ಕರ್ನಾಟಕ

ಬಾಳೆ ಹೂವುನಲ್ಲಿರುವ ಆರೋಗ್ಯಕರ ಗುಣ ತಿಳಿಯಿರಿ.

Pinterest LinkedIn Tumblr

banana_flower_2

ಮಂಗಳೂರು: ಬಾಳೆಕಾಯಿ, ಬಾಳೆ ಹಣ್ಣು, ಬಾಳೆದಿಂಡು, ಬಾಲೇ ಹೂವು… ಹೀಗೆ ಎಲ್ಲಾನೂ ಮನುಷ್ಯನ ದೇಹಕ್ಕೆ ಒಂದೋಂದು ರೀತಿಲಿ ಒಳ್ಳೆದು. ಬಾಳೆ ಹೂವಿಂದಾನು ಆರೋಗ್ಯಕ್ಕೆ ಏನೇನು ಲಾಭ ಇದೆ ಪಟ್ಟಿ ಮಾಡಿದ್ದೀವಿ ಹಾಂಗಂತ ತಿಂದ್ಬಿಟ್ಟೀರ ಮತ್ತೆ, ಬಾಳೆಹೂವು ಗೊಜ್ಜು, ಚಟ್ನಿ, ಪಲ್ಯ, ಸಾಂಬಾರು ಈ ತರಾ ಏನಾದ್ರು ಮಾಡ್ಕೊಂಡ್ ತಿನ್ನಿ.
1. ಇನ್ಫೆಕ್ಷನ್ ಆಗಲ್ಲ, :
ಬಾಳೆಹೂವಲ್ಲಿ ಎಥೆನಾಲ್ ಆಂಶ ಇರೋದ್ರಿಂದ ಇದು ಯಾವುದೇ ಬ್ಯಾಕ್ಟೀರಿಯಾ ಬೆಳ್ಯಕ್ಕೆ ಬಿಡಲ್ಲ ಚರ್ಮದ ರೋಗ ಬೇಗ ವಾಸಿಯಾಗುತ್ತೆ ಗಾಯ ಆಗ್ರಿದೆ ಬೇಗ ಮಾಯವಾಗತ್ತೆ.

2. ದೇಹಕ್ಕೆ ಬೇಗ ವಯಸ್ಸಾಗಲ್ಲ:
ಈ ಬಾಳೆಹೂವಲ್ಲಿ ಮಿಟಮಿನ್ ಸಿ, ಟ್ಯಾನಿನ್ಸ್, ಪ್ಲಾವನಾಯಿಡ್ಸ್ ಇರುವುದರಿಂದ ಜೀವಕೋಶದ ಮೇಲೆ ಒತ್ತಡ ಕಮ್ಮಿ ಆಗತ್ತೆ, ಇದರಿಂದ ಬೇಗ ವಯಸ್ಸಾಗಲ್ಲ, ಮೈಯಲ್ಲಿ ಯೌವ್ವನ ಜಾಸ್ತಿ ಆಗತ್ತೆ.

3. ಹೃದಯಾಘಾತ ಆಗೋದನ್ನ ತಪ್ಸತ್ತೆ:
ಬಾಳೆಹೂವಲ್ಲಿ ಪೊಟ್ಯಾಸಿಯಂ ಇದೆ. ಇದು ಬಿಪಿ ಜಾಸ್ತಿ ಆಗಕ್ಕೆ ಬಿಡಲ್ಲ ಹೃದಯದ ಆರೋಗ್ಯನ ಕಾಪಾಡತ್ತೆ.

4. ಜೀರ್ಣ ಶಕ್ತಿ ಜಾಸ್ತಿ ಮಾಡತ್ತೆ:
ಎಷ್ಟೊ ಜನಕ್ಕೆ ತಿಂದಿದ್ದು ಜೀರ್ಣನೆ ಆಗಲ್ಲ, ಹೊಟ್ಟೆಕೆಟ್ಟರೆ, ಹೊಟ್ಟೆ ಕೆಟ್ಟರೆ, ಹೊಟ್ಟೆ ಉರಿ ಇದ್ರೆರ್, ಬೆಳಗೆ ಟೈಮಲ್ಲಿ ಸರಿಯಾಗಿ ಅಗದೆ ಹೊದರೆ ಬಾಳೆಹೂವನ್ನ ತಿನ್ನಿ ಇದರಲ್ಲಿ ನಾರಿನಾಂಶ ಜಾಸ್ತಿ ಇರುವುದರಿಂದ ಎಲ್ಲ ಸರಿಹೋಗತ್ತೆ

5. ಮನಸ್ಸಿನ ಮೇಲೆ ಒತ್ತಡ ಕಮ್ಮಿ ಮಾಡತ್ತೆ.
ಇದರಲ್ಲಿ ಮ್ಯಾಗ್ನೇಶಿಯಂ ಅಂಶ ಇರುವುದರಿಂದ ಇದು ದೇಹಕ್ಕೆ ಅರಾಮಿನ ಅನುಭವ ಕೊಡುತ್ತೆ ರಾತ್ರಿ ಚೆನ್ನಾಗಿ ನಿದ್ದೆ ಬರುವಂತೆ ನೋಡತ್ತೆ. ಹೀಗೆ ಒತ್ತಡ ಕಮ್ಮಿ ಮಾಡುತ್ತದೆ.

6. ಮುಟ್ಟಿನ ದಿನದಲ್ಲಿ ಹೆಂಗಸರ ಆರೋಗ್ಯ ಕಾಪಾಡುತ್ತೆ:
ಅನೇಕ ಹೆಂಗಸರ ಕೊರಗು ಆದರೆ ಪ್ರತಿ ತಿಂಗಳ ಸರಿಯಾಗಿ ಟೈಮಿಗೆ ಮುಟ್ಟಾಗಲ್ಲ ಅಂತವರು, ಬಾಳೆ ಹೂವಲ್ಲಿ ಪ್ರೋಜೆಸ್ಟೀರಾನ್ ಇರುದರಿಂದ ಪ್ರತಿ ತಿಂಗಳು ಸರಿಯಾದ ಟೈಮಿಗೆ ಮುಟ್ಟು ಅಗೋತರ ಮಾಡತ್ತೆ.

7. ಸಕ್ಕರೆ ಕಾಯಿಲೆ ನಿಯಂತ್ರಣಕ್ಕೆ ಒಳ್ಳೆದು:
ಬಾಳೆಹೂವಲ್ಲಿ ನಾರಿನಂಶ ಜಾಸ್ತಿ ಇದೆ.ಅದರಿಂದ ಸಕ್ಕರೆ ಕಾಯಿಲೆ ಇರುವವರಿಗೆ ಇದು ಬಹಳ ಒಳ್ಳೆದ್ದು, ಇದು ದೇಹದ ಸಕ್ಕರೆ ಮಟ್ಟ ಜಾಸ್ತಿ ಅಗದಂತೆ ಹಾಗೇ ತೋರಾ ಕಮ್ಮಿನ್ನೂ ಆಗದಂತೆ ನೋಡಿಕೊಳ್ಳುತ್ತದೆ. ಇದರಿಂದ ಕಿಡ್ನಿ ಸಮಸ್ಯೆನೂ ಕಮ್ಮಿ ಆಗತ್ತೆ.

8. ಅನೀಮಿಯಾ ರೋಗಕ್ಕೆ ಮದ್ದು:
ದೇಹದಲ್ಲಿ ಕಬ್ಬಿಣದ ಅಂಶ ಕಮ್ಮಿ ಅಗಿರತ್ತೆ ಕೆಂಪು ರಕ್ತಕಣಗಳು ಕಮ್ಮಿ ಇರತ್ತೆ. ಇದಕ್ಕೆ ಅನೀಮಿಯಾ ಅಂತಾರೆ. ಕಬ್ಬಿಣದ ಅಂಶ ಮತ್ತು ಕೆಂಪು ರಕ್ತ ಕಣಗಳನ್ನು ಹೆಚ್ಚಿಬೇಕಾದುವ ಅಂಶ ಈ ಬಾಳೆ ಹೂವಲ್ಲಿ ಇದೆ.

ಅಗದರೆ ಮನೇಲಿ ಬಾಳೆ ಗಿಡ ಇದೆಯಾ ಇದ್ರೆ ಬಾಳೆಹೂವನ್ನು ಯಾವತ್ತು ಬಿಸಾಕದೆ ಆಡುಗೆಗೆ ಉಪಯೋಗಿಸಿ ತಿಂದು ಆರೋಗ್ಯ ಕಾಪಾಡಿ.

Comments are closed.