ಕೂಡಾ ಹಗಲು ವೇಳೆಯಲ್ಲಿ.

ಮಿನಿಷಾ ಲಂಬಾ
ಮಿನಿಷಾ ಲಂಬಾ ಕೂಡ ಮ್ಯಾಗಜಿನ್‌‌ ಕವರ್‌‌ ಫೋಟೋ ಶೂಟಿಂಗ್‌‌ಗೆ ಗೋವಾಗೆ ತೆರಳಿದ್ದ ಸಂದರ್ಭದಲ್ಲಿ ದೈಹಿಕ ಶೋಷಣೆ ಅನುಭವಿಸಿದ್ದಾರೆ.

ಕೊಯ್ನಾ ಮಿತ್ರಾ
ಮುಂಬೈನ ಪ್ರತಿಷ್ಟಿತ ಪಂಚತಾರಾ ಹೋಟೇಲ್‌ನಲ್ಲಿ ನಡೆದ ಹೊಸ ವರ್ಷದ ಆಚರಣೆಯ ಸಂದರ್ಭದಲ್ಲಿ  ಓರ್ವ ವ್ಯಕ್ತಿ ಕೊಯ್ನಾ ಮಿತ್ರಾಗೆ ದೈಹಿಕ ಶೋಷಣೆ ನೀಡಿದ್ದನಂತೆ.

ಗುಲ್‌ ಪನಾಗ್‌
2010 ರ ದೆಹಲಿಯಲ್ಲಿ ನಡೆದ ಹಾಫ್‌ ಮ್ಯಾರಾಥಾನ್‌‌ ವೇಳೆ ಓರ್ವ ವ್ಯಕ್ತಿ ತಮ್ಮ ಮೈ ಮುಟ್ಟಲು ಯತ್ನಿಸಿದ್ದ ಎಂದು ಗುಲ್‌‌ ಪನಾಗ್‌ ಹೇಳಿಕೊಂಡಿದ್ದಾರೆ.

ಗೌಹಾರ್‌ ಖಾನ್‌‌
ಮುಂಬೈನಲ್ಲಿ ನಡೆದ ಇಂಡಿಯಾ ರಾ ಸ್ಟಾರ್‌‌ ಎಂಬ ಕಾರ್ಯಕ್ರಮದ ವೇಳೆ ಗೌಹಾರ್‌ ಖಾನ್‌ ತುಂಡುಡುಗೆ ತೊಟ್ಟಿದ್ದಳು ಎಂಬ ಕಾರಣಕ್ಕೆ ಅಪರಿಚಿತ ವ್ಯಕ್ತಿಯೋರ್ವ ಗೌಹಾರ್‌ಗೆ ಕಪಾಳ ಮೋಕ್ಷ ಮಾಡಿದ್ದನು.

ಸೆಲೆನಾ ಜೇಟ್ಲಿ
2005ರಲ್ಲಿ ಮಾರಿಷಸ್‌ನಲ್ಲಿ ಖಾಸಗಿ ವಾಹಿನಿಯೊಂದಕ್ಕೆ ಸಂದರ್ಶನ  ನೀಡೋ ವೇಳೆ ವ್ಯಕ್ತಿಯೋರ್ವ  ದೈಹಿಕ ಶೋಷಣೆ ನೀಡಿದ್ದನು ಎಂದು ಹೇಳಿದ್ದಾರೆ.

Write A Comment