ದೀಪ ಬೆಳಗದ ಮನೆ ಪಾಳುಬಿದ್ದ ಸ್ಮಶಾನಕ್ಕೆ ಸಮಾನ. ಮನೆಯನ್ನು ಸ್ವಚ್ಛವಾಗಿ ನೀಟಾಗಿ ವರೆಸಿ.. ದೇವರಿಗೆ ಪೂಜೆ ಮಾಡಿ.. ದೀಪ ಬೆಳಗಬೇಕು. ನಿತ್ಯ ದೀಪ ಬೆಳಗುವುದರಿಂದ ಆ ಮನೆಗೆ ಒಳ್ಳೆಯದಾಗುತ್ತದೆ. ಆದರೆ, ಆಂಜನೇಯ ಸ್ವಾಮಿ ಅನುಗ್ರಹ ಪಡೆಯಬೇಕಾದರೆ.. ಬಿಳಿ ಎಕ್ಕದ ಹತ್ತಿ, ಹಿಪ್ಪೆ ಎಣ್ಣೆಯಿಂದ ಐದು ದೀಪಗಳನ್ನು, ಐದು ವಾರಗಳ ಕಾಲ ಬೆಳಗಬೇಕು. ಈ ರೀತಿ ಬೆಳಗಿದರೆ.. ಮನೆಯಲ್ಲಿ ಇರುವ ದುಷ್ಟ ಶಕ್ತಿಗಳು ಹೊರಗೆ ಹೋಗುತ್ತವೆ. ಆಂಜನೇಯನು ಲಕ್ಷ್ಮಿದೇವಿಯನ್ನು ನಿಮ್ಮ ಮನೆಯಲ್ಲೇ ಇರುವಂತೆ ಮಾಡುತ್ತಾನೆ. ಇನ್ನು ಬಿಳಿ ಎಕ್ಕದ ಹೂಗಳಿಂದ ಮಾಡಿದ ಮಾಲೆಯಿಂದ ಶಿವಲಿಂಗಕ್ಕೆ ಪೂಜೆ ಮಾಡುತ್ತಾರೆ. ಬಿಳಿ ಎಕ್ಕದ ಗಿಡದ ಎಲೆಗಳಿಂದ ಸೂರ್ಯನನ್ನು ಪೂಜಿಸುತ್ತಾರೆ. ಬಿಳಿ ಎಕ್ಕದ ಸೌಧೆಯಿಂದ ಸೂರ್ಯ ಹೋಮ ಮಾಡುತ್ತಾರೆ. ಎಕ್ಕದ ಗಿಡ ಮಳೆಯ ಅಭಾವ ಇರುವ ಪ್ರದೇಶಗಳಲ್ಲಿ ಬೆಳೆಯುತ್ತದೆ. ಇದಕ್ಕೆ ಹೆಚ್ಚಾಗಿ ನೀರು ಬೇಕಾಗಿಲ್ಲ.
ಈ ಗಿಡದ ಎಲೆಗಳು ಮಂದವಾಗಿ ದೃಢವಾಗಿ ಇರುತ್ತವೆ. ಇವು ಹೀರಿಕೊಂಡ ನೀರನ್ನು ಮಂದ ದ್ರವವಾಗಿ ಬದಲಾಯಿಸಿ ಸಂಗ್ರಹಿಸಿಕೊಳ್ಳುತ್ತವೆ. ಇನ್ನು ಎಲೆಗಳ ಮೇಲೆ, ಕಾಂಡದ ಮೇಲೆ ಚಿಕ್ಕ ಚಿಕ್ಕ ಹೊಟ್ಟು ಇರುತ್ತದೆ. ಇದು ನೀರನ್ನು ವ್ಯರ್ಥವಾಗಿ ಹೊರಹೋಗದಂತೆ ತಡೆಯುವಲ್ಲಿ ಸಹಕಾರಿ. ಎಕ್ಕವನ್ನು ಆಯುರ್ವೇದದಲ್ಲಿ ಸಹ ಉಪಯೋಗಿಸುತ್ತಾರೆ. ಎಕ್ಕದ ಗಿಡದಿಂದ ಬರುವ ರೆಸಿನನ್ನು ಆಯುರ್ವೇದಲ್ಲಿ ಉಪಯೋಗಿಸುತ್ತಾರೆ.
ಇನ್ನೂ ಎಕ್ಕದ ಗಿಡದ ಬೇರನ್ನು ಶುಭಮುಹೂರ್ತದಲ್ಲಿ ಅಗೆದು ತೆಗೆದುಕೊಳ್ಳುತ್ತಾರೆ. ಇದಕ್ಕೆ ಭಾನುವಾರ ಪುಷ್ಯ ನಕ್ಷತ್ರ ಆದರೆ ಒಳ್ಳೆಯದೆಂದು ಶಾಸ್ತ್ರಜ್ಞರು ಹೇಳುತ್ತಾರೆ. ಬೇರು ತೆಗೆದುಕೊಳ್ಳಬೇಕಾದ ಗಿಡವನ್ನು ಗುರುತಿಸಿ ಹಿಂದಿನ ದಿನ ಸಂಜೆ ಅಲ್ಲಿಗೆ ಹೋಗಬೇಕು. ಹೋಗುವ ಸಮಯದಲ್ಲಿ ಕೆಂಪಗಿನ ದಾರ, ಕುಂಕುಮ, ಸಿಂಧೂರ, ಧೂಪ, ಬೆಂಕಿಕಡ್ಡಿ ತೆಗೆದುಕೊಂಡು ಹೋಗಬೇಕು. ಯಾವ ಗಿಡವನ್ನು ಗುರುತಿಸಿದ್ದೇವೋ ಆ ಗಿಡದ ಬಳಿ ಪೂಜೆ ಮಾಡಬೇಕು. ಬಿಳಿ ಎಕ್ಕ ಎಂದರೆ ಗಣಪತಿಗೆ ತುಂಬಾ ಇಷ್ಟ. ಹಾಗಾಗಿ ಎಕ್ಕದ ಗಿಡಕ್ಕೆ ಪೂಜೆ ಮಾಡುವ ಸಂದರ್ಭದಲ್ಲಿ ಆ ಗಿಡವನ್ನು ಗಣಪತಿ ಎಂದು ಭಾವಿಸಿ ಪೂಜಿಸಬೇಕು.
ಈ ರೀತಿ ಪೂಜೆ ಮಾಡಿದ ಬಳಿಕ ಮನೆಗೆ ಬರಬೇಕು. ಮರುದಿನ ಶುಚಿಯಾಗಿ ಸ್ನಾನ ಮಾಡಿ..ಎಕ್ಕದ ಗಿಡದ ಬಳಿಗೆ ಬಂದು ಎಚ್ಚರದಿಂದ ಅಗೆದು ಬೇರು ತೆಗೆದುಕೊಳ್ಳಬೇಕು. ಅದೃಷ್ಟ ಚೆನ್ನಾಗಿದ್ದರೆ ಬೇರು ಥೇಟ್ ಗಣಪತಿ ಆಕಾರದಲ್ಲಿ ಇರುತ್ತದೆ. ಈ ಶ್ವೇತ ಎಕ್ಕಕ್ಕೆ ಪೂಜೆ ಮಾಡುವುದರಿಂದ ಕರಗದ ಸಂಪತ್ತು ನಿಮಗೆ ಲಭ್ಯವಾಗುತ್ತದೆ.
ಎಕ್ಕ ಗಿಡ, ಅರ್ಕ ಅಥವಾ ದೇವ ರೇಖಾ ಎಂಬ ಹೆಸರಿನಿಂದ ಕರೆಯಲ್ಪಡುವ ಒಂದು ಜಾತಿಯ ಹೇರಳವಾದ ಔಷಧ ಗುಣ ಹೊಂದಿರುವ ಸಸ್ಯಕ್ಕೆ ಈಗ ಬಹು ಬೇಡಿಕೆ ಬಂದಿದೆ.
ಚರ್ಮ ಸುಕ್ಕುಗಟ್ಟಿದರೆ, ವಿಷದ ಮುಳ್ಳು ತಾಗಿದರೆ, ಜಾನುವಾರುಗಳಿಗೆ ಕಾಲುಬಾಯಿ ಜ್ವರ ಬಂದರೆ, ಮನುಷ್ಯರ ಮೇಲಿನ ಕೆಡು ನಾಶಕ್ಕೆ ಈ ಸಸ್ಯದ ಔಷಧ ರಾಮಬಾಣವಾಗಿದೆ ಎನ್ನುತ್ತಾರೆ ಆಯುರ್ವೇದ ಪಂಡಿತರು.
ಈ ಸಸ್ಯದ ಬಗ್ಗೆ ಹಿರಿಯ ತಲೆಮಾರಿಗೆ ಪರಿಚಯವಿದ್ದರೂ ಯುವ ಜನಾಂಗಕ್ಕೆ ಅರಿವಿನ ಕೊರತೆ ಇದೆ. ಔಷಧ ಗುಣವುಳ್ಳ ಈ ಸಸ್ಯ ಪ್ರಬೇಧವನ್ನು ಯಾರೂ ನೆಟ್ಟು ಬೆಳೆಸುವುದೇ ಇಲ್ಲ . ಇದು ಎಲ್ಲೋ ರಸ್ತೆ ಬದಿಯಲ್ಲಿ ಪ್ರಕೃತಿದತ್ತವಾಗಿ ಬೆಳೆಯುವ ರಸ್ತೆ ಬದಿಯ ಸಂಜೀವಿನಿ ಎಂದರೂ ತಪ್ಪಾಗಲಾರದು. ಕರಿ ಎಕ್ಕ ಮತ್ತು ಬಿಳಿ ಎಕ್ಕ ಎನ್ನುವುದು ಇದರ ಪ್ರಭೇದ. ಬಿಳಿ ಎಕ್ಕ ಅತ್ಯಂತ ಹೆಚ್ಚು ಔಷಧ ಗುಣವನ್ನು ಹೊಂದಿದ್ದು, ಧಾರ್ಮಿಕವಾಗಿ ಇದನ್ನು ಕೆಲವೊಂದು ವಿವಿಧಿವಿಧಾನಗಳಿಗೆ ಬಳಕೆ ಮಾಡುತ್ತಾರೆ. ಹಿಂದೂ ಧರ್ಮ ಶಾಸ್ತ್ರ ಪ್ರಕಾರ ಬಿಳಿ ಎಕ್ಕ ಗಿಡಕ್ಕೆ ಹೆಚ್ಚು ಪ್ರಾಶಸ್ತ್ಯ ಇದೆ.
ಎಲೆಯಲ್ಲೇ ಹಾಲು: ದಪ್ಪವಾದ ಎಲೆಯನ್ನು ಹೊಂದಿರುವ ಗಿಡದ ಕಾಂಡದಲ್ಲೂ ಸ್ವಲ್ಪಮಟ್ಟಿನ ಹಾಲು ಇದ್ದರೆ ಎಲೆಯಲ್ಲಿ ಧಾರಾಳವಾಗಿ ಹಾಲು ದೊರೆಯುತ್ತದೆ. ಸ್ವಲ್ಪ ಚಿವುಟಿದರೆ ಸಾಕು ಹಾಲು ಚಿಮ್ಮುತ್ತದೆ. ಇದರ ಹಾಲು ಅತ್ಯಂತ ಖಾರವಾಗಿರುತ್ತದೆ ಮತ್ತು ಕಣ್ಣಿಗೆ ತಾಗಿದರೆ ಅಪಾಯವೂ ಇದೆ. ಈ ಕಾರಣಕ್ಕೆ ಇದರ ಎಲೆಯನ್ನು ಚಿವುಟುವ ಪ್ರಯತ್ನಕ್ಕೆ ಯಾರೂ ಮುಂದಾಗುವುದಿಲ್ಲ. ಹಾಲು ಎಷ್ಟು ಅಪಾಯಕಾರಿಯಾಗಿದೆಯೋ ಅದಕ್ಕಿಂತ ದುಪ್ಪಟ್ಟು ಔಷಧ ಗುಣವನ್ನು ಹೊಂದಿದೆ ಎನ್ನುತ್ತಾರೆ ಆಯುರ್ವೆದ ವೈದ್ಯರು.
ಚರ್ಮಸುಕ್ಕುಗಟ್ಟಿದರೆ ಲೇಪ ಹಚ್ಚಿ: ಹೆಚ್ಚಾಗಿ ಮಹಿಳೆಯರ ಮುಖದಲ್ಲಿ ಚರ್ಮ ಸುಕ್ಕುಗಟ್ಟಿದ ರೀತಿಯಲ್ಲಿ ಕಪ್ಪು ಕಲೆಗಳು ಕಾಣಿಸಿಕೊಳ್ಳುತ್ತದೆ. ಇದು ವಾಸಿಯಾಗಬೇಕಾದರೆ ತುಂಬಾ ದುಬಾರಿ ಔಷಧಿಯನ್ನು ಬಳಕೆ ಮಾಡಬೇಕು. ಆದರೆ ಎಕ್ಕದ ಹಾಲಿನ ಜತೆ ಎಕ್ಕ ಗಿಡದ ಬೇರನ್ನು ಅರೆದು ಲಿಂಬೆ ರಸದ ಜತೆ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿದರೆ ಕಪ್ಪುಕಲೆಗಳು ವಾಸಿಯಾಗುತ್ತದೆ ಅಥವಾ ಎಕ್ಕದ ಹಾಲಿನ ಜತೆ ಅರಿಶಿನವನ್ನು ಮಿಕ್ಸ್ ಮಾಡಿ ಹಚ್ಚಿದರೆ ಮುಖ ಕ್ರಾಂತಿ ಹೆಚ್ಚಾಗುತ್ತದೆ.
ವಿಷದ ಮುಳ್ಳು ತಾಗಿದರೆ: ಕಾಲಿಗೆ ಅಥವಾ ದೇಹದ ಯಾವುದೇ ಭಾಗಕ್ಕೂ ವಿಷದ ಮುಳ್ಳು ಚುಚ್ಚಿ ಅದರಿಂದ ಗಾಯವಾಗಿದ್ದರೆ ಅದಕ್ಕೆ ಎಕ್ಕದ ಹಾಲನ್ನು ನೇರವಾಗಿ ಹಚ್ಚಿದರೆ ನೋವು ತಕ್ಷ ಣ ಕಡಿಮೆಯಾಗುತ್ತದೆ. ಕಾಲಿಗೆ ಚೇಳು ಕಚ್ಚಿದರೆ ಇದರ ಹಾಲನ್ನೇ ಉಪಯೋಗಿಸಬಹುದಾಗಿದೆ . ಹಾಲನ್ನು ಹಚ್ಚಿದರೆ ಯಾವುದೇ ಅಡ್ಡ ಪರಿಣಾಮವಿಲ್ಲ ಎನ್ನುತ್ತಾರೆ ವೈದ್ಯರು.
ಕಾಲುಬಾಯಿ ರೋಗಕ್ಕೂ ಮದ್ದು: ದನಗಳಿಗೆ ಅಥವಾ ಮೇಕೆಗಳಿಗೆ ಕಾಲು ಬಾಯಿ , ಬಾಯಿ ಹುಣ್ಣು, ನಾಲಗೆಯಲ್ಲಿ ಹುಣ್ಣು ಕಾಣಿಸಿಕೊಂಡರೆ ಇದರ ಎಲೆ, ಕಾಯಿ ಹೂ, ಮತ್ತು ಬೇರನ್ನು ಬೇಯಿಸಿ ಅದಕ್ಕೆ ಉಪ್ಪು ಹಾಕಿ ಅದರ ರಸವನ್ನು ಕುಡಿಸಿದರೆ ಉತ್ತಮ ಫಲಿತಾಂಶವನ್ನು ಪಡೆದುಕೊಳ್ಳಬಹುದು. ದನ ಮತ್ತು ಮೇಕೆಗಳಿಗೆ ಅಜೀರ್ಣವಾದರೂ ಇದರ ಸೊಪ್ಪನ್ನು ಬೇಯಿಸಿ ಹಿಂಡಿ ಜೊತೆ ನೀಡುವುದು ಅಥವಾ ಅದನ್ನು ಅವುಗಳಿಗೆ ತಿನ್ನಿಸಿದರೆ ಅಜೀರ್ಣ ಕಾಯಿಲೆ ವಾಸಿಯಾಗುತ್ತದೆ.
ಕೆಡು ಮಾಯ: ದೇಹದ ಮೇಲೆ ಕೆಡುಗಳಿದ್ದರೆ ಅದಕ್ಕೆ ಎಕ್ಕದ ಎಲೆಯ ಹಾಲನ್ನು ಹತ್ತು ದಿನಗಳ ಕಾಲ ನಿರಂತರವಾಗಿ ಹಚ್ಚಿದರೆ ಕೆಡು ಸಂಪೂರ್ಣ ಮಾಯವಾಗುತ್ತದೆ. ಹಳ್ಳಿಗಳಲ್ಲಿ ಇಂದಿಗೂ ಇದೇ ಔಷಧಿಯನ್ನು ಬಳಕೆ ಮಾಡುತ್ತಿದ್ದಾರೆ.
ಸಕ್ಕರೆ ಕಾಯಿಲೆ, ಬಿಪಿ ಕಂಟ್ರೋಲ್‌ಗೆ?
ಸಕ್ಕರೆ ಕಾಯಿಲೆ ಅಥವಾ ಬಿಪಿ ಕಾಯಿಲೆ ಇದ್ದವರು ಎಕ್ಕದ ಎಲೆಯನ್ನು ಕಾಲಿನ ಅಡಿಭಾಗದಲ್ಲಿ ಇಟ್ಟರೆ ರೋಗ ನಿಯಂತ್ರಣಕ್ಕೆ ಬರುತ್ತದೆ ಎಂದು ಕೆಲವರು ಹೇಳುತ್ತಿದ್ದರೂ ವೈದ್ಯಕೀಯವಾಗಿ ಅದು ದೃಢಪಟ್ಟಿಲ್ಲ. ಕಾಲಿನ ಅಡಿಯಲ್ಲಿ ಇಟ್ಟರೆ ದೇಹಕ್ಕೆ ತಂಪು ಕೊಡುತ್ತದೆ ಎನ್ನುತ್ತಾರೆ ವೈದ್ಯರು.
ಎಕ್ಕ ಗಿಡದ ಎಲೆಯಲ್ಲಿ ಔಷಧೀಯ ಗುಣವಿರುವುದು ವೈದ್ಯಕೀಯವಾಗಿ ದೃಡಪಟ್ಟಿದೆ. ಆಂಗ್ಲ ಭಾಷೆಯಲ್ಲಿ ಇದಕ್ಕೆ ಶೋಲೋವಾರ್ಟ್ ಎಂದು ಕರೆಯುತ್ತಾರೆ. ಇದರ ಎಲೆ, ಹಾಲು, ಬೇರು, ಕಾಂಡ ಎಲ್ಲವೂ ಹೇರಳವಾದ ಔಷಧೀಯ ಗುಣವನ್ನು ಹೊಂದಿರುವುದು ದೃಢಪಟ್ಟಿದೆ. ಹಿಂದಿನ ಕಾಲದಲ್ಲಿ ಇದರ ಉಪಯೋಗ ಬಹಳವಾಗಿತ್ತು ಆದರೆ ಈಗ ಅದನ್ನು ಬಳಕೆ ಮಾಡುವುದು ಕಡಿಮೆಯಾಗಿದೆ. ಎಕ್ಕ ಗಿಡವನ್ನು ಯಾರೂ ನೆಟ್ಟು ಬೆಳೆಸದ ಕಾರಣ ಅಪರೂಪಕ್ಕೊಮ್ಮೆ ಇದರ ಉಪಯೋಗವಾಗಲೂ ಬಹುದು. ವಿಷದ ರಸವನ್ನು ದೇಹದಿಂದ ಹೀರುವ ಶಕ್ತಿ ಈ ಗಿಡದಲ್ಲಿ ಹೇರಳವಾಗಿದೆ. ಇದರ ಪ್ರತೀಯೊಂದು ಭಾಗವು ಅತ್ಯಂತ ಸೂಕ್ಷ ್ಮ ಮತ್ತು ಅಪಾಯಕಾರಿಯಾಗಿರುವ ಕಾರಣ ಅತ್ಯಂತ ಎಚ್ಚರಿಕೆಯಿಂದ ಬಳಸಬೇಕು. ಹಾಲು ಕಣ್ಣಿಗೆ ತಾಗಿದರೆ ಅಪಾಯ ಉಂಟಾಗುವ ಸಾಧ್ಯತೆ ಇದೆ.