Uncategorized

ಭಾರತವನ್ನು ಸುರಕ್ಷಿತ ತಾಣಗಳ ಪಟ್ಟಿಯಿಂದ ತೆಗೆದು ಹಾಕಿಲ್ಲ: ರಷ್ಯಾ ಸ್ಪಷ್ಟನೆ

Pinterest LinkedIn Tumblr

goa

ಪಣಜಿ: ಸುರಕ್ಷಿತ ತಾಣಗಳ ಪಟ್ಟಿಯಿಂದ ಭಾರತವನ್ನು ತೆಗೆದುಹಾಕಲಾಗಿಲ್ಲ ಎಂದು ಗೋವಾದಲ್ಲಿರುವ ರಷ್ಯಾದ ಮಾಹಿತಿ ಕೇಂದ್ರ ಸ್ಪಷ್ಟಪಡಿಸಿದೆ.

ಭಾರತದ ಮೇಲೆ ಇಸ್ಲಾಮಿಕ್ ಸ್ಟೇಟ್ ಉಗ್ರರು ದಾಳಿ ನಡೆಸುವ ಸಾಧ್ಯತೆ ಇದ್ದು, ಗೋವಾಕ್ಕೆ ಬರುವ ಅತಿ ಹೆಚ್ಚು ಪ್ರವಾಸಿಗರು ರಷ್ಯಾದವರಾಗಿರುವುದರಿಂದ ರಷ್ಯಾ ಭಾರತವನ್ನು ಸುರಕ್ಷಿತ ತಾಣಗಳ ಪಟ್ಟಿಯಿಂದ ತೆಗೆದುಹಾಕಿದೆ ಎಂದು ವರದಿ ಪ್ರಕಟವಾಗಿತ್ತು. ಈ ಹಿನ್ನೆಲೆಯಲ್ಲಿ ಸ್ಪಷ್ಟನೆ ನೀಡಿರುವ ರಷ್ಯಾ ಭಾರತದ ಯಾವುದೇ ಭಾಗವನ್ನು ಅಸುರಕ್ಷಿತ ತಾಣ ಎಂದು ಹೇಳಿಲ್ಲ ಎಂದು ಸ್ಪಷ್ಟಪ್ಪಡಿಸಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದೆ.

ಈಜಿಪ್ಟ್ ಮತ್ತು ಟರ್ಕಿಯನ್ನು ಕೂಡ ಕಪ್ಪು ಪಟ್ಟಿಗೆ ಸೇರಿಸಲಾಗಿದ್ದು,ಪಟ್ಟಿಯಲ್ಲಿ ಗೋವಾದ ಹೆಸರನ್ನು ಕೈ ಬಿಡಲಾಗಿದೆ ಎಂಬುದು ತಪ್ಪು ಮಾಹಿತಿ ಎಂದು ರಷ್ಯಾ ಮಾಹಿತಿ ಕೇಂದ್ರ ಹೇಳಿದೆ.  ಕ್ಯೂಬಾ , ಉತ್ತರ ವಿಯೆಟ್ನಾಂ ಮತ್ತು ದಕ್ಷಿಣ ಚೀನಾ ಪ್ರವಾಸ ಕೈಗೊಳ್ಳಲು ಸುರಕ್ಷಿತ ತಾಣಗಳೆಂದು, ಭಾರತದ ಗೋವಾ ಅಸುರಕ್ಷಿತ ತಾಣ ಎಂದು ರಷ್ಯಾ ಹೇಳಿರುವುದರ ಬಗ್ಗೆ ಮಾಧ್ಯಮಗಳಲ್ಲಿ ವರದಿ ಪ್ರಕಟವಾಗಿತ್ತು.

Write A Comment