ಕುಂದಾಪುರ: ಮನೆ ಕಟ್ಟಲಿಕ್ಕಾಗಿ ಜಾಗ ಕ್ರಯ ಮಾಡೋರು ಇದ್ದಾರೆ. ಕೃಷಿ ಉದ್ದೇಶದಲ್ಲಿ ಭೂಮಿ ವಿಕ್ರಯಿಸುವರೂ ಸಿಗುತ್ತಾರೆ. ಸೈಟ್, ಕೈಗಾರಿಕೆ ಹೀಗೆ ಬೇರೆ ಬೇರೆ ಉದ್ದೇಶದಲ್ಲೂ ಭೂಮಿ ವಿಕ್ರಯಿಸವವರು ನಮ್ಮನಿಮ್ಮ ನಡುವೆ ಇದ್ದಾರೆ.. ಕಾಡು ಬೆಳೆಸಲಿಕ್ಕಾಗಿಯೇ ಭೂಮಿ ಹಣಕೊಟ್ಟು ಪಡೆಯವುದನ್ನು ಕಂಡಿದ್ದೀರಾ ಎಲ್ಲಿಯಾದರೂ ಕೇಳಿದ್ದೇರಾ..
ಅದೂ ಸಾವಿರರು ರೂಪಾಯಿ ಇನ್‌ವೆಸ್ಟ್ ಅಲ್ಲಾ.. ಇಡೀ ಜೀವನದ ದುಡಿಮೆ ಹಣವಿದೆ. ಬರೋಬ್ಬರಿ ಎಂಟು ಲಕ್ಷ ರೂ.ಕೊಟ್ಟ ಪಡೆದ ಭೂಮಿಯಲ್ಲಿ ಹಕ್ಕಿಗಳಿಗಾಗಿಯೇ ಕಾಡುಹಣ್ಣಿನ ಮರಗಳ ಕಾಡು ನಿರ್ಮಿಸಲು ಮುಂದಾಗಿದ್ದಾರೆ. ಇದೆಂತಾ ಹುಚ್ಚು ಸಾಹಸ ಅನ್ನಿಸುತ್ತಿದೆ ಅಲ್ಲವೇ? ಕುಂದಾಪುರ ತಾಲೂಕ್, ಕಂದಾವರ ಗ್ರಾಮ ಮೂಡ್ಲಕಟ್ಟೆ ಮಥಾಯಿಸ್ ಡೇಸಾ ಇಂತಾದ್ದೊಂದು ಹೊಸ ಸಾಹಸಕ್ಕೆ ಮುಂದಾದ ವ್ಯಕ್ತಿ! ಬಾಂಬೆ ಖಾಸಗಿ ಕಂಪನಿಯಲ್ಲಿ ಕಳೆದ ೩೫ ವರ್ಷದಿಂದ ದುಡಿದ ಹಣ ಕಾಡಿಗಾಗಿಯೇ ಖರ್ಚು ಮಾಡುತ್ತಿದ್ದಾರೆ. ಇದೂವರಗೆ ಬರೋಬ್ಬರಿ ಹತ್ತು ಲಕ್ಷ ರೂ. ಇನ್‌ವೆಸ್ಟ್ ಮಾಡಿದ್ದಾರೆ. ಕಾಡು ಬೆಳೆದರೂ ಡೇಸಾಗೆ ಅದರ ಪ್ರತಿಫಲ ಸಿಗೋದಿಲ್ಲ. ಪ್ರತಿಫಲವಿಲ್ಲದೆ ಕಾಡು ಬೆಳೆಸುತ್ತಿರುವುದರಿಂದ ಡೇಸಾಗೆ ಯಾವ ನಿರೀಕ್ಷೆಯೂ ಇಲ್ಲ. ಪತ್ನಿ ವಿನ್ನಿ, ಪುತ್ರ ವ್ಯಾಂಟಿನ್ ಡೇಸಾ ಬಾಂಬೆಯಲ್ಲಿದ್ದು, ಡೇಸಾ ಪರಿಸರ ಕಾಳಜಿಗೆ ಸಾಥ್ ನೀಡುತ್ತಿದ್ದಾರೆ.

ಯಾವದ್ ಭೂ ಮಂಡಲಂ ದಸ್ತ್ ಸಮೃಗ, ವನ ಕಾನನಂ ತಾವತ್ ಸೀಷ್ಠತಿ ಮೇದಿನಿಳಂ ಸಂತತಿ ಪೌಕ್ರೀಕೌ. ಎಲ್ಲಿಯವರಗೆ ಈ ಭೂಮಿಯು ವನ್ಯ ಮೃಗಗಳಿಂದ ತುಂಬಿದ ಕಾಡು, ಮೇಡುಗಳಿಂದ ಕೂಡಿರುತ್ತದೆಯೋ ಅಲ್ಲಿಯವರಗೆ ಮನುಜ ಸಂತತಿಗೆ ಆಸರೆ ನೀಡುವುದು ಎನ್ನೋದು ವಾದದ ತಾತ್ಪರ್ಯ. ಇದನ್ನು ಅಕ್ಷರಶಃ ಪಾಲಿಸುತ್ತಿದ್ದಾರೇ ಡೇಸಾ.. ಇವರ ಟ್ರೀ ಹೌಸನಲ್ಲಿ ಇದೇ ಸ್ಲೋಗನ್ ಕೂಡಾ ಇದೆ. ಶಿವರಾಮ ಕಾರಂತರ ಮೂಕಜ್ಜಿಯ ಕನಸು ಕಾದಂಬರಿ ಹೆಸರಿಟ್ಟಾದರೆ ಕುಟೀರಕ್ಕೆ. ಕಾಡು, ಪರಿಸರ ವನ್ಯಜೀವಿಗಳ ಬಗ್ಗೆ ಲೈಬ್ರರಿಯಾಗಿ ಕುಟೀರ ಬದಲಾಗಲಿದೆ.
ಸ್ವಾವಲಂಬಿ ಡೇಸಾ…
ಡೇಸಾ ಒಂದು ಎಕ್ರೆ ಪ್ರದೇಶದಲ್ಲಿ ಕಾಡು ಬೆಳೆಸಲು ಮುಂದಾಗಿದ್ದರೂ, ಮನೆ ಇರೋದು ಕೇವಲ ಐದು ಸೆನ್ಸ್ ಜಾಗದಲ್ಲಿ. ಅಂಗೈಅಗಲದ ಜಾಗದಲ್ಲೇ ಊಟದ ಅಕ್ಕಿ ಹೊರತು ಉಳಿದೆಲ್ಲಾ ವಿಷಯದಲ್ಲೂ ಸ್ವಾಲಂಬಿ. ಚಿಕ್ಕಿ ಚಿಕ್ಕ ಗಿಡದಲ್ಲಿ ತುಂಬಿ ತುಳುಕುತ್ತಿದೆ ಟಮೋಟ, ಹಸಿರು ಹಾಸಿದ ಬಸಳೆ, ಕಬ್ಬು, ಬಾಳೆ, ಅಲಸಂದೆ, ಪಪ್ಪಾಯಿ, ಪೇರಳೆ, ದೀವಹಲಸು ಇದೆ. ಊಟಕ್ಕೆ ಬೇಕಾಗುವಷ್ಟು ತರಕಾರಿ ಬೆಳದುಕೊಂಡು ತಾವೇ ಅಡುಗೆ ತಯಾರಿಸಿ ಊಟ ಮಾಡುತ್ತಾರೆ.
ಕಾಂಡ್ಲಾ ಎಂದರೆ ಅಚ್ಚುಮೆಚ್ಚು :
ಕರಾವಳಿ ತೀರದಲ್ಲಿ ಸಾಕಷ್ಟು ಕಾಂಡ್ಲಾ ವನವಿದ್ದರೂ ಅದರ ಬಗ್ಗೆ ಕಾಳಜಿ ಅಷ್ಟಕ್ಕಷ್ಟೆ. ಆದರೆ ಡೇಸಾ ಅವರಿಗೆ ಕಾಂಡ್ಲಾ ಎಂದರೆ ಇನ್ನಿಲ್ಲದ ಪ್ರೀತಿ. ದಿನದ ಹೆಚ್ಚಿನ ಸಮಯ ಕಾಂಡ್ಲಾ ವನಗಳ ನಡುವೆ ಕಳೆಯುತ್ತಾರೆ. ತಮ್ಮದೇ ಆದ ಕಾಶ್ಮೀರ ವಿನ್ಯಾಸದ ಬೋಟ್ ಹತ್ತಿ ವಿಹಾರಕ್ಕೆ ಹೊರಡುತ್ತಾರೆ. ಸಂಜೆ ಹೊತ್ತು ಕಾಂಡ್ಲಾ ವನದಲ್ಲಿ ಆಶ್ರಯ ಹಾಗೂ ಗೂಡುಕಟ್ಟಿದ ಪಕ್ಷಿ ವೀಕ್ಷಣೆ ಇವರ ನಿತ್ಯ ಹವ್ಯಾಸದಲ್ಲಿ ಒಂದು. ಕಾಂಡ್ಲಾ ಬಗ್ಗೆ ಆಸಕ್ತಿ ತೋರಿಸುವ ಸ್ನೇಹಿತರು ಬಂದರೆ ಅವರನ್ನು ಬೋಟ್ ಮೂಲಕ ಕಾಂಡ್ಲಾ ವನ ಸುತ್ತಿಸಿ, ಕಾಂಡ್ಲಾ ಮಹತ್ವದ ಬಗ್ಗೆ ಎಚ್ಚರಿಸುತ್ತಾರೆ. ದೇವಸ್ಥಾನ, ಚರ್ಚ್, ಮಂದಿರಕ್ಕಿಂತಲೂ ಶ್ರೇಷ್ಠ ಸ್ಥಾನ ಕಾಂಡ್ಲಾ ವನ ಎನ್ನೋದು ಅವರ ಅಭಿಪ್ರಾಯ.
ಕಾಂಡ್ಲಾ ಹನನದ ಬಗ್ಗೆ ಖೇದ..
ಲೆಕ್ಕೆಕ್ಕ ಸಿಗದಷ್ಟು ಜಲಚರ, ಸೂಕ್ಷ ಜೀವಿಗಳ ಆವಾಸಸ್ಥಾನ, ಮೊಸಳೆ,ಉರಗ, ಏಡಿಗಳ ಮರಿಮಟ್ಟೆ ತವರು ಕಾಂಡ್ಲಾ ವನದ ಹನನದ ಬಗ್ಗೆ ಡೇಸಾಗೆ ಬೇಸರವಿದೆ. ಸಿಗಡಿ ಕೆರೆ ನಿರ್ಮಾತೃಗಳು ಕಾಂಡ್ಲಾ ವನದಲ್ಲಿ ವಾಸಮಾಡುವ ಹಕ್ಕಿಗಳಿಂದಾಗುವ ಸಮಸ್ಯೆ ಪರಿಹಾರಕ್ಕೆ ಕಾಂಡ್ಲಾ ಸವರುತ್ತಿದ್ದಾರೆ. ನದಿಗಳ ಒತ್ತುವರಿ ಮಾಡಿಕೊಂಡು ನಡೆಯುತ್ತಿರುವ ಮರಳು ಗಣಿಗೂ ಕಾಂಡ್ಲಾ ನಾಶವಾಗುತ್ತಿದೆ. ಮೋಜು ಮಸ್ತಿಯ ತಾಣವಾಗಿ, ತ್ಯಾಜ್ಯ ವಿಲೇವಾರಿಗೆ ಕಾಂಡ್ಲಾವನ ದುರ್ಬಳಕೆ ಮಾಡಿ, ಪರಿಸರ ಹಾನಿಗೂ ಕಾರಣ ಆಗುತ್ತಿದೆ. ಪರಿಸರ ಬಗ್ಗೆ ವಿದ್ಯಾರ್ಥಿ ದಿಸೆಯಲ್ಲೇ ಜಾಗೃತಿ ಮೂಡಿಸಿ, ಕಾಡು, ಪಶು,ಪಕ್ಷಿ, ವನ್ಯಜೀವಿಗಳು ಇಲ್ಲದೆ ಮನುಷ್ಯ ಬದುಕಲು ಸಾಧ್ಯ ಇಲ್ಲಾ ಎನ್ನೋದನ್ನು ಅರ್ಥ ಮಾಡಿಸಬೇಕು. ಪರಿಸರ ಶಿಕ್ಷಣವಾಗಿ ರೂಪಗೊಳ್ಳಬೇಕು ಎನ್ನೋದು ಡೇಸಾ ವಾದ.
ಪಕ್ಷಿ ಪ್ರೇಮಿ ಸಲೀಂ ಆಲಿ ಕಂಪನಿ, ಅವರ ಒಡನಾಟದಲ್ಲಿ ಪಶುಪಕ್ಷಿ, ವನ್ಯಜೀವಿಗಳ ಬಗ್ಗೆ ಕತೂಹಲ ಹುಟ್ಟಿತು. ಅವರೊಟ್ಟಿಗೆ ಕಾಡು-ಮೇಡು ಅಲೆದಿದ್ದೇನೆ. ಪರಿಸರ ಪ್ರಾಣಿ ಸಂಕುಲವಿಲ್ಲದೆ ಮನುಷ್ಯ ಜೀವನ ಇಲ್ಲಾ. ಈ ದೇಶದ ಎಲ್ಲಾ ರಾಷ್ಟ್ರೀಯ ಉದ್ಯಾನವನ, ನಿತ್ಯಹರಿದ್ವರ್ರ್‍ಅದ ಕಾಡಿನಿಂದ ಹಿಡಿದು ಪಶ್ಚಿಮಘಟ್ಟ ಸೋಲಾ ಕಾಡುಗಳಿಗೂ ಭೇಟಿ ನೀಡಿ ವೀಕ್ಷಕಿಸಿದ್ದೇನೆ. ಚಾರಣ ನೆಚ್ಚಿನ ಹವ್ಯಾಸವಾಗಿದ್ದು, ಬೇರೆ ಬೇರೆ ಕಡೆ ಚಾರಣಕ್ಕ್ಕಾಗಿ ನಾಯಕತ್ವ ವಹಿಸಿದ್ದೇನೆ. ಎಲ್ಲಿ ಹೋದರೂ ಕಾಡು ಕಣ್ಮರೆಯಾಗುತ್ತಿದೆ. ಪಶ್ಚಿಮಘಟ್ಟವಂತೂ ಇನ್ನಿಲ್ಲದಂತೆ ನಾಶವಾಗುತ್ತಿದೆ. ಏನಾದರೂ ಮಾಡಬೇಕು ಎನ್ನುವ ಉದ್ದೇಶದಿಂದ ಜಾಗ ವಿಕ್ರಿಯಿಸಿ ಕಾಡು ಹಣ್ಣಿನ ಕಾಡು ನಿರ್ಮಿಸಿತ್ತಿದ್ದೇನೆ. ಜೀವನದ ಕೊನೆ ಕ್ಷಣ ಇದೇ ಪರಿಸರ ಪಕ್ಷಗಳ ಕಲರವದಲ್ಲಿ ಕಳೆಯಬೇಕು. ಇದೇ ಜಾಗದಲ್ಲಿ ಮಣ್ಣು ಮಾಡುವಂತೆ ಮಗನಿಗೆ ಹೇಳಿದ್ದೇನೆ.
– ಮಥಾಯಿಸ್ ಡೇಸಾ (ಪಕ್ಷಿಗಳಿಗಾಗಿ ಕಾಡು ಬೆಳಸ ಹೊರಟ ಸಾಹಸಿ)
Comments are closed.