ಕರಾವಳಿ

ದೇಹದ ಆರೋಗ್ಯ ಮತ್ತು ಸೌಂದರ್ಯದ ಎರಡನ್ನು ಸರಿದೂಗಿಸಲು ಈ ಹಣ್ಣು ಸಹಕಾರಿ

Pinterest LinkedIn Tumblr

ಮಾರ್ಕೆಟ್​ನಲ್ಲಿ ಕಡಿಮೆ ಬೆಲೆಗೆ ಸಿಗುವ ಹಣ್ಣುಗಳ ಪೈಕಿ ಪಪ್ಪಾಯ ಕೂಡಾ ಒಂದು. ಬಹಳ ರುಚಿಯಾಗಿರುವ ಈ ಹಣ್ಣು ಎಲ್ಲರಿಗೂ ಅಚ್ಚುಮೆಚ್ಚು. ಆದ್ರೆ ಪಪ್ಪಾಯ ಹಣ್ಣಿನ ಬಗ್ಗೆ ತುಂಬಾ ಜನರು ತಪ್ಪಾಗಿ ತಿಳಿದುಕೊಂಡಿರುತ್ತಾರೆ. ಪಪ್ಪಾಯ ತಿಂದ್ರೆ ಹಾಗಾಗುತ್ತೆ.. ಹೀಗಾಗುತ್ತೆ.. ಎಂದೆಲ್ಲಾ ತಿಳ್ಕೊಂಡಿರ್ತಾರೆ. ಆದ್ರೆ, ನಿಮಗೆ ಗೊತ್ತಿಲ್ಲದ ಪಪ್ಪಾಯಿಯ ಆರೋಗ್ಯದ ಗುಟ್ಟು ಇಲ್ಲಿವೆ.
ಪಪ್ಪಾಯಿ ಹಣ್ಣಿನಲ್ಲಿ ಆಂಟಿ ಆಕ್ಸಿಡೆಂಟ್‌ಗಳು ಅಧಿಕ ಪ್ರಮಾಣದಲ್ಲಿದೆ. ಜೊತೆಗೆ ಕೆರೋಟಿನ್‌ಗಳು, ವಿಟಮಿನ್ ಸಿ, ಫೈಟೊನ್ಯೂಟ್ರಿಯಂಟ್​ಗಳು ಮತ್ತು ಪೊಟ್ಯಾಸಿಯಮ್, ಮೆಗ್ನೀಶಿಯಮ್, ವಿಟಮಿನ್ ಎ, ವಿಟಮಿನ್ ಇ ಮತ್ತು ವಿಟಮಿನ್​ ಬಿ ಫ್ಲಾವೊನಾಯ್ಡ್‌ಗಳಂತಹ ಪೋಷಕಾಂಶಗಳು ಸಹ ಅಧಿಕ ಪ್ರಮಾಣದಲ್ಲಿರುವುದರಿಂದ, ಇದು ದೇಹಕ್ಕೆ ಆರೋಗ್ಯ ಮತ್ತು ಸೌಂದರ್ಯದ ಪ್ರಯೋಜನಗಳನ್ನು ನೀಡುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ.

1. ಪಪ್ಪಾಯಗಳ ಕೆಲವು ಸಾಮಾನ್ಯ ಆರೋಗ್ಯ ಪ್ರಯೋಜನಗಳು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತವೆ. ಮತ್ತು ಪ್ರೋಟೀನ್​ಗಳನ್ನು ಅಗತ್ಯವಾದ ಅಮೈನೋ ಆಮ್ಲಗಳಾಗಿ ಪರಿವರ್ತಿಸುತ್ತವೆ. ಕಚ್ಚಾ ಪಪಾಯ ವಾಕರಿಕೆಯನ್ನು ಕಡಿಮೆ ಮಾಡಲು, ಕರುಳನ್ನು ಶುದ್ಧೀಕರಿಸುವುದು ಮತ್ತು ಮಲಬದ್ಧತೆಯನ್ನು ಕಡಿಮೆ ಮಾಡಲು ಸಹ ಕೆಲಸ ಮಾಡುತ್ತದೆ.
2. ಕಾಯಿ ಪಪ್ಪಾಯ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಈ ಹಣ್ಣಿನಲ್ಲಿ ವಿಟಮಿನ್ ಎ, ಸಿ ಮತ್ತು ಇ ಸಮೃದ್ಧವಾಗಿರುವುದರಿಂದ, ಸೋಂಕು, ಶೀತ ಮತ್ತು ಕೆಮ್ಮನ್ನು ತಡೆಗಟ್ಟುವಲ್ಲಿ ಸಹಾಯ ಮಾಡುತ್ತೆ.
3. ಹಸಿರು ಪಪ್ಪಾಯಿ ಮೂತ್ರದ ಸೋಂಕಿನಿಂದ ರಕ್ಷಣೆ ನೀಡುತ್ತವೆ.
4. ಹಸಿರು ಪಪ್ಪಾಯಿಯಲ್ಲಿ ಪೇಪೈನ್ ಮತ್ತು ಚಿಮೊಪಪೈನ್ ಎಂಬ ಅಂಶಗಳು ಸಮೃದ್ಧವಾಗಿರುವುದರಿಂದ, ಹೊಟ್ಟೆ ಆರೋಗ್ಯಕ್ಕೆ ಸಹಕಾರಿಯಾಗಿದೆ. ಹಸಿರು ಪಪ್ಪಾಯಿ, ಕಿತ್ತಳೆ ಹಣ್ಣಿಗಿಂತಲೂ ಹೆಚ್ಚು ಪಾಪೈನ್​ನನ್ನು ಹೊಂದಿದ್ದು, ಮಲಬದ್ಧತೆಯನ್ನ ನಿವಾರಿಸುತ್ತೆ. ಹಾಲುಣಿಸುವ ತಾಯಂದಿರಿಗೆ ಹಸಿರು ಪಪ್ಪಾಯಿ ಉತ್ತಮವಾಗಿದೆ. ಪಪ್ಪಾಯವನ್ನ ಸೇವಿಸುವುದರಿಂದ ಎದೆಹಾಲು ಉತ್ಪಾದನೆ ಹೆಚ್ಚಳವಾಗುತ್ತದೆ.
6. ಹಸಿರು ಪಪ್ಪಾಯಿ, ಕ್ಯಾಲೋರಿಗಳಲ್ಲಿ ಕಡಿಮೆಯಾಗಿದ್ದು, ತೂಕವನ್ನು ಇಳಿಸಲು ಯತ್ನಿಸುವವರಿಗೆ ಸಹಾಯ ಮಾಡುತ್ತೆ.
7. ಚರ್ಮದ ಆರೋಗ್ಯಕ್ಕಾಗಿ ಪಪ್ಪಾಯಿ ಉತ್ತಮವಾಗಿವೆ. ಆದುದರಿಂದ ಚರ್ಮದ ಆರೈಕೆಗೆ ಉಪಯೋಗಿಸುವ ಉತ್ಪನ್ನಗಳಾದ ಪೇಸ್ ವಾಶ್, ಬಾಡಿ ಲೋಶನ್, ಕೋಲ್ಡ್ ಕ್ರೀಮ್ ಗಳಲ್ಲಿ ಪಪ್ಪಾಯ ಬಳಸಲಾಗುತ್ತದೆ. ಚರ್ಮದಿಂದ ಸತ್ತ ಕೋಶಗಳನ್ನು ಕರಗಿಸಿ, ಆರೋಗ್ಯಕರ ಮತ್ತು ಹೊಳೆಯುವ ಕಾಂತಿಯುತ ಚರ್ಮವನ್ನು ನಿಮಗೆ ನೀಡುತ್ತೆ.

Comments are closed.