ಕರಾವಳಿ

ಈ ಎಣ್ಣೆಯನ್ನು ಎಲ್ಲದಕ್ಕೂ ಬಳಸುವುದು ಉತ್ತಮವಲ್ಲ

Pinterest LinkedIn Tumblr

ಸಾಮಾನ್ಯವಾಗಿ ಜನ ತೆಂಗಿನ ಎಣ್ಣೆ ಎಲ್ಲಾ ರೀತಿಯಿಂದಲೂ ಉಪಯುಕ್ತವಾದುದು ಅಂತಲೇ ತಿಳಿದಿದ್ದಾರೆ. ಆದರೆ ತೆಂಗಿನ ಎಣ್ಣೆಯನ್ನು ಎಲ್ಲದಕ್ಕೂ ಬಳಸಲು ಸಾಧ್ಯವಿಲ್ಲ. ಕೆಲ ಸಂದರ್ಭಗಳಲ್ಲಿ ನಾವು ತೆಂಗಿನಎಣ್ಣೆಯನ್ನು ಬಳಸಬಾರದು.

ತೆರೆದ ಗಾಯಗಳಿಗೆ:
ಸಣ್ಣ ಪುಟ್ಟ ಗಾಯಗಳಿಗೆ ಹಾಗೂ ಸುಟ್ಟ ಗಾಯಗಳಿಗೆ ತೆಂಗಿನ ಎಣ್ಣೆ ಹಚ್ಚುವುದರಿಂದ ಇನ್ನಷ್ಟು ಕಿರಿಕಿರಿ ಉಂಟಾಗುತ್ತದೆ. ಅಷ್ಟೇ ಅಲ್ಲದೆ ಗಾಯದ ಸುತ್ತ ಕೆಂಪಗಾಗುತ್ತದೆ.

ಬಾಯಿಯಲ್ಲಿ ತೆಂಗಿನಎಣ್ಣೆ ತುಂಬುವುದು:
ಹಿಂದಿನ ಕಾಲದಲ್ಲಿ ಬಾಯಲ್ಲಿ ಎಣ್ಣೆ ಹಾಕಿ ಉಗುಳುವುದರಿಂದ ಹಲ್ಲು ಆರೋಗ್ಯಯುತವಾಗಿರುತ್ತದೆ ಎಂಬ ಮಾತಿತ್ತು. ಆದರೆ ಈಗ ದಂತ ವೈದ್ಯರ ಪ್ರಕಾರ ಈ ಪ್ರಯೋಗ ಯಾವುದೇ ಪ್ರಯೋಜನವನ್ನು ನೀಡುವುದಿಲ್ಲ.

ಸ್ನಾನಕ್ಕೆ :
ಮೈಗೆ ಎಣ್ಣೆ ಹಚ್ಚುವುದರಿಂದ ನಿಮ್ಮ ಚರ್ಮ ನಯವಾಗಬಹುದು ಆದರೆ ಸ್ನಾನಕ್ಕೆ ಎಣ್ಣೆ ಬಳಸುವುದರಿಂದ ಹೆಚ್ಚು ಜಿಡ್ಡನ್ನುಂಟುಮಾಡಬಹುದು. ಅಷ್ಟೇ ಅಲ್ಲದೆ ಬಾತ್‍ರೂಮ್‍ನಲ್ಲಿ ಎಣ್ಣೆ ಅಂಶ ನೆಲದಲ್ಲಿ ನಿದ್ದಿರುವುದರಿಂದ ಕಾಲು ಜಾರಿಬೀಳುವ ಸಾಧ್ಯತೆ ಹೆಚ್ಚು.

ತೆಂಗಿನಎಣ್ಣೆಯಲ್ಲಿ ಡೀಪ್ ಫ್ರೈ ಮಾಡುವುದು:
ಸಂಸ್ಕರಿಸದ ತೆಂಗಿನಎಣ್ಣೆಯಲ್ಲಿ ಹೊಗೆ ಪ್ರಮಾಣ ಕಡಿಮೆ ಇರುತ್ತದೆ. ಹಾಗಾಗಿ ಅದನ್ನು ಆಹಾರವನ್ನು ಕರಿಯಲು ಬಳಸಬಾರದು. ಸಂಸ್ಕರಿಸಿದ ತೆಂಗಿನ ಎಣ್ಣೆಯಲ್ಲಿ ಹೊಗೆ ಪ್ರಮಾಣ ಅಧಿಕವಿರುವುದರಿಂದ ಅದು ಆಹಾರ ಕರಿಯಲು ಸೂಕ್ತವಾಗಿದೆ.

Comments are closed.