ಕರಾವಳಿ

ಡ್ರೈ ಸ್ಕಿನ್ ಸಮಸ್ಯೆಯಿಂದ ಸ್ವಲ್ಪ ರಿಲೀಫ್ ಪಡೆಯೋಕೆ ಈ ಟಿಪ್ಸ್​​

Pinterest LinkedIn Tumblr

ಚಳಿಗಾಲ ಬಂತೆಂದ್ರೆ ವಿಪರೀತ ಚಳಿ ಜೊತೆಗೆ ಡ್ರೈ ಸ್ಕಿನ್ ಸಮಸ್ಯೆ ಕಾಡುತ್ತೆ . ಮುಖ, ಕೈ-ಕಾಲಿನ ತೇವಾಂಶ ಕಡಿಮೆಯಾಗೋದಲ್ಲದೆ ಕಪ್ಪಾಗಿ ಕಾಣುತ್ತದೆ. ಕೂದಲು ಒಣಗಿದಂತಾಗಿ ಹುಲ್ಲಿನಂತೆ ಆಗುತ್ತದೆ. ಪಾದದ ಬಿರಕುನ ಸಮಸ್ಯೆ ಕೂಡ ಚಳಿಗಾಲದಲ್ಲಿ ಕಾಮನ್​. ಈಗಾಗಲೇ ಚಳಿಗಾಲ ಶುರುವಾಗಿರೋದ್ರಿಂದ ಇನ್ನೂ ಮೂರ್ನಾಲ್ಕು ತಿಂಗಳು ಈ ಎಲ್ಲಾ ಸಮಸ್ಯೆಗಳು ಕಾಡುತ್ತೆ. ಇದರಿಂದ ಸ್ವಲ್ಪ ರಿಲೀಫ್ ಪಡೆಯೋಕೆ ಈ ಟಿಪ್ಸ್​​ ಟ್ರೈ ಮಾಡಿ.

1. ಸೋಪ್​​ ಬಳಸುವುದನ್ನ ಅವಾಯ್ಡ್​ ಮಾಡಿ
ಚಳಿಗಾಲದಲ್ಲಿ ಚರ್ಮವನ್ನು ಅದೆಷ್ಟೇ ಆರೈಕೆ ಮಾಡಿದರೂ ಕಾಂತಿ ಕಳೆದುಕೊಳ್ಳುವುದು ಸಹಜ. ಕೆಲವು ಕ್ರೀಂಗಳನ್ನು ಬಳಸಿದರಂತೂ ಇರುವ ಕಾಂತಿಯನ್ನೂ ಚರ್ಮ ಕಳೆದುಕೊಳ್ಳುತ್ತದೆ. ಚಳಿಗಾಲದಲ್ಲಿ ತ್ವಚೆಯ ಆರೋಗ್ಯ ಕಾಪಾಡಿಕೊಳ್ಳಲು ನೀವು ದುಬಾರಿ ಕ್ರೀಮ್​ಗಳ ಮೊರೆ ಹೋಗಬೇಕಿಲ್ಲ. ಕೆಲವೊಂದು ಸಿಂಪಲ್​ ಟಿಪ್ಸ್​ ಫಾಲೋ ಮಾಡಿ. ಚಳಿಗಾಲದಲ್ಲಿ ಸೋಪ್​ ಬಳಕೆಯನ್ನ ಆದಷ್ಟು ಕಡಿಮೆ ಮಾಡಿ. ಸೋಪ್​ ಬದಲು ಕಡಲೆ ಹಿಟ್ಟನ್ನ ಬಳಸಿ. ಪಪ್ಪಾಯಿ, ಮಾವು, ಬಾಳೆಹಣ್ಣಿನ ಸಿಪ್ಪೆಗಳಿಂದ ಮುಖವನ್ನು ಚೆನ್ನಾಗಿ ಮಸಾಜ್ ಮಾಡಿ ತೊಳೆಯಬಹುದು.

2. ಹಾಲಿನ ಕೆನೆ
ಹಾಲು ಮತ್ತು ಹಾಲಿನ ಕೆನೆಯಲ್ಲಿ ಅತ್ಯುತ್ತಮ ನೈಸರ್ಗಿಕ moisturisers ಇವೆ. ಹಾಲಿನ ಕೆನೆ ಮತ್ತು ಕ್ರೀಮ್​ಗಳನ್ನ ನಿಮ್ಮ ಚರ್ಮಕ್ಕೆ ಹಚ್ಚಿ ಮಸಾಜ್ ಮಾಡುವುದರಿಂದ ಚರ್ಮ ಮೃದುವಾಗುತ್ತದೆ. ಅಲ್ಲದೇ ಚರ್ಮ ಡ್ರೈ ಆಗುವುದಿಲ್ಲ.

3. ತೆಂಗಿನ ಎಣ್ಣೆ
ತೆಂಗಿನ ಎಣ್ಣೆಯನ್ನ ಆಹಾರದಲ್ಲಿ ಬಳಸುವುದು ಆರೋಗ್ಯಕ್ಕೆ ಒಳ್ಳೆಯದು. ಅದರಂತೆ ನಿಮ್ಮ ದೇಹದಲ್ಲಿ ಕಾಂತಿಹೀನವಾ್ಇ ಕಾಣುವ ಭಾಗಕ್ಕೆ ತೆಂಗಿನ ಎಣ್ಣೆಯನ್ನ ಹಚ್ಚುವುದರಿಂದ ಡಲ್​ನೆಸ್​ ಕಡಿಮೆಯಾಗುತ್ತದೆ. ಹಾಗೇ ಡ್ರೈನೆಸ್​ ಕೂಡಾ ಕಡಿಮೆಯಾಗುತ್ತದೆ. ಸ್ನಾನಕ್ಕೂ ಮೊದಲು 10 ನಿಮಿಷಗಳ ಮುಂಚೆ ತೆಂಗಿನ ಎಣ್ಣೆಯಿಂದ ಮೈ ಕೈ ಮಸಾಜ್​ ಮಾಡಿ ಸ್ನಾನ ಮಾಡುವುದರಿಂದ ಡ್ರೈಸ್ಕಿನ್​ ಸಮಸ್ಯೆಯಿಂದ ಮುಕ್ತಿ ಹೊಂದಬಹುದು.

4. ಆಲಿವ್​ ಎಣ್ಣೆ
ಆಲಿವ್ ಎಣ್ಣೆಯಲ್ಲಿನ ಆರೋಗ್ಯಕರ ಕೊಬ್ಬಿನಂಶ ಆರೋಗ್ಯಕ್ಕೆ ಮಾತ್ರವಲ್ಲ, ಚರ್ಮದ ಆರೋಗ್ಯಕ್ಕೂ ಬಹಳ ಸಹಕಾರಿಯಾಗಿದೆ. ಚಳಗಾಲದಲ್ಲಿ ಡ್ರೈನೆಸ್​ ಸಮಸ್ಯೆಯಿಂದ ಮುಕ್ತಿ ಪಡೆಯಲು ಹಾಲು, ಜೇನುತುಪ್ಪ ಅಥವಾ ಇತರ ನೈಸರ್ಗಿಕ ಪದಾರ್ಥಗಳೊಂದಿಗೆ ಆಲಿವ್ ಆಯಿಲ್​ ಬೆರೆಸಿ ಫೇಸ್​ಪ್ಯಾಕ್​ ಹಾಕುವುದರಿಂದ ತೇವಾಂಶವನ್ನ ಲಾಕ್​ ಮಾಡಿ ಡ್ರೈನೆಸ್​ ಕಡಿಮೆಮಾಡುತ್ತದೆ.

5. ತುಪ್ಪ
ತುಪ್ಪ ಮತ್ತು ಬೆಣ್ಣೆ ಚರ್ಮಕ್ಕೆ ತೇವಾಂಶ ಒದಗಿಸುತ್ತವೆ. ಇದು ನಾವು ಸಾಮಾನ್ಯವಾಗಿ ಬಳಸುವ ಆಹಾರ ಪದಾರ್ಥವಾಗಿರುವುದಿಂದ ಮನೆಯಲ್ಲಿ ಸುಲಭವಾಗಿ ಸಿಗುತ್ತದೆ. ಚಳಿಗಾಲದಲ್ಲಿ ಮುಖ ತುಟಿ ಹಾಗೂ ಕೈ ಕಾಲುಗಳಿಗೆ ತುಪ್ಪ ಹಚ್ಚಿ, ಸ್ವಲ್ಪ ಹೊತ್ತಿನ ನಂತರ ಸ್ನಾನ ಮಾಡುವುದರಿಂದ ಡ್ರೈಸ್ಕಿನ್​ ಸಮಸ್ಯೆ ಇರುವುದಿಲ್ಲ.

6. ಜೇನುತುಪ್ಪ
ಜೇನುತುಪ್ಪವನ್ನು ಅನೇಕ ಫೇಸ್​ಪ್ಯಾಕ್​ಗಳಲ್ಲಿ ಬಳಸಲಾಗುತ್ತದೆ. ಇದು ಚರ್ಮವನ್ನ ಪರಿಣಾಮಕಾರಿಯಾಗಿ moisturise ಮಾಡುತ್ತದೆ. ಅದಕ್ಕಾಗಿ ನೀವು ಮಾಡಬೇಕಾಗಿರುವುದು ಇಷ್ಟೆ. ವಾರದಲ್ಲಿ ಮೂರು ಬಾರಿ ನಿಮ್ಮ ಮುಖ ಮತ್ತು ತೋಳುಗಳ ಮೇಲೆ ಜೇನುತುಪ್ಪವನ್ನು ಹಚ್ಚಿ ಸ್ವಲ್ಪ ಹೊತ್ತು ಬಿಟ್ಟು ತೊಳೆಯಿರಿ.

Comments are closed.