ಕರಾವಳಿ

20 ಹರೆಯದವರು 30 ವಯಸ್ಸಿನವರಂತೆ ಕಾಣುವುದೇಕೆ… ಇಲ್ಲಿದೆ ಕಾರಣ..

Pinterest LinkedIn Tumblr

ಹೆಚ್ಚಿನವರು ಚಿಕ್ಕ ವಯಸ್ಸಿನಲ್ಲೇ ವಯಸ್ಸಾದವರಂತೆ ಕಾಣಿಸುತ್ತಾರೆ. ಇದು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದೆ ಸಾಮಾನ್ಯವಾಗಿ ಯಾರನ್ನಾದ್ರೂ ನೋಡಿದರೆ 25ರ ಹುಡುಗ 35ರ ವಯಸ್ಸಿನಂತೆ ಕಾಣುತ್ತಾನೆ ಅದ್ದಕೆ ಕಾರಣ ನಮ್ಮ ಈಗಿನ ಜೀವನ ಕ್ರಮಗಳು. ಇದಕೆ ಯಾವೆಲ್ಲ ಕಾರಣಗಳಿವೆ ಅನ್ನೋದು ಇಲ್ಲಿದೆ ನೋಡಿ.

ಮಾನಸಿಕ ಖಿನ್ನತೆ:
ಆದರೆ ಬಹಳಷ್ಟು ಜನರು ತಲೆಯಲ್ಲಿ ನೂರಾರು ಚಿಂತನೆಗಳನ್ನಿಟ್ಟುಕೊಂಡು ಕೊರಗುತ್ತಿರುತ್ತಾರೆ. ಇದು ನೇರವಾಗಿ ಅವರ ದೈಹಿಕ ಬೆಳವಣಿಗೆಯ ಮೇಲೆ ಪರಿಣಾಮವನ್ನು ಬೀರುತ್ತದೆ. ಚಿಂತೆಯಲ್ಲೇ ಮುಳುಗಿರುವ ಕಾರಣ ತಮ್ಮ ಆರೋಗ್ಯದ ಕಡೆ ಗಮನ ಹರಿಸಲು ಅವರಿಂದ ಸಾಧ್ಯವಾಗುವುದಿಲ್ಲ. ಇದು ಒತ್ತಡವನ್ನುಂಟು ಮಾಡಿ ದೇಹ ನಿಶ್ಶಕ್ತವಾಗುತ್ತಾ ಹೋಗುತ್ತದೆ.

ಸರಿಯಾಗಿ ನಿದ್ದೆ ಮಾಡದಿರುವುದು:
ಸರಿಯಾದ ಸಮಯಕ್ಕೆ ನಿದ್ದೆ ಮಾಡುವುದು ಅತಿ ಮುಖ್ಯ. ಹಾಗಾಂತ ಅತಿಯಾದ ನಿದ್ದೆ ಕೂಡಾ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಆರೋಗ್ಯವಂತ ವ್ಯಕ್ತಿಗೆ ದಿನಕ್ಕೆ ಆರರಿಂದ ಎಂಟು ಗಂಟೆಯ ನಿದ್ದೆ ಅವಶ್ಯಕತೆ ಇದೆ.

ಅನಾರೋಗ್ಯಕರ ಆಹಾರ ಪದ್ಧತಿ:
ಸರಿಯಾದ ಸಮಯಕ್ಕೆ ಪೌಷ್ಠಿಕಾಂಶಯುಕ್ತ ಆಹಾರ ಸೇವಿಸುವುದರಿಂದ ಮಾತ್ರ ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಾಧ್ಯ. ಆಧುನಿಕ ವಿಜ್ಞಾನದ ಪ್ರಕಾರ ಬೆಳಗಿನ ಉಪಹಾರ ಮತ್ತು ಮಧ್ಯಾಹ್ನ ಹಾಗೂ ರಾತ್ರಿಯ ಊಟ ಉತ್ತಮ ಆರೋಗ್ಯಕ್ಕೆ ಅವಶ್ಯಕವಾಗಿದೆ.

ಮದ್ಯಪಾನ, ಧೂಮಪಾನ ಸೇವನೆ:
ಮದ್ಯಪಾನ ಮತ್ತು ಧೂಮಪಾನ ಮಾಡುವುದರಿಂದ ಮಾನವನ ಆರೋಗ್ಯ ಹದಗೆಡುತ್ತದೆ. ಇದು ನೇರವಾಗಿ ಮೂತ್ರಪಿಂಡಗಳು ಮತ್ತು ಶ್ವಾಸಕೋಶದ ಮೇಲೆ ಪರಿಣಾಮ ಬೀರುತ್ತದೆ. ಈ ದುಶ್ಚಟಗಳಿಂದಾಗಿ ಚರ್ಮವೂ ಸಡಿಲಗೊಂಡು ನೆರಿಗೆಗಳು ಮೂಡಲು ಪ್ರಾರಂಭವಾಗುತ್ತದೆ. ಇದರಿಂದಾಗಿ ಚಿಕ್ಕವಯಸ್ಸಿಗೇ ನೀವು ಮುದುಕರಂತೆ ಕಾಣುತ್ತಿರ

Comments are closed.