Uncategorized

ಬೈಂದೂರು ಕಾಲೇಜು ಯುವತಿಯ ಶವ ಮನೆ ಸಮೀಪ ಪತ್ತೆ| ಕೊಲೆಯೆಂಬ ಗುಮಾನಿ..?

Pinterest LinkedIn Tumblr

ಕುಂದಾಪುರ: ಕಾಲೇಜು ಮುಗಿಸಿ ಮನೆಗೆ ತೆರಳಬೇಕಾಗಿದ್ದ ಈ ಯುವತಿ ಕೊನೆಗೂ ಸಿಕ್ಕಿದ್ದು ಮನೆಯ ಸಮೀಪದ ಹಾಡಿಯಲ್ಲಿ ಶವವಾಗಿ. ಈ ದುರ್ಘಟನೆ ಕುಂದಾಪುರ ತಾಲೂಕಿನ ಬೈಂದೂರು ಸಮೀಪದ ಒತ್ತಿನೆಣೆಯ ಹೆನ್ನಬೇರು ಎಂಬಲ್ಲಿ ಬುಧವಾರ ಸಂಜೆ ನಡೆದಿದೆ.

ಸ್ಥಳೀಯ ನಿವಾಸಿಗಳಾದ ಬಾಬು ದೇವಾಡಿಗ ಹಾಗೂ ರಾಧಾ ಅವರ ಪುತ್ರಿ ಅಕ್ಷತಾ (17) ನಿಗೂಢವಾಗಿ ಸಾವನ್ನಪ್ಪಿದವಳು.

Byndoor_Student_Murder Byndoor_Student_Murder (1) Byndoor_Student_Murder (2) Byndoor_Student_Murder (3) Byndoor_Student_Murder (4) Byndoor_Student_Murder (5) Byndoor_Student_Murder (6) Byndoor_Student_Murder (7) Byndoor_Student_Murder (8)

ಘಟನೆ ಹಿನ್ನೆಲೆ: ಬೈಂದೂರು ಕಾಲೇಜಿನಲ್ಲಿ ಪ್ರಥಮ ಪಿಯುಸಿ ವಿಜ್ನಾನ ವಿಭಾಗದಲ್ಲಿ ಕಲಿಯುತ್ತಿದ್ದ ಈಕೆ ಕಳೆದ ಶೈಕ್ಷಣಿಕ ವರ್ಷದಲ್ಲಿ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ 93% ಅಂಕ ಪಡೆದು ವಿವಿದೆಡೆಯಲ್ಲಿ ಸನ್ಮಾನಕ್ಕೆ ಭಾಜನಳಾಗಿದ್ದಳು. ಅಂತೆಯೇ ಕಲಿಯುವುದರಲ್ಲಿ ಮುಂದಿದ್ದ ಈಕೆ ಮನೆಯಿಂದ ಕೆಲವು ಕಿ.ಮೀ., ದೂರ ನಡೆದು ತನ್ನ ಕಾಲೇಜಿಗೆ ಹೋಗಿ ಬರುವ ಪರಿಪಾಠವಿತ್ತು. ಬುಧವಾರವೂ ಎಂದಿನಂತೆ 4.30ರ ವೇಳೆಗೆ ಕಾಲೇಜು ಮುಗಿಸಿ ಮನೆಯತ್ತ ಬರಬೇಕಿದ್ದ ಅಕ್ಷತಾ ಮಾತ್ರ ಮನೆಗೆ ಬಂದಿರಲಿಲ್ಲ. ಕೆಲವು ಕ್ಷಣ ಕಾದ ಈಕೆ ಫೋಷಕರು ಕಾಲೇಜಿನವರ ಬಳಿ ಮಾಹಿತಿ ಪಡೆದಿದ್ದಾರೆ, ಅಲ್ಲದೇ ಆಕೆ ಅಲ್ಲಿನಿಂದ ತೆರಳಿದ್ದು ಮನೆಗೆ ಬಾರದಿರುವುದನ್ನು ಗಮನಿಸಿದ ಅವರು ಪೊಲೀಸರಿಗೆ ಮೌಖಿಕವಾಗಿ ವಿಚಾರವನ್ನು ತಿಳಿಸಿದ್ದಾರೆ. ಈ ನಡುವೆ ಅಕ್ಷತಾಳಿಗಾಗಿ ಮನೆಯವರು ಹುಡುಕಾಟ ನಡೆಸಲು ಆರಂಭಿಸಿದಾಗ ಆಕೆ ಶವ ಮನೆ ಸಮೀಪದ ಅಕೇಶಿಯಾ ಹಾಡಿಯಲ್ಲಿ ಪತ್ತೆಯಾಗಿದೆ. ಆಕೆ ಕುತ್ತಿಗೆಗೆ ಆಕೆಯ ಚೂಡಿದಾರ ದುಪ್ಪಟ್ಟದಿಂದ ಬಿಗಿಯಲಾದ ಸ್ಥಿತಿಯಲ್ಲಿ ಶವ ಕಂಡು ಬಂದಿದ್ದು ಮೋಲ್ನೋಟಕ್ಕೆ ಇದೊಂದು ಕೊಲೆಯೆಂಬ ಬಗ್ಗೆ ಮಾಹಿತಿಯಿದೆ.

ಈಕೆ ಕಾಲೇಜಿನಿಂದ ಮರಳುವ ಸಮಯದಲ್ಲಿ ಈಕೆಯ ಸಂಬಂಧಿಕನೋರ್ವ ಈಕೆ ನಡೆದು ತನ್ನ ಮನೆಯತ್ತ ಹೋಗುತ್ತಿರುವುದನ್ನು ಗಮನಿಸಿದ್ದಾನೆ, ಅಲ್ಲದೇ ಆಕೆ ಮುಂಭಾಗದ ಕೆಲವು ದೂರದಲ್ಲಿ ಇನ್ನೊಬ್ಬ ಯುವಕನು ನಡೆದು ಹೋಗಿದ್ದಾನೆ ಎಂಬ ಬಗ್ಗೆ ಈಗಾಗಲೇ ಅಕ್ಷತಾ ಸಂಬಂಧಿ ಪೊಲೀಸರಿಗೆ ಮಾಹಿತಿ ನೀಡಿದ್ದು, ಆ ಯುವಕನ್ಯಾರು ಎನ್ನುವ ಬಗ್ಗೆ ಈಗಾಗಲೇ ತನಿಖೆ ಆರಂಭಗೊಂಡಿದೆ. ಮೇಲ್ನೋಟಕೆ ಇದೊಂದು ಕೊಲೆಯೆಂಬುದು ಕಂಡುಬಂದಿದ್ದು ಯಾವ ಉದ್ಧೇಶಕ್ಕಾಗಿ ಕೊಲೆ ನಡೆದಿದೆ ಎಂಬುದು ಇನ್ನಷ್ಟೆ ಬೆಳಕಿಗೆ ಬರಬೇಕಿದೆ.

ಒಟ್ಟಿನಲ್ಲಿ ಅಕ್ಷತಾಳ ಕಳೆಬರವನ್ನು ಮಣಿಪಾಲ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.

ಸ್ಥಳಕ್ಕೆ ಉಡುಪಿ ಎಸ್ಪಿ ಅಣ್ಣಾಮಲೈ, ಕುಂದಾಪುರ ಡಿವೈಎಸ್ಪಿ ಮಂಜುನಾಥ ಶೆಟ್ಟಿ ಮೊದಲಾದವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

1 Comment

  1. Hiriadka Mohandas

    It’s very unfortunate and a sad news for Devadigas. It’s time for , to fight unitedly without caste, creed and religion, for the justice and to bring culprits to the books. As far as Devadigas are concerned it’s a matter of serious repercussion. Wake up !!!

Write A Comment