ಕರಾವಳಿ

ದೇಹದ ಕೊಬ್ಬು ಹಾಗೂ ತೂಕ ಇಳಿಸುವಲ್ಲಿ ರಾಗಿ ಸಹಕಾರಿ.

Pinterest LinkedIn Tumblr

ರಾಗಿ ಸೇವಿಸುವುದರಿಂದ ನಿರೋಗಿ ಯಾಗಿರಬಹುದು ಎಂಬ ಮಾತಿದೆ. ಆದ್ದರಿಂದಲೇ ಹಿಟ್ಟು ತಿಂದು ಗಟ್ಟಿಯಾ  ಗು ಎನ್ನುತ್ತಾರೆ. ಅತಿ ಕಡಿಮೆ ಬೆಲೆಗೆ ಸಿಗುವ ಧಾನ್ಯ ರಾಗಿ. ಆದರೆ ಇದರಲ್ಲಿರುವ ಪೌಷ್ಟಿಕಾಂಶ ಅಪಾರ. ಪ್ರೋಟಿನ್, ಕೊಬ್ಬು, ಪಿಷ್ಟ, ಖನಿಜ, ಸುಣ್ಣ, ನಾರು, ಮುಂತಾದವುಗಳಿಂದ ಸಮೃದ್ಧವಾಗಿರುವ ರಾಗಿಯನ್ನು ನಿತ್ಯದ ಆಹಾರದಲ್ಲಿ ಬಳಸುವುದು ಒಳ್ಳೆಯದು.ಇದು ರುಚಿಯಲ್ಲಿ ಸಪ್ಪೆಯಾಗಿದ್ದು, ಬಣ್ಣ ಕಪ್ಪಗಿರುವುದರಿಂದ ಹೆಚ್ಚಿನವ-ರಿಗೆ ಇಷ್ಟವಾಗುವುದಿಲ್ಲ. ಆದರೆ ದೇಹದಲ್ಲಿ ಜಾದು ಮಾಡುವ ಶಕ್ತಿ ರಾಗಿಗಿದೆ. ರಾಗಿ ತಂಪು ಮತ್ತು ಆರೋಗ್ಯವರ್ಧಕ.

ಮೂಳೆಗಳನ್ನು ಬಲಪಡಿಸುವ ಶಕ್ತಿ ಹೊಂದಿರುವ ರಾಗಿಯಲ್ಲಿ ಹೆಚ್ಚಿನ ಪ್ರಮಾಣದ ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ಇದೆ. ಮಕ್ಕಳು ಹಾಗೂ ವೃದ್ಧರಿಗೆ ಅವಶ್ಯಕವಾಗಿರುವ ಹಲವು ಪ್ರಯೋಜನಕಾರಿ ಅಂಶಗಳು ರಾಗಿಯಲ್ಲಿವೆ.

ಮಧುಮೇಹಿಗಳಿಗಂತೂ ರಾಗಿ ಪರಿಪೂರ್ಣ ಆಹಾರ. ರಾಗಿಯಲ್ಲಿರುವ ಅಮೀನೋ ಆಸಿಡ್ ಲೆಸಿತಿನ್ ಹಾಗೂ ಮೆಥೊನಿನ್ ಜೀರ್ಣಾಂಗವ್ಯೂಹದಲ್ಲಿರುವ ಹೆಚ್ಚುವರಿ ಕೊಬ್ಬನ್ನು ಕಡಿಮೆಗೊಳಿಸಿ ಕೊಲೆಸ್ಟ್ರಾಲ್ ಮಟ್ಟವನ್ನು ಸುಧಾರಿಸುತ್ತದೆ. ಅನಿಮಿಕ್ ಆಗಿರುವವ- ರಿಗಂತೂ ಇದು ಅತ್ಯುತ್ತಮ. ಏಕೆಂದರೆ ಇದರಲ್ಲಿ ನೈಸರ್ಗಿಕ ಮೂಲಕ ಕಬ್ಬಿಣಾಂಶವಿದೆ.ರಾಗಿಯ ಮತ್ತೊಂದು ವಿಶೇಷ ಗುಣವೆಂದರೆ ಒತ್ತಡದಿಂದ ಬಿಡುಗಡೆ ಹೊಂದಿ ಆರಾಮಾಗಲು ಸಹಾಯ ಮಾಡುತ್ತದೆ.

ಒತ್ತಡದಲ್ಲಿರುವವರು ಅದರಿಂದ ಬಿಡುಗಡೆ ಹೊಂದಬೇಕಾದರೆ ರಾಗಿ ಸೇವನೆ ಅವಶ್ಯಕ. ಸಾಮಥ್ರ್ಯ ಹಾಗೂ ರೋಗನಿರೋಧಕ ವ್ಯವಸ್ಥೆ ಸುಧಾರಣೆಗೆ ರಾಗಿ ಸೇವನೆ ಒಳ್ಳೆಯದು. ಇದರಲ್ಲಿರುವ ಪ್ರೋಟಿನ್, ವಿಟಮಿನ್‍ಗಳು ದೇಹವನ್ನು ಆರೋಗ್ಯ ಪೂರ್ಣವಾಗಿ ಸುತ್ತದೆ. ರಾಗಿಯಲ್ಲಿರುವ ನಾರಿನಂಶವು ಮಲಬದ್ಧತೆಯನ್ನು ನಿವಾರಿಸುತ್ತದೆ. ಹಿಮೋಗ್ಲೋಬಿನ್ ಮಟ್ಟ ಸುಧಾರಿಸುವ ಶಕ್ತಿ ರಾಗಿಗಿದೆ. ಇದು ಪಿತ್ತಹರವಾಗಿದ್ದು, ನಿತ್ಯ ರಾಗಿ ಗಂಜಿ ಸೇವಿಸಿದರೆ ದೇಹ ತಂಪಾಗಿರುತ್ತದೆ, ರಕ್ತವೃದ್ಧಿಯಾಗುತ್ತದೆ. ನಿತ್ಯ ರಾಗಿ ಗಂಜಿ ಸೇವನೆಯಿಂದ ವಿಟಮಿನ್ ಮಾತ್ರೆಗಳ ಅವಶ್ಯಕತೆಯೂ ಇರುವುದಿಲ್ಲ.

Comments are closed.