ಹೌದು, ವೀಳ್ಯದೆಲೆ ಅಂದರೆ ಸಾಕು ನಮಗೆ ನೆನಪಾಗುವುದು ಶಾಸ್ತ್ರಕ್ಕೆ ಇಲ್ಲಊಟವಾದ ಮೇಲೆ ತಿನ್ನಲು. ಆದರೆ ಈ ದೈಹಿಕ ಸಮಸ್ಯೆಯನ್ನು ನಿವಾರಿಸುವ ಗುಣ ಹೊಂದಿದೆ ಅಂದರೆ ನೀವು ನಂಬುತ್ತೀರಾ.? ನಂಬಲೇಬೇಕು.
ನಿಜಕ್ಕೂ ನಮ್ಮ ಹಿರಿಯರು ಅತಿ ಹೆಚ್ಚಾಗಿ ಇವುಗಳ ಸೇವನೆಯನ್ನು ಮಾಡುತ್ತಿದ್ದರು ಆದರೆ ಪ್ರಸ್ತುತ ದಿನಗಳಲ್ಲಿ ಇದರ ಸೇವನೆ ಕಡಿಮೆ.ರಕ್ತಸ್ರಾವ, ಪಿತ್ತದಿಂದ ತಲೆಸುತ್ತುಇಂತಹವುಗಳಾದರೆ ವೀಳ್ಯದೆಲೆಯನ್ನು ಸೇವಿಸಬಾರದು. ವೀಳ್ಯೆದೆಲೆಯನ್ನು ಹೆಚ್ಚಾಗಿ ಬಳಸಿದಲ್ಲಿ ಲಿವರ್ಬೇಗಕ್ರಿಯಾಹೀನವಾಗಬಹುದು.
ವೀಳ್ಯದೆಲೆ ಬೇರನ್ನು ಜಗಿದರೆ ಸ್ವರವು ಮೃದುವಾಗುತ್ತದೆ. ಮೂರ್ನಾಲ್ಕು ಮಿಲಿ ವೀಳ್ಯದೆಲೆಯ ರಸವನ್ನು 1 ಚಮಚ ಜೇನುತುಪ್ಪದ ಜತೆ ಸೇವಿಸಿದರೆ ಒಣ ಕೆಮ್ಮು ಕಮ್ಮಿಯಾಗುತ್ತದೆ. ಕೆಮ್ಮು ಹಾಗೂ ಕಫದ ಸಮಸ್ಯೆಗೆ 1 ವೀಳ್ಯದೆಲೆಯಲ್ಲಿ ಒಂದೆರಡು ಹರಳು ಉಪ್ಪು ಹಾಗೂ ಒಂದೆರಡು ಕರಿಮೆಣಸನ್ನು ಸೇರಿಸಿ ಸೇವಿಸಬೇಕು.
ಒಂದೆರಡು ವೀಳ್ಯದೆಲೆಯನ್ನು ದಿನಕ್ಕೆ ಎರಡು-ಮೂರು ಬಾರಿ ಜಗಿದರೆ ಕಫಯುಕ್ತ ಕೆಮ್ಮು ಕಡಿಮೆಯಾಗುತ್ತದೆ. ವೀಳ್ಯದೆಲೆ ರಸಕ್ಕೆ, ತುಳಸಿ ಎಲೆಯ ರಸ,1 ಚಮಚ ಜೇನುತುಪ್ಪ ಸೇರಿಸಿ ಸೇವಿಸಿದರೆ ನೆಗಡಿ ವಾಸಿಯಾಗುತ್ತದೆ.