ಕರ್ನಾಟಕ

ಮನೆಯಲ್ಲಿ ದುಷ್ಟಶಕ್ತಿಗಳು ಇದೆಯೇ ಇಲ್ಲವೆ ಎಂಬುವುದನ್ನು ಈ ರೀತಿಯಾಗಿ ತಿಳಿಯಬಹುದು

Pinterest LinkedIn Tumblr


ಬೆಂಗಳೂರು: ಕೆಲವೊಮ್ಮೆ ದುಷ್ಟಶಕ್ತಿಗಳು ಮನೆಯ ಒಳಗೆ ಇದ್ದರೂ ನಮಗೆ ತಿಳಿಯುವುದಿಲ್ಲ. ಈ ದುಷ್ಟಶಕ್ತಿಗಳಿಂದ ಕುಟುಂಬದಲ್ಲಿ ಕಲಹ, ಹಣಕಾಸಿನ ತೊಂದರೆ, ಉದ್ಯೋಗ ಕಳೆದುಕೊಳ್ಳುವುದು, ನೀವು ಪ್ರೀತಿಯಿಂದ ಸಾಕಿದ ಪ್ರಾಣಿ, ಪಕ್ಷಿಗಳು ಸಾವನಪ್ಪುವುದು, ನಿಮ್ಮ ಮನೆಯ ಸುತ್ತಲೂ ಬೆಳೆಸಿರುವ ಗಿಡ ಒಣಗಿ ಹೋಗುವುದು, ಅದರಲ್ಲೂ ತುಳಸಿ ಗಿಡ ಒಣಗುವುದು. ಈ ರೀತಿಯಾದ ಅನಾಹುತಗಳು ಆಗುತ್ತಿರುತ್ತದೆ. ಅದಕ್ಕಾಗಿ ಕೆಲವರು ಮನೆಬಿಟ್ಟು ಹೋಗುತ್ತಾರೆ. ಆದರೆ ಕೆಲವು ದುಷ್ಟ ಶಕ್ತಿಗಳು ನಮ್ಮ ಹಿಂದೆಯೆ ಬರುತ್ತವೆ. ಅದಕ್ಕಾಗಿ ಮನೆಯಲ್ಲಿ ದುಷ್ಟ ಶಕ್ತಿಗಳು ಇದೆ ಎಂದು ಖಚಿತ ಪಡಿಸಿಕೊಳ್ಳಲು ಹೀಗೆ ಮಾಡಿ.

ಒಂದು ಸ್ವಚ್ಚ ಮಾಡಿರುವ ಗಾಜಿನ ಲೋಟವನ್ನು ತೆಗೆದುಕೊಳ್ಳಿ. ಒಣಗಿದ ಹತ್ತಿ ಬಟ್ಟೆಯಿಂದ ಆ ಲೋಟವನ್ನು ಒರೆಸಿ. ಕೈಗೆ ಗ್ಲೌಸ್ ಹಾಕಿಕೊಂಡು ಲೋಟವನ್ನು ಮುಟ್ಟಿ, ಏಕೆಂದರೆ ಗಾಜಿನ ಲೋಟದ ಮೇಲೆ ನಿಮ್ಮ ಕೈ ಬೆರಳಿನ ಯಾವುದೇ ಗುರುತಿರಬಾರದು. ಆ ಲೋಟಕ್ಕೆ 1/3 ಭಾಗದಷ್ಟು ಹರಳುಪ್ಪನ್ನು ಹಾಕಿ. ಉಪಯೋಗಿಸಿದ ಉಪ್ಪನ್ನು ಬಳಸಬಾರದು, ಬದಲಾಗಿ ಹೊಸ ಉಪ್ಪನ್ನು ತರಬೇಕು. ಬಿಳಿ ವಿನೆಗರ್ ನ್ನು ಅದೇ ಲೋಟಕ್ಕೆ ಉಪ್ಪಿನಷ್ಟೆ ಪ್ರಮಾಣದಲ್ಲಿ ಹಾಕಿ ಅಂದರೆ ಲೋಟದ 2/3 ಭಾಗ ತುಂಬಾ ಬೇಕು. ನಂತರ ಉಳಿದ ಭಾಗಕ್ಕೆ ನೀರನ್ನು ಹಾಕಿ ತುಂಬಿಸಿ. ಆ ಲೋಟವನ್ನು ಮನೆಯಲ್ಲಿ ಯಾರಿಗೂ ಕಾಣಿಸದ ಜಾಗದಲ್ಲಿ ಇಡಬೇಕು. 24 ಗಂಟೆಗಳ ಕಾಲ ಅದನ್ನು ನೋಡದೆ ಹಾಗೆ ಬಿಡಬೇಕು. 24 ಗಂಟೆಗಳ ನಂತರ ಅದರಲ್ಲಿರುವ ನೀರು ತಿಳಿಯಾಗಿದ್ದರೆ ಅಲ್ಲಿ ದುಷ್ಟಶಕ್ತಿಗಳು ಇಲ್ಲ ಎಂದರ್ಥ. ಒಂದು ವೇಳೆ ನೀರು ಬದಲಾಗಿದ್ದರೆ ಅಂದರೆ ತಿಳಿ ಹಸಿರು ಅಥವಾ ಹಾಲಿನ ರೀತಿಯಾಗಿದ್ದರೆ ಈ ಪ್ರಕ್ರಿಯೆಯನ್ನು ಪುನಃ ಇನ್ನೊಮ್ಮೆ ಮಾಡಿ ಆಗಲೂ ಹಾಗೆ ಬದಲಾಗಿದ್ದರೆ ಅಲ್ಲಿ ಕೆಟ್ಟಶಕ್ತಿ ಇದೆ ಎಂದರ್ಥ. ತಕ್ಷಣ ಅದಕ್ಕೆ ಪರಿಹಾರ ಕಂಡುಕೊಳ್ಳಿ.

Comments are closed.