ಕರ್ನಾಟಕ

ವಲಸೆ ಹೋಗುವ ಪಕ್ಷಿಗಳು V ಆಕಾರದಲ್ಲಿ ಒಂದಾಗಿ ಪ್ರಯಾಣಿಸುತ್ತಿರುತ್ತವೆ ಯಾಕೆ ಗೊತ್ತೆ?

Pinterest LinkedIn Tumblr

ಆಗಾಗ್ಗೆ ಆಗಸದಲ್ಲಿಸ ಪಕ್ಷಿಗಳು ಗುಂಪು ಗುಂಪಾಗಿ ಹಾರಾಡುತ್ತಿರುವುದನ್ನು ನೀವು ನೋಡಿಯೇ ಇರುತ್ತೀರಿ.! ಅವುಗಳನ್ನು ನೋಡಿದಾಗ ಎಲ್ಲವೂ V ಆಕಾರದಲ್ಲಿ ಹಾರಾಡುತ್ತಿರುವುದು ಅಚ್ಚರಿ ಮೂಡಿಸುತ್ತದಲ್ಲವೇ..? ಬನ್ನಿ ಅದಕ್ಕೆ ಉತ್ತರವನ್ನು ಕಂಡುಕೊಳ್ಳೋಣ.

ವಾಸ್ತವದಲ್ಲಿ ವಲಸೆ ಹೋಗುವ ಪಕ್ಷಿಗಳು V ಆಕಾರದಲ್ಲಿ ಒಂದಾಗಿ ಪ್ರಯಾಣಿಸುತ್ತಿರುತ್ತವೆ. ಇದರ ಹಿಂದೆ ಒಂದು ವೈಜ್ಞಾನಿಕ ಕಾರಣವಿದೆ. ಪಕ್ಷಿಗಳು ಹಾರಬೇಕಾದರೆ ಅದರ ತೂಕ+ ಗಾಳಿಯ ವೇಗವನ್ನು ಅಧಿಗಮಿಸಿ ರೆಕ್ಕೆಗಳ ಸಹಾಯದಿಂದ ಪ್ರಯಾಣಿಸಬೇಕಾಗಿರುತ್ತದೆ.! ಸ್ವಲ್ಪ ದೂರದ ಪ್ರಯಾಣಕ್ಕಾದರೆ ಪಕ್ಷಿ ಒಬ್ಬಂಟಿಯಾಗಿ ಪ್ರಯಾಣಿಸಬಹುದು. ಆದರೆ, ವಲಸೆ ಹೋಗುವಾಗ ಸಾವಿರಾರು ಕಿಲೋಮೀಟರ್ ದೂರ ಕ್ರಮಿಸ ಬೇಕಾಗಿರುತ್ತದೆ. ಅದೂ ಸಹ V ಆಕಾರದಲ್ಲಿಯೇ ಪ್ರಯಾಣಿಸಬೇಕು. ಹೀಗೆ V ಆಕಾರದಲ್ಲಿ ಪ್ರಯಾಣಿಸುವುದರಿಂದ ಬೀಸುವ ಗಾಳಿಯ ಒತ್ತಡ…ಒಂದೊಂದು ಪಕ್ಷಿಯ ಮೇಲಲ್ಲದೆ ಎಲ್ಲಾ ಪಕ್ಷಿಗಳ ಮೇಲೂ ಹಂಚಿಹೋಗುತ್ತದೆ..! ಇದರಿಂದಾಗಿ ಒಂಟಿ ಪಕ್ಷಿ ಪ್ರಯಾಣಿಸುವಾಗ ಉಪಯೋಗಿಸುವುದಕ್ಕಿಂತಲೂ ಕಡಿಮೆ ಶಕ್ತಿ ಉಪಯೋಗಿಸಿದರೆ ಸಾಕು. ಇದರಿಂದಾಗಿ ಶಕ್ತಿಯ ಉಳಿತಾಯವಾಗುತ್ತದೆ..! ಸಾಮಾನ್ಯವಾಗಿ ಪಕ್ಷಿಗಳು ಗಂಟೆಗೆ 100 ಕಿಲೋ ಮೀಟರ್ ಗಳ ದೂರ ಪ್ರಯಾಣಿಸಿದರೆ..ಹೀಗೆ V ಆಕಾರದಲ್ಲಿ ಪ್ರಯಾಣಿಸಿದರೆ ಸುನಾಯಾಸವಾಗಿ 171 ಕಿ.ಮೀ ಪ್ರಯಾಣಿಸಬಹುದು.!

ಇಷ್ಟೇ ಅಲ್ಲ. ಪಕ್ಷಿಗಳಲ್ಲಿ ಗಮನಿಸಬೇಕಾದ ಮತ್ತೊಂದು ಮುಖ್ಯ ಅಂಶವಿದೆ. V ಆಕಾರದಲ್ಲಿ ಪ್ರಯಾಣಿಸುವಾಗ ಮುಂದುಗಡೆ ಇರುವ ಪಕ್ಷಿ ಹೆಚ್ಚಿನ ಒತ್ತಡವನ್ನು ಭರಿಸಬೇಕಾಗುತ್ತದೆ. ಆದುದರಿಂದಲೇ ಸ್ವಲ್ಪ ದೂರ ಪ್ರಯಾಣಿಸಿದನಂತರ… ಬೇರೊಂದು ಪಕ್ಷ ಅದರ ಸ್ಥಾನಕ್ಕೆ ಬರುತ್ತದೆ. ಹೀಗೆ ಪಕ್ಷಿಗಳು ತಮ್ಮ ಸ್ಥಾನವನ್ನು ಬದಲಿಸುತ್ತಾ ಪ್ರಯಾಣಿಸುತ್ತವೆ. ತಮ್ಮ ಶಕ್ತಿಯನ್ನು ಕೂಡಿಟ್ಟುಕೊಂಡು ಬಹಳ ದೂರ ಪ್ರಯಾಣಿಸುತ್ತವೆ.!

ಇದೇ ಸ್ಟ್ರಾಟಜೀ…ಯುದ್ಧ ವಿಮಾನಗಳು, ವಿನ್ಯಾಸಗಳನ್ನು ಪ್ರದರ್ಶಿಸುವ ವಿಮಾನಗಳು ಅನುಕರಿಸುತ್ತವೆ. ಇದರಿಂದಾಗಿ ಕಡಿಮೆ ಇಂದನ ಖರ್ಚಾಗುತ್ತದೆ.!

Comments are closed.