ಕರಾವಳಿ

ಎರಡು ಜಿಲ್ಲೆಗೆ ಕೋಟ ಶ್ರೀನಿವಾಸ ಪೂಜಾರಿ ಉಸ್ತುವಾರಿಯಾಗಬೇಕಿತ್ತು: ಕೆ. ಜಯಪ್ರಕಾಶ್ ಹೆಗ್ಡೆ(Video)

Pinterest LinkedIn Tumblr

ಉಡುಪಿ: ಸ್ಥಳಿಯರಿಗೆ ಉಸ್ತುವಾರಿ ಕೊಟ್ಟಿದ್ದರೆ ಒಳ್ಳೆದಿತ್ತು. ಕೋಟ ಶ್ರೀನಿವಾಸ ಪೂಜಾರಿ ಸ್ಥಳೀಯರಾಗಿದ್ದು ಎರಡು ಜಿಲ್ಲೆಗೆ ಸಂಬಂಧಿಸಿದ್ದರಿಂದ ಉಡುಪಿ ಮತ್ತು ದಕ್ಷಿಣಕನ್ನಡ ಜಿಲ್ಲೆಗೆ ಅವರೇ ಮುಖ್ಯಮಂತ್ರಿಗಳಾಗಬೇಕಿತ್ತು ಎಂದು ಮಾಜಿ ಸಚಿವ, ಬಿಜೆಪಿ ಮುಖಂಡ ಕೆ. ಜಯಪ್ರಕಾಶ್ ಹೆಗ್ಡೆ ಹೇಳಿದ್ದಾರೆ.

ಅವರು ಬಾರಿಕೆರೆಯಲ್ಲಿ ಮಾಧ್ಯಮಗಳ ಜೊತೆ ಮಾತನಾಡುತ್ತಾ, ಅದೇ ಜಿಲ್ಲೇಯವರೇ ಉಸ್ತುವಾರಿ ಮಂತ್ರಿಗಳಾದರೆ ಜನರಿಗೆ ತುಂಬಾ ಅನುಕೂಲವಾಗುತ್ತದೆ. ಉಡುಪಿ ಉಸ್ತುವಾರಿ ಸಚಿವರಿಗೆ ಗೃಹ ಖಾತೆಯಿದ್ದು ಅವರು ಹೆಚ್ಚಿನ ಸಮಯವನ್ನು ಬೆಂಗಳೂರಿನಲ್ಲಿರಬೇಕಗುತ್ತದೆ. ಎರಡು ದೂರದ ಜಿಲ್ಲೆಗೆ ಕೊಟ್ಟಾಗ ಕಷ್ಟವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ದೇವಸ್ಥಾನ ವ್ಯವಸ್ಥಾಪನ ಸಮಿತಿ ರದ್ದು ವಿಚಾರ ಸರಕಾರದ ತೀರ್ಮಾನವಾಗಿದೆ. ಧಾರ್ಮಿಕ ಪರಿಷತ್ ಆಯ್ಕೆ ಮಾಡಿದ್ದು ನ್ಯಾಯಾಲಯದ ತೀರ್ಮಾನಕ್ಕೆ ಬಿಟ್ಟಿದ್ದಾಗಿದ್ದು ಆದೇಶದಲ್ಲಿ ಯಾವ ರೀತಿ ಉಲ್ಲೇಖವಿದೆಯೆಂಬುದರ ಮೇಲೆ ತೀರ್ಮಾನವಾಗುತ್ತದೆ ಎಂದ ಅವರು ಇತ್ತೀಚೆನ ರಾಜಕೀಯದಲ್ಲಿ ಯಾವುದು ಒಳ್ಳೇದು ಯಾವುದು ಕೆಟ್ಟದು ಅರ್ಥವಾಗ್ತಿಲ್ಲ. ಜನಾಭಿಪ್ರಾಯ ಯಾರ ಮೇಲಿರುತ್ತೋ ಗೊತ್ತಾಗೋದು ಇಲ್ಲ ಎಂದು ಮಾರ್ಮಿಕವಾಗಿ ನುಡಿದರು.

(ವರದಿ- ಯೋಗೀಶ್ ಕುಂಭಾಸಿ)

Comments are closed.