Uncategorized

ಡಿ.ಕೆ.ರವಿ ಸಾವು ಆತ್ಮಹತ್ಯೆ; ಏಮ್ಸ್ ಮರಣೋತ್ತರ ವರದಿ

Pinterest LinkedIn Tumblr

ravi

ಬೆಂಗಳೂರು, ಜೂ.24: ರಾಜ್ಯಾದ್ಯಂತ ಭಾರೀ ಕುತೂಹಲ ಕೆರಳಿಸಿದ್ದ ಐಎಎಸ್ ಅಧಿಕಾರಿ ಡಿ.ಕೆ.ರವಿ ನಿಗೂಢ ಸಾವು ಆತ್ಮಹತ್ಯೆ ಎಂಬುದು ದೃಢಪಟ್ಟಿದ್ದು, ನಿಖರ ಕಾರಣ ಏನೆಂಬುದು ತಿಳಿದುಬಂದಿಲ್ಲ. ಡಿ.ಕೆ.ರವಿ ಸಾವಿನ ಕುರಿತು ದೆಹಲಿಯ ಪ್ರತಿಷ್ಠಿತ ಅಖಿಲ ಭಾರತ ವೈದ್ಯಕೀಯ ಸಂಸ್ಥೆ (ಏಮ್ಸ್) ಆಸ್ಪತ್ರೆಯಲ್ಲಿ ಮರಣೋತ್ತರ ವರದಿಯ ಪರೀಕ್ಷೆ ನಡೆಸಲಾಗಿತ್ತು.

ಬೆಂಗಳೂರಿನ ಮಡಿವಾಳದಲ್ಲಿರುವ ವಿಧಿ-ವಿಜ್ಞಾನ ಪ್ರಯೋಗಾಲಯ (ಎಫ್‌ಎಸ್‌ಎಲ್) ಹಾಗೂ ಹೈದರಾಬಾದ್‌ನಲ್ಲಿರುವ ಮತ್ತೊಂದು ಪ್ರಯೋಗಾಲಯದ ವರದಿ ಆಧರಿಸಿ ಏಮ್ಸ್‌ನ ಹಿರಿಯ ವೈದ್ಯರ ತಂಡ ಈ ಪರೀಕ್ಷೆ ನಡೆಸಿತ್ತು. ಇದೀಗ ಈ ತಂಡ ನೀಡಿರುವ ವರದಿ ಪ್ರಕಾರ, ಡಿ.ಕೆ.ರವಿ ಸಾವನ್ನಪ್ಪಿರುವುದು ಆತ್ಮಹತ್ಯೆಯಿಂದ ಎಂದು ಷರ ಬರೆದಿದೆ. ಸದ್ಯದಲ್ಲೇ ಇದರ ಅಂತಿಮ ವರದಿಯನ್ನು ಸಿಬಿಐ ತನಿಖಾ ತಂಡಕ್ಕೆ ನೀಡಲಿದ್ದಾರೆಂದು ಮೂಲಗಳು ಖಚಿತಪಡಿಸಿವೆ.

ರವಿ ಸಾವನ್ನಪ್ಪಿದ ಬಳಿಕ ಅವರ ಮರಣೋತ್ತರ ಪರೀಕ್ಷೆಯನ್ನು ನಗರದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ನಡೆಸಲಾಗಿತ್ತು. ಸಾವಿನ ಕುರಿತು ಅಂತೆಕಂತೆಗಳು, ಸಂಶಯಗಳು ಕೇಳಿಬಂದ ಹಿನ್ನೆಲೆಯಲ್ಲಿ ಅವರ ಮರಣೋತ್ತರ ಪರೀಕ್ಷೆಯ ವರದಿಯನ್ನು ಎರಡು ಪ್ರಯೋಗಾಲಯಗಳಿಗೆ ಕಳುಹಿಸಿಕೊಡಲಾಗಿತ್ತು. ಬೆಂಗಳೂರು ಹಾಗೂ ಹೈದರಾಬಾದ್ ಪ್ರಯೋಗಾಲಯದ ವರದಿ ಆಧರಿಸಿ ಏಮ್ಸ್‌ನ ವೈದ್ಯತಂಡ ಪರೀಕ್ಷೆ ನಡೆಸಿ ರವಿ ಸಾವಿನ ಹಿಂದೆ ಯಾರ ಕೈವಾಡವೂ ಇಲ್ಲ. ರಿಯಲ್ ಎಸ್ಟೇಟ್ ಮಾಫಿಯಾ, ಬಿಲ್ಡರ್ಸ್, ವ್ಯಾಪಾರದಲ್ಲಿ ನಷ್ಟ, ಕುಟುಂಬದಲ್ಲಿ ವೈಮನಸ್ಸು ಸೇರಿದಂತೆ ಯಾವ ಕಾರಣಗಳೂ ಇಲ್ಲ. ಅವರು ಸಾವನ್ನಪ್ಪಿದ್ದು ಆತ್ಮಹತ್ಯೆಯಿಂದಲೇ ಎಂದು ಹೇಳಿದೆ.

Write A Comment