Uncategorized

ದೆಹಲಿಯಲ್ಲಿ ಶುರುವಾಯ್ತು ‘ಪೋಸ್ಟರ್’ ರಾಜಕೀಯ !

Pinterest LinkedIn Tumblr

posterದೆಹಲಿಯಲ್ಲಿ ಇದೀಗ ಪೋಸ್ಟರ್ ರಾಜಕೀಯ ಪ್ರಾರಂಭವಾಗಿದ್ದು ಪ್ರಧಾನಿ ಮೋದಿ ಅವರ ಜಾಹೀರಾತು ಫಲಕ ಹಾಕಿದ ಆಮ್ ಆದ್ಮಿ ಸರ್ಕಾರದ ವಿರುದ್ದ ಭಗತ್‌ ಸಿಂಗ್‌ ಕ್ರಾಂತಿ ಸೇನೆ ಎಂಬ ಸಂಘಟನೆ ಆಮ್‌ ಆದ್ಮಿ ಪಕ್ಷದ ವಿರುದ್ಧ ಭಿತ್ತಿ ಪತ್ರದ ಸಮರಕ್ಕಿಳಿದಿದೆ.

ಹೌದು.ಪ್ರಧಾನ ಮಂತ್ರಿಗಳೇ, ದೆಹಲಿ ಸರ್ಕಾರಕ್ಕೆ ಕೆಲಸ ಮಾಡಲು ಬಿಡಿ. ದೆಹಲಿ ಸರ್ಕಾರ ಉತ್ತಮವಾಗಿ ಕೆಲಸ ಮಾಡುತ್ತಿದೆ ಎಂದು ಎಎಪಿ ಗುರುವಾರ ದೆಹಲಿಯಾದ್ಯಂತ ಪೋಸ್ಟರ್‌ ಅಂಟಿಸಿರುವುದಕ್ಕೆ ಕಿಡಿ ಕಾರಿರುವ ಈ ಸಂಘಟನೆ ಎಎಪಿ ಸರ್ಕಾರದ ಕಾರ್ಯ ವೈಖರಿಯನ್ನು ಪ್ರಶ್ನಿಸಿದ್ದು ಚುನಾವಣೆ ಸಂದರ್ಭದಲ್ಲಿ ನೀಡಿದ್ದ ಭರವಸೆಗಳನ್ನು ಪೂರೈಸಿ ಎಂದು ಪೋಸ್ಟರ್ ಅಂಟಿಸುವ  ಮೂಲಕ ತಿರುಗೇಟು ನೀಡಿದೆ.

ಅಲ್ಲದೇ ಕೇಜ್ರಿವಾಲ್‌ ಸರ್‌, 525 ಕೋಟಿ ರೂ. ಖರ್ಚು ಮಾಡಿ ಪೋಸ್ಟರ್‌ ಅಂಟಿಸುವ ಬದಲು 15 ಲಕ್ಷ ಸಿಸಿಟಿವಿ ಕ್ಯಾಮೆರಾ ಅಳವಡಿಸಿ. ಇದರಿಂದ ಅಪರಾಧ ಕೃತ್ಯಗಳ ಸಂಖ್ಯೆ ಇಳಿಮುಖವಾಗಲು ಸಹಾಯವಾಗುತ್ತದೆ’ ಎಂದು ಪೋಸ್ಟರ್‌ನಲ್ಲಿ ಬರೆಯಲಾಗಿದ್ದು ಆ ಮೂಲಕ ಪೋಸ್ಟರ್ ರಾಜಕೀಯ ಸಮರಕ್ಕೆ ನಾಂದಿ ಹಾಡಿದೆ.

Write A Comment