ಕರ್ನಾಟಕ

ಮೂಲಂಗಿ ಹಸಿಯಾಗಿ ತಿಂದರೆ ಆರೋಗ್ಯಕ್ಕೆ ಉತ್ತಮ

Pinterest LinkedIn Tumblr

radish_health_pic

ಮಂಗಳೂರು: ಮೂಲಂಗಿಯಿಂದ ತುಂಬಾ ಉಪಯೋಗಗಳಿವೆ, ಇದನ್ನು ನಾನಾ ರೀತಿಯಾಗಿ ಆಹಾರದಲ್ಲಿ ಬಳಸಬಹುದು. ಬೇಳೆಯೊಂದಿಗೆ ಸೇರಿಸಿ ಸಾಂಬಾರ್ ತಯಾರಿಸಬಹುದು, ಚಟ್ನಿಯೊಂದಿಗೆ ಜಜ್ಜಿ ಸೇರಿಸಿವುದರಿಂದ ಮೂಲಂಗಿ ಚಟ್ನಿ ತಯಾರಿ ಆಗುತ್ತದೆ. ಚಪಾತಿ ಹಿಟ್ಟಿಗೆ ಸೇರಿಸಿ ಪರೋಟ ಮಾಡಬಹುದು. ಸಲಾಡ್ ತರಹ ಉಪಯೋಗಿಸಿ ಹಸಿಯಾಗಿ ತಿನ್ನಬಹುದು. ಇದು ತಾಜಾ ತರಕಾರಿಯಾಗಿರುವುದರಿಂದ ಹಸಿಯಾಗಿ ತಿನ್ನಬಹುದು. ಇದನ್ನು ಹಸಿಯಾಗಿ ತಿನ್ನುವುದರಿಂದಲೇ ಉಪಯೋಗಗಳು ಹೆಚ್ಚು.

ಹಿರಿಯರು ಮೂಲಂಗಿಗೆ ತಮ್ಮ ಊಟದಲ್ಲಿ ಅದಕ್ಕೊಂದು ಸ್ಥಾನವನ್ನು ನೀಡಿದ್ದರು. ಇಂದು ಮೂಲಂಗಿ ಸಾರು, ತುರಿ ಅಂದರೆ ಮಕ್ಕಳಾದಿಯಿಂದಾ ಹಿಡಿದು ದೊಡ್ಡವರವರೆಗೂ ಮುಖ ತಿರುಚಿಕೊಳ್ಳುವುದು ಸಾಮಾನ್ಯ.
ಮೂಲಂಗಿಗೆ ಒಂದು ವಿಶೇಷವಾಗ ಗುಣವಿದೆ. ಫೈಲ್ಸ್ ಇದ್ದರೆ ನಿತ್ಯ ಆರೆಳು ಮೂಲಂಗಿ ತುಂಡುಗಳು ಜೊತೆಗೆ ಸ್ವಲ್ಪ ನೀರು ಅದಕ್ಕೆ ಸ್ವಲ್ಪ ಉಪ್ಪುಹಾಕಿ ಮಿಕ್ಸ್ ರ್ ಗೆ ಹಾಕಿ ರುಬ್ಬಿಕೊಳ್ಳಿ. ರಾತ್ರಿ ಊಟವಾದ ಮೇಲೆ ಮಿಕ್ಸ್ ಮಾಡಿದ ಮೂಲಂಗಿ ಜ್ಯೂಸ್ ನ್ನು ಕುಡಿಯಿರಿ ಆಗ ಪೈಲ್ಸ್ ಹತೋಟಿಗೆ ಬಂದು ಬೆಳಿಗ್ಗೆ ಮೋಷನ್ ಸರಾಗವಾಗುತ್ತದೆ

– ಹಸಿ ಮೂಲಂಗಿಯನ್ನು ತುರಿದು ಉಪ್ಪು ಮತ್ತು ನಿಂಬೆರಸ ಸೇರಿಸಿ ತಿಂದರೆ ನೆಗಡಿ ನಿವಾರಣೆಯಾಗುತ್ತದೆ.
– ಮೂಲಂಗಿ ಬೀಜವನ್ನು ನಿಂಬೆರಸದಲ್ಲಿ ಅರೆದು ಹಚ್ಚುವುದರಿಂದ ಹುಳುಕಡ್ಡಿ, ತುರಿ ರೋಗಗಳು ಗುಣವಾಗುತ್ತದೆ.
– ಊಟದಲ್ಲಿ ಹಸಿಮೂಲಂಗಿಯನ್ನು ಸೇವಿಸುವುದರಿಂದ ಕಣ್ಣು,ಮೂಗು,ಕಿವಿ ಮತ್ತು ಗಂಟಲಿನ ಸಮಸ್ಯೆಗಳು ನಿವಾರಣೆಯಾಗುತ್ತವೆ. ಪ್ರತಿದಿನವೂ ಹಸಿಮೂಲಂಗಿಯನ್ನು ಬಳಸಿ, ಒಳ್ಳೆಯದು.
– ಚೇಳು ಕುಟುಕಿದ ಜಾಗಕ್ಕೆ ಮೂಲಂಗಿ ಮತ್ತು ಉಪ್ಪನ್ನು ಅರೆದು ಹಚ್ಚಿದರೆ ವಿಷ ಏರುವುದಿಲ್ಲ ಮತ್ತು ಉರಿ ಕಮ್ಮಿಯಾಗುತ್ತದೆ.
– ಹಸಿ ಮೂಲಂಗಿಯ ಚೂರುಗಳಿಗೆ ನಿಂಬೆರಸ, ಕಾಳು ಮೆಣಸಿನಪುಡಿ ಮತ್ತು ಉಪ್ಪು ಬೆರೆಸಿ ತಿನ್ನುವುದರಿಂದ ಕಾಮಾಲೆ ರೋಗ, ಕಣ್ಣಿನ ತೊಂದರೆ, ಅಜೀರ್ಣ ನಿವಾರಣೆಯಾಗುತ್ತದೆ.
– ಮೂಲಂಗಿ ಸೊಪ್ಪಿನ ರಸವನ್ನು ಸೇವಿಸುವುದರಿಂದ ಮೂತ್ರವೂ ಕಟ್ಟಿಕೊಂಡಿದ್ದರೆ ಅದರ ಬಿಡುಗಡೆಯಾಗುತ್ತದೆ.
– ಮೂಲಂಗಿ ಸೊಪ್ಪಿನ ಪಲ್ಯವನ್ನು ತಯಾರಿಸಬಹುದು, ಇದು ಚೆನ್ನಾಗಿರುತ್ತದೆ ಮತ್ತು ಆರೋಗ್ಯಕ್ಕೂ ಒಳ್ಳೆಯದು. ಆದರೆ ಚೆನ್ನಾಗಿರುವ ಸೊಪ್ಪನ್ನು ನೋಡಿ ತೆಗೆದುಕೊಳ್ಳಬೇಕು.
– ದಿನನಿತ್ಯ ಸಲಾಡ್ ರೀತಿಯಲ್ಲಿ ಮೂಲಂಗಿಯನ್ನು ಸೇವಿಸಿ, ಇದರಿಂದ ತುಂಬಾ ಅನುಕೂಲಗಳಾಗುತ್ತವೆ. ಒಂದೇ ತರಹ ತಿನ್ನಲು ಬೇಸರ ಎನಿಸಿದರೆ, ಚಟ್ನಿಯೊಂದಿಗೆ ಬೆರೆಸಿ, ಮೂಲಂಗಿ ಚಟ್ನಿ ಅಥವ ಮೂಲಂಗಿ ಪರೋಟ ತಯಾರಿಸಿ ತಿನ್ನಬಹುದು.

Comments are closed.