ಕರಾವಳಿ

ಓದಿ ಉದ್ಯೋಗ ಮಾಡುತ್ತಿರುವವರೆಲ್ಲಾ ದೊಡ್ಡವರಲ್ಲ..ಓದಿಲ್ಲದವರು ಚಿಕ್ಕವರಲ್ಲ.. ಯಾಕೆ ಈ ಮಾತು ಗೋತ್ತೆ.?

Pinterest LinkedIn Tumblr

ಓದು ಬರದವ ಯಾವುದಕ್ಕೂ ಕೆಲಸ ಬರಲ್ಲ ಎಂದು ಲೆಕ್ಕಾಚಾರ ಹಾಕುತ್ತಿರುವ ಸಮಾಜ, ಉದ್ಯೋಗ ಎಂದರೆ ಸಾಫ್ಟ್‌ವೇರ್ ಫೀಲ್ಡ್ ಮಾತ್ರ ಎಂದು ಭಾವಿಸಿರುವ ಯುವಕರಿಗೆ, ಓದಿಕೊಳ್ಳಲಿಲ್ಲ ಅಂದರೆ ಹಾಳಾಗೋಗ್ತೀಯ ಎಂದು ಬೈಯ್ಯುವ ತಂದೆತಾಯಂದಿರು… ಮಾರ್ಕ್ಸ್ ಹಿಂದೆ, ಪದವಿಗಳ ಸುತ್ತ ನಡೆಯುತ್ತಿರುವ ಇಂದಿನ ವಿದ್ಯಾಭ್ಯಾಸ ಎಲ್ಲದಕ್ಕೂ ಉತ್ತರ…ಈ ಸಾಫ್ಟ್‌ವೇರ್ ಉದ್ಯೋಗಿ, ಸಮೋಸಾ ಮಾರುವ ವ್ಯಕ್ತಿ ನಡುವಿನ ಸಂಭಾಷಣೆ. ಒಮ್ಮೆ ಕೇಳಿ ನೋಡಿ, ಅಕ್ಷರಶಃ ಸತ್ಯ ಅಂತ ನೀವೇ, ಬಾಯ್ತುಂಬ ಹೇಳ್ತೀರ. ಹಾಗೆ ಅಂತ…ವಿದ್ಯಾಭ್ಯಾಸ ಕೆಲಸಕ್ಕೆ ಬರಲ್ಲ ಎಂಬ ಉದ್ದೇಶವಲ್ಲ..ಡಿಗ್ನಿಟಿ ಆಫ್ ಲೇಬರ್ ಎಂಬುದು ನಮ್ಮ ಸಂದೇಶ!
ಆದಿನ ಎಂದಿನಂತೆ ಒಬ್ಬ ವ್ಯಕ್ತಿ ತನ್ನ ಆಫೀಸ್ ಕೆಲಸ ಮುಗಿಸಿಕೊಂಡು ಲೋಕಲ್ ಟ್ರೈನ್‌ನಲ್ಲಿ ಹೊರಟ.. ತನ್ನ ಮುಂದೆ ಒಬ್ಬ ಹನ್ನೆರಡು ವರ್ಷದ ಹುಡುಗ ಖಾಲಿ ಬುಟ್ಟಿಯೊಂದಿಗೆ ಸ್ವಲ್ಪ ಸುಸ್ತಾದಂತೆ ಕಾಣಿಸಿದ..

“ನಾನು ಏನ್ ತಮ್ಮ!! ಪೂರ್ತಿ ಮಾರಿಬಿಟ್ಟಾ ಸಮೋಸಾಗಳು”
“ಹೌದು ಸಾರ್!”
“ಪಾಪ ದಿನವೆಲ್ಲಾ ಕಷ್ಟಪಡ್ತಿದ್ದೀಯ?”
“ಹೌದು ಸಾರ್!! ಏನ್ ಮಾಡೋಣ ಹೊಟ್ಟೆಪಾಡಿಗೆ ಮಾಡ್ಲೇಬೇಕಲ್ಲ”
“ಒಂದು ಸಮೋಸಾ ಮಾರಿದರೆ ಎಷ್ಟು ಸಿಗುತ್ತೆ?”
“ಎಪ್ಪತ್ತೈದು ಪೈಸೆ ಬರುತ್ತೆ ಸಾರ್!!”
“ದಿನಕ್ಕೆ ಎಷ್ಟು ಸಮೋಸಾ ಮಾರ್ತೀಯಾ?”
“ಜನ ಜಾಸ್ತಿ ಇದ್ದಾಗ ಸುಮಾರು 3,000 – 3,500 ಮಾರ್ತೀನಿ…ಸರಾಸರಿ ಒಂದು ದಿನಕ್ಕೆ 2,000 ಅಂತೂ ಗ್ಯಾರಂಟಿಯಾಗಿ ಮಾರ್ತೀನಿ ಸಾರ್!!”
ನನ್ನ ಮಿದುಳು ಒಮ್ಮೆಲೆ ಲೆಕ್ಕಾಚಾರ ಹಾಕಲು ಶುರು ಮಾಡಿತು… ದಿನಕ್ಕೆ 2,000 ಅಂದರೆ 1,500 ರೂ.. ತಿಂಗಳಿಗೆ 45,000. ಅಯ್ಯೋ ದೇವರೇ…ನನ್ನ ತಿಂಗಳ ಸಂಬಳ 15,000 ಮಾತ್ರ..ಇವನು ನನಗಿಂತಲೂ ಚೆನ್ನಾಗಿದ್ದಾನೆ ಎಂದುಕೊಂಡೆ.
“ಲೋ ತಮ್ಮ ನೀವೇ ತಯಾರಿಸ್ತೀರಾ ಇದನ್ನು”
“ಇಲ್ಲ ಅಣಾ ನಮ್ಮ ಯಜಮಾನರು ಬೇರೆಯವರ ಬಳಿ ಕೊಂಡು ನನಗೆ ಕೊಡ್ತಾರೆ”
“ಇದಲ್ಲದೆ ಬೇರೆ ಏನ್ಮಾಡ್ತೀಯಾ?”
“ಬೇರೆ ರಿಯಲ್ ಎಸ್ಟೇಟ್ ಬಿಜಿನೆಸ್ ಮಾಡ್ತೀನಣಾ…ಹೋದ ವರ್ಷ ಒಂದು ಎಕರೆ ಜಮೀನು ತಗೊಂಡೆ…ಅಕ್ಕನಿಗೆ ಮದುವೆ ಮಾಡಿದೆ..”
“ಆ ಹೊಲದ ಬೆಲೆ ಈಗ ಸುಮಾರು ಹದಿನೇಳು ಲಕ್ಷಗಳಷ್ಟಿರುತ್ತದೆ..????????
ನನಗೆ ಮಾತು ಹೊರಡಲಿಲ್ಲ..ಏನೋ ಅಂದುಕೊಳ್ಳುತ್ತೇವೆ ಆದರೆ ಇವನ ಸಂಪಾದನೆ ಮುಂದೆ ನಾವೆಷ್ಟು..ಎಂದುಕೊಂಡು
“ತಮ್ಮ ಏನ್ ಓದಿದ್ದೀಯಾ?
“ಮೂರನೇ ತರಗತಿ…”
ಯಾಕೆ ಮುಂದೆ ಓದಬೇಕು ಅಂತ ಅನ್ನಿಸ್ಲಿಲ್ವಾ!!!
“ಸಾರ್ ನನ್ನ ವ್ಯಾಪಾರ ನನ್ನ ಮಕ್ಕಳಿಗೆ ಕೊಡಬಹುದು..ಆದರೆ ನಿನ್ನ ಉದ್ಯೋಗ ನಿಮ್ಮ ಮಕ್ಕಳಿಗೆ ಕೊಡಕ್ಕೆ ಆಗಲ್ಲ!! ಇದೇ ನನ್ನಪ್ಪ ನನಗೆ ಕಲಿಸಿದ ನೀತಿ..ಆದರೆ ಹಣ ಹೇಗೆ ಸಂಪಾದಿಸಬೇಕು ಅರ್ಥ ಆಗಿದೆ..ಇನ್ನು ನನಗೆ ವಿದ್ಯಾಭ್ಯಾಸ ಬೇಕಿಲ್ಲ..
“ಅಬ್ಬಾ ಎಂತ ದೊಡ್ಡ ನೀತಿ ಸೂತ್ರ!!!
“ಅಣ್ಣಾ ನನ್ನ ಸ್ಟೇಷನ್ ಬಂತು ಬರ್ತೀನಿ!!!

ಈಗ ಹೇಳಿ…ಓದಿಕೊಂಡು ಉದ್ಯೋಗ ಮಾಡುತ್ತಿರುವವರೆಲ್ಲಾ ದೊಡ್ಡವರಲ್ಲ..ಓದಿಲ್ಲದವರು ಚಿಕ್ಕವರಲ್ಲ…ನಮ್ಮ ಪ್ರತಿಭೆ ಎಲ್ಲಿದೆಯೋ ಗುರುತಿಸಿ ಅದನ್ನು ಒಂದು ರೀತಿಯಲ್ಲಿ ಬಳಸಿಕೊಂಡರೆ..ನಾಳೆ ನಮ್ಮದೇ…

ನೋಟ್: ಇದೇನೋ ಸಮೋಸಾ ಮಾರುವವನೊಂದಿಗೋ..ತಳ್ಳೋ ಗಾಡಿಯವನೊಂದಿಗೋ ಹೋಲಿಸಿಕೊಳ್ಳಿ ಅಂತ ಹೇಳ್ತಿಲ್ಲ..ನಾವು ಮಾಡುವ ಕೆಲಸದಲ್ಲಿ ತಪ್ಪು ಇಲ್ಲದಿದ್ದಾಗ ಕೆಲವು ಜಾಗ್ರತೆಗಳನ್ನು ತೆಗೆದುಕೊಂಡು ಅವಕಾಶಗಳನ್ನು ಹುಡುಕುವುದರಲ್ಲಿ ತಪ್ಪಿಲ್ಲ..ಇದನ್ನೇ ’ಡಿಗ್ನಿಟಿ ಆಫ್ ಲೇಬರ್’ ಅಂತಾರೆ. (ವಿದೇಶಗಳಲ್ಲಿ ಓದಿಕೊಳ್ಳಲು ಹೋಗಿ ಅಲ್ಲಿ ಕೆಲಸ ಮಾಡುವ ಎಷ್ಟೋ ಮಿತ್ರರ ಕಥೆಗಳಿಗೆ ಸ್ಫೂರ್ತಿಯಾಗಿ ಈ ಕಥೆ)

ವರದಿ: ap2tg

Comments are closed.