ಕರಾವಳಿ

ವೈದ್ಯೋ ನಾರಾಯಣೋ ಹರಿ ಎನ್ನುವ ಮಾತು ಇದಕ್ಕಾಗಿ ಇರಬೇಕು ಅಲ್ಲವೇ..?(ವಿಡಿಯೋ ವರದಿ)

Pinterest LinkedIn Tumblr

ಮಗುವೊಂದು ಈ ಭೂಮಿಗೆ ಬಂದಿಳಿದು, ಬದುಕುಳಿದಿದೆ! ಆದರೆ ಈ ರೋಚಕ ಕಥೆಯು ಅಲ್ಲಿಗೆ ಕೊನೆಯಾಗುವುದಿಲ್ಲ.

ವೆನೆಲೋಪ್ ವಿಲ್ಕಿನ್ಸ್ ಈಗ ಮೂರು ವರಾದ ಮಗುವಾಗಿದ್ದು, ಈಕೆಯ ಹೆರಿಗೆ ಮಾಡಲು ಬೇಕಾಗಿದ್ದು ಬರೋಬ್ಬರಿ 50 ವೈದ್ಯರು. ಈಕೆ ಹುಟ್ಟಿದ್ದು ನವೆಂಬರ್ 22 ರಂದು, ಇಂಗ್ಲೆಂಡಿನ ಲೇಸಿಸ್ಟರ್ ಪ್ರಾಂತ್ಯದಲ್ಲಿ. ಈಕೆಗೆ ಎಕ್ಟೋಪಿಯಾ ಕಾರ್ಡಿಸ್ ಎಂಬ ಒಂದು ತುಂಬಾನೇ ವಿರಳವಾದ ಅಸ್ವಸ್ಥತೆ ಇದ್ದು, ಇದು ಆಕೆಯ ಹೃದಯವು ಆಕೆಯ ದೇಹದಾಚೆಗೆ ಬೆಳೆಯುವಂತೆ ಮಾಡಿದೆ. ಆದರೆ ಈ ಸ್ಥಿತಿಯಲ್ಲಿ ಮಗುವು ತುಂಬಾನೇ ಸೂಕ್ಷ್ಮ ಸ್ಥಿತಿಯಲ್ಲಿ ಇರುತ್ತದೆ ಹಾಗು ಮಗುವನ್ನು ಉಳಿಸಿಕೊಳ್ಳಬೇಕು ಎಂದರೆ ಇನ್ನೊಂದು ಸರ್ಜರಿಯ ಅಗತ್ಯವಿತ್ತು. ಆ ಸರ್ಜರಿಯ ಮೂಲಕ ಆಕೆಯ ಹೃದಯವನ್ನು ಪುನಃ ಅವಳ ಎದೆಯೊಳಗೆ ಇಡಬೇಕಿತ್ತು. ಆದರೆ ಇದು ಅಷ್ಟು ಸುಲಭದ ಮಾತಲ್ಲ.

ಅಲ್ಲಿನ ವೈದ್ಯರು ಹೇಳುವ ಪ್ರಕಾರ ತಮ್ಮ ವೈದ್ಯಕೀಯ ಅನುಭವದಲ್ಲೇ, ಅಂದರೆ 30 ವರ್ಷಗಳಲ್ಲಿ ಈ ತರಹದ ಸಮಸ್ಯೆ ಇರುವ ಮಗುವನ್ನು ಕೇವಲ ಎರಡನೇ ಬಾರಿ ನೋಡುತ್ತಿರುವುದು. ಆದರೆ ವೈದ್ಯೋ ನಾರಾಯಣೋ ಹರಿ ಎನ್ನುವುದು ಏಕೆ ಹೇಳಿ? ವೈದ್ಯರು ಕೊನೆಗೂ ತಮ್ಮ ಎಲ್ಲಾ ಪರಿಶ್ರಮ ಹಾಕಿ ಈ ಮಗುವಿನ ಸರ್ಜರಿ ಮಾಡಿಯೇ ಬಿಟ್ಟರು ಮತ್ತು ಮಗುವನ್ನ ಉಳಿಸಿದರು! ಆ ಮಗುವಿನ ವಿಡಿಯೋ ಇಲ್ಲಿದೆ ನೋಡಿ

Comments are closed.