ಕರಾವಳಿ

ಕೋಟೇಶ್ವರದಲ್ಲಿ ‘ಕೊಡಿ ಹಬ್ಬ’ದ ಸಂಭ್ರಮ; ಗರುಡ ಪಕ್ಷಿ ಸುತ್ತಿದ ಮೇಲೆ ನಡೆಯುವ ರಥೋತ್ಸವ

Pinterest LinkedIn Tumblr

ಕುಂದಾಪುರ: ಕರ್ನಾಟಕ ಕರಾವಳಿಯ ಸಪ್ತ ಪುಣ್ಯ ಕ್ಷೇತ್ರಗಳಲ್ಲಿ ಒಂದಾದ ಕೋಟೇಶ್ವರದಲ್ಲಿ ಕೊಡಿ ಹಬ್ಬ ವಿಜೃಂಭಣೆಯಿಂದ ಮಂಗಳವಾರ ಜರುಗಿತು. ಕೊಟೇಶ್ವರದ ಅಧಿದೇವ ಶ್ರೀ ಕೋಟಿಲಿಂಗೇಶ್ವರನ ವಾರ್ಷಿಕ ಬ್ರಹ್ಮರಥೋತ್ಸವವೇ ‘ಕೊಡಿಹಬ್ಬ’. ಈ ಉತ್ಸವದ ಹಿಂದೆ ವಿಶೇಷ ನಂಬಿಕೆ ಇದೆ. ವೃಶ್ಚಿಕ ಮಾಸದ ಪೂರ್ಣಿಮೆಯಂದು ನಡೆಯುವ ಕೊಡಿ ಹಬ್ಬದ ಸಂಭ್ರಮದ ಕ್ಷಣಗಳ ಝಲಕ್ ಇಲ್ಲಿದೆ.

koteshwara_kodi-habba_2016-10 koteshwara_kodi-habba_2016-1 koteshwara_kodi-habba_2016-2 koteshwara_kodi-habba_2016-3 koteshwara_kodi-habba_2016-4 koteshwara_kodi-habba_2016-5 koteshwara_kodi-habba_2016-8 koteshwara_kodi-habba_2016-6 koteshwara_kodi-habba_2016-7 koteshwara_kodi-habba_2016-9 koteshwara_kodi-habba_2016-14 koteshwara_kodi-habba_2016-24 koteshwara_kodi-habba_2016-27 koteshwara_kodi-habba_2016-34 koteshwara_kodi-habba_2016-13 koteshwara_kodi-habba_2016-15 koteshwara_kodi-habba_2016-12 koteshwara_kodi-habba_2016-11 koteshwara_kodi-habba_2016-16 koteshwara_kodi-habba_2016-19 koteshwara_kodi-habba_2016-22 koteshwara_kodi-habba_2016-23 koteshwara_kodi-habba_2016-18 koteshwara_kodi-habba_2016-20 koteshwara_kodi-habba_2016-29 koteshwara_kodi-habba_2016-28 koteshwara_kodi-habba_2016-51 koteshwara_kodi-habba_2016-39 koteshwara_kodi-habba_2016-30 koteshwara_kodi-habba_2016-33 koteshwara_kodi-habba_2016-32 koteshwara_kodi-habba_2016-36 koteshwara_kodi-habba_2016-31 koteshwara_kodi-habba_2016-25 koteshwara_kodi-habba_2016-26 koteshwara_kodi-habba_2016-42 koteshwara_kodi-habba_2016-43 koteshwara_kodi-habba_2016-45 koteshwara_kodi-habba_2016-49 koteshwara_kodi-habba_2016-48 koteshwara_kodi-habba_2016-47 koteshwara_kodi-habba_2016-46 koteshwara_kodi-habba_2016-44 koteshwara_kodi-habba_2016-40 koteshwara_kodi-habba_2016-41 koteshwara_kodi-habba_2016-35 koteshwara_kodi-habba_2016-38 koteshwara_kodi-habba_2016-37 koteshwara_kodi-habba_2016-50 koteshwara_kodi-habba_2016-17

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಸಪ್ತಕ್ಷೇತ್ರಗಳಲ್ಲಿ ಒಂದಾಗಿರುವ ಇತಿಹಾಸ ಪ್ರಸಿದ್ಧ ಕುಂದಾಪುರ ತಾಲೂಕಿನ ಕೋಟೇಶ್ವರದ ಮಹತೋಬಾರ ಕೋಟಿಲಿಂಗೇಶ್ವರ ದೇವಸ್ಥಾನ ಹಲವಾರು ಶತಮಾನಗಳಷ್ಟು ಪುರಾತನವಾಗಿದ ದೇವಳಗಳಲ್ಲಿ ಒಂದಾಗಿದೆ. ಇಲ್ಲಿ ನಡೆಯುವ ಕೊಡಿ ಹಬ್ಬದ ಉತ್ಸವದ ಹಿಂದೆ ಪರಂಪರಾನುಗತ ನಂಬಿಕೆ ಇದೆ. ವ್ಯವಹಾರಸ್ಥರಿಗೆ ಹೊಸ ಲೆಕ್ಕಚಾರ ಪ್ರಾರಂಭವಾಗಿ ಅಭಿವೃದ್ಧಿಯ ಕುಡಿಯೊಡೆಯುತ್ತದೆ, ಅವಿವಾಹಿತರಿಗೆ ಬಾಳಜೋಡಿ ಸಿಗುತ್ತದೆ, ನವ ವಿವಾಹಿತರಿಗೆ ಕರುಳ ಕುಡಿ ಚಿಗುರಿ ಸಂತಸ ಚಿಮ್ಮುತ್ತದೆ, ಕೃಷಿಕರಿಗೆ ಫಸಲು ತುಂಬಿ ಸಮೃದ್ಧಿಯ ಕುಡಿ ಮೊಳೆಯುತ್ತದೆ ಎಂಬ ನಂಬಿಕೆಯೇ ಜಿಲ್ಲೆಯ ಈ ಅತಿದೊಡ್ಡ ರಥೋತ್ಸವಕ್ಕೆ ‘ಕೊಡಿಹಬ್ಬ’ ಎಂದು ಹೆಸರು ಬರಲು ಕಾರಣವಾಯಿತು. ಒಟ್ಟಿನಲ್ಲಿ ಎಲ್ಲೆಡೆ ಸಂತಸ, ಸಮೃದ್ಧಿಯ ಕುಡಿಯೊಡೆಯುವಿಕೆಯ ನಂಬಿಕೆ ಇದೆ. ಇನ್ನು ರಥೋತ್ಸವದ ಮೊದಲು ಮಧ್ಯಾಹ್ನದ ಸುಮಾರಿಗೆ ದೇವಳದ ಎದುರಿಗಿನ ಬ್ರಹ್ಮರಥದ ಮೇಲೆ ಗರುಡ ಪಕ್ಷಿ ಮೂರು ಸುತ್ತು ಸುತ್ತುತ್ತದೆ, ಇದು ಜಾತ್ರೆಯ ಆರಂಭಕ್ಕೆ ಶುಭ ಸೂಚನೆ ಎಂಬ ನಿಟ್ಟಿನಲ್ಲಿ ರಥೋತ್ಸವ ಆರಂಭಗಳ್ಳುತ್ತದೆ. ಅಲ್ಲದೇ ರಾಜ್ಯದ ಪ್ರಮುಖ ದೊಡ್ದ ಗಾತ್ರದ ರಥಗಳಲ್ಲಿ ಕೋಟೇಶ್ವರದ ಈ ರಥವೂ ಒಂದು. ಈ ಬ್ರಹತ್ ಗಾತ್ರದ ಬ್ರಹ್ಮ ರಥದಲ್ಲಿ ವಿವಿಧ ಶಿಲ್ಪ ಕಲೆಯ ಕೆತ್ತನೆಗಳು ರಚಿಸಲ್ಪಟ್ಟಿದೆ.

ಹಬ್ಬದ ದಿನವಾದ ಮಂಗಳವಾರ ಮುಂಜಾನೆ ಸೂರ್ಯ ಉದಯಕ್ಕೆ ಮುಂಚೆ ಇತಿಹಾಸ ಪ್ರಸಿದ್ದ ಕೋಟಿ ತೀರ್ಥ ಸರೋವರದಲ್ಲಿ ಶುಚಿಭೂತರಾಗಿ ದೇವಸ್ಥಾನಕ್ಕೆ ಬರುವ ಭಕ್ತರು ಸರೋವರದ ಸುತ್ತ ಅಪೇಕ್ಷಿತರು ಹಾಸಿದ ಬಿಳಿ ಬಟ್ಟೆಯ ಮೇಲೆ ಮುಡಿ ಅಕ್ಕಿ ಚಲ್ಲುವ ಪಾರಂಪರಿಕ ಸುತ್ತಕ್ಕಿ ಸೇವೆಯಲ್ಲಿ ಪಾಲ್ಗೊಂಡ ಬಳಿಕ ದೇವರ ದರ್ಶನ ಪಡೆದು ಸಂಪ್ರದಾಯಬದ್ದ ಪೂಜೆ ಸಲ್ಲಿಸಿದ್ರು. ಬೆಳಿಗ್ಗೆ ೧೧.೪೫ ಕ್ಕೆ ದೇವಸ್ಥಾನದಿಂದ ವೈಭವದ ಮೆರವಣಿಗೆಯಲ್ಲಿ ಬಂದ ಕೋಟಿಲಿಂಗೇಶ್ವರ ಹಾಗೂ ಪರಿವಾರ ದೇವತೆಗಳನ್ನು ರಥದಲ್ಲಿ ಕುಳ್ಳಿರಿಸಿದ ಬಳಿಕ ಮಂಗಳರಾತಿ, ಹಣಕಾಯಿ ಹಾಗೂ ಕಾಯಿ ಒಡೆಯುವ ಸೇವೆಗಳನ್ನು ಮುಗಿಸಿದ ಬಳಿಕ ರಥ ಬೀದಿಯಲ್ಲಿ ರಥವನ್ನು ಎಳೆಯುವ ಮೂಲಕ ರಥೋತ್ಸವವನ್ನು ಆಚರಿಸಲಾಯಿತು. ದೇವಸ್ಥಾನದ ಆಡಳಿತಾಧಿಕಾರಿ ಕೆ.ಎಸ್ ಚಂದ್ರಶೇಖರ್, ಕಾರ್ಯನಿರ್ವಹಣಾಧಿಕಾರಿ ಗಣೇಶ್ ರಾವ್, ಅಧ್ಯಕ್ಷರು ಹಾಗೂ ಸದಸ್ಯರು, ಊರಿನ ಹತ್ತು ಸಮಸ್ತರು ಉಪಸ್ಥಿತರಿದ್ರು.

ಒಟ್ಟಿನಲ್ಲಿ ಕೊಡಿ ಹಬ್ಬದ ಜಾತ್ರೆಗೆ ಸಹಸ್ರಾರು ಮಂದಿ ಸಾಕ್ಷಿಯಾಗುವ ಮೂಲಕ ಭಕ್ತಿಯನ್ನು ಪ್ರದರ್ಶಿಸಿದ್ರು.

————————

ಚಿತ್ರ, ವರದಿ- ಯೋಗೀಶ್ ಕುಂಭಾಸಿ

Comments are closed.