ಕರಾವಳಿ

ಹುಟ್ಟೂರಲ್ಲಿ ಸಚಿವ ಕೋಟರಿಗೆ ಅಭಿಮಾನದ ಸ್ವಾಗತ: ಸಾಸ್ತಾನದಲ್ಲಿ ಮಾದರಿಯಾದ `ವೆಲ್‌ಕಮ್’ ! (Video)

Pinterest LinkedIn Tumblr

ಉಡುಪಿ: ಬಿ.ಎಸ್. ಯಡಿಯೂರಪ್ಪ ಸಂಪುಟದಲ್ಲಿ ಸಚಿವ ಸ್ಥಾನ ಗಿಟ್ಟಿಸಿಕೊಂಡ ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಇದೀಗಾ ಸಂಪುಟ ದರ್ಜೆ ಸಚಿವರಾಗಿದ್ದು ಇಂದು ಉಡುಪಿ ಜಿಲ್ಲೆಗೆ ಪ್ರಥಮವಾಗಿ ಆಗಮಿಸಿದ್ರು. ಗುರುವಾರ ರಾತ್ರಿ 7 ಗಂಟೆ ಬಳಿಕ ಹುಟ್ಟುರಿನತ್ತ ಆಗಮಿಸಿದ ಅವರಿಗೆ ಅಭಿಮಾನಿಗಳು, ಕಾರ್ಯಕರ್ತರು ಹಾಗೂ ನಾಗರಿಕರು ಸರಳವಾದ ಸ್ವಾಗತ ಕೋರಿ ಅಭಿಮಾನ ಪ್ರದರ್ಶಿಸಿದ್ದರು.

ಸಾಸ್ತಾನದಲ್ಲಿ ಮಾದರಿ ಸ್ವಾಗತ…
ಕುಂದಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೊಳಪಡುವ ಸಾಸ್ತಾನದ ಪೇಟೆಯಲ್ಲಿ ನೂತನ ಸಚಿವ ಕೋಟರಿಗೆ ಸರಳವಾಗಿ ಸ್ವಾಗತ ಕೋರಲಾಗಿತ್ತು. ನೂರಾರು ಮಂದಿ ಅಭಿಮಾನಿಗಳು ಮತ್ತು ಪಕ್ಷದ ಕಾರ್ಯಕರ್ತರು ಜಮಾಯಿಸಿದ್ದರು. ಐರೋಡಿ ವಿಠ್ಠಲ ಪೂಜಾರಿ, ಮುಖಂಡ ಪ್ರತಾಪ್ ಶೆಟ್ಟಿ ಮುಂದಾಳತ್ವದಲ್ಲಿ ನೆರೆ ಪೀಡಿತರಿಗೆ ನೀಡಲು ವಿವಿಧ ವಸ್ತುಗಳಿದ್ದ ಕಿಟ್ ತಯಾರಿಸಿದ್ದು ಅದನ್ನು ಸಚಿವರಿಗೆ ನೀಡಲಾಗಿತ್ತು. ಅದನ್ನು ಸ್ವೀಕರಿಸಿದ ಕೋಟ ಈ ಕಿಟ್ ಗಳನ್ನು ಜಿಲ್ಲಾಧಿಕಾರಿಗಳ ಮೂಲಕ ನೆರೆ ಸಂತ್ರಸ್ತರಿಗೆ ನೀಡುವುದಾಗಿ ತಿಳಿಸಿದರು. ಯಾವುದೇ ಹಾರ, ತುರಾಯಿ, ಬೊಕ್ಕೆಗಳನ್ನು ನೀಡಿ ಸ್ವಾಗತಿಸದೇ ನೆರೆ ಸಂತ್ರಸ್ತರಿಗೆ ಕಾರ್ಯಕರ್ತರು ಮಿಡಿಯುವ ಮೂಲಕ ಮಾದರಿಯಾಗಿ ಸ್ವಾಗತ ಕೋರಿದರು. ಈ ಸಂದರ್ಭ ರಾಜ್ಯ ಯುವಮೋರ್ಚಾ ಕಾರ್ಯಕಾರಿಣಿ ಸದಸ್ಯ ಮಹೇಶ್ ಕುಮಾರ್ ಪೂಜಾರಿ, ಜ್ಯೋತಿ ಉದಯ್ ಪೂಜಾರಿ, ರಾಜೇಶ್ ಕಾವೇರಿ ಮೊದಲಾದವರಿದ್ದರು.

ಕೋಟದಲ್ಲಿ ಸರಳತೆ ಮೆರೆದ ಸಚಿವ!
ಕೋಟಕ್ಕೆ ಆಗಮಿಸುವಂತೆ ತನ್ನ ಬೆಂಗಾವಲು ವಾಹನ, ತಾನಿದ್ದ ಸರಕಾರಿ ವಾಹನ (ಕಾರು) ದಿಂದ ಇಳಿದ ಕೋಟ ಬಸ್ ನಿಲ್ದಾಣ ಸಮೀಪದಿಂದ ಕೋಟ ಅಮ್ರಥೇಶ್ವರೀ ದೇವಸ್ಥಾನದವರೆಗೆ ನಡೆದು ಬಂದರು. ಮಾರ್ಹ ಮಧ್ಯೆ ಜನರು ಅವರನ್ನು ಕಂಡು ಅಭಿನಂದಿಸಿದರು. ದೇವಳದ ಆವರಣದಲ್ಲಿ ನೆರೆದಿದ್ದ ನೂರಾರು ಜನರು ಕೋಟರನ್ನು ಆತ್ಮೀಯವಾಗಿ ಬರಮಾಡಿಕೊಂಡಿದ್ದು ಆನಂದ್ ಸಿ. ಕುಂದರ್ ಹಾಗೂ ಮುಖಂಡರ ಉಪಸ್ಥಿತಿಯಲ್ಲಿ ‘ ಸೋಣೆ ಆರತಿ’ ವಿಶೇಷ ಪೂಜೆ ಸನ್ನಿಧಾನದಲ್ಲಿ ನಡೆಯಿತು.

ಹೆತ್ತಮ್ಮನಿಂದ ಆಶಿರ್ವಾದ..
ಇದಕ್ಕೂ ಮೊದಲು ಸಾಲಿಗ್ರಾಮದ ಗುರುನರಸಿಂಹ ದೇವಸ್ಥಾನಕ್ಕೆ ತೆರಳಿ ಅಲ್ಲಿ ದೇವರ ದರ್ಶನ ಪಡೆದಿದ್ದರು. ಕೋಟ ದೇವಿ ದರ್ಸ್ನ ಬಳಿಕ ಕೋಟದ ತನ್ನ ಮೂಲ ಮನೆಗೆ ತೆರಳಿ ತಾಯಿ ಲಚ್ಚಿ ಪೂಜಾರ್ತಿಯವರ ಆಶಿರ್ವಾದ ಪಡೆದರು. ಹುಟ್ಟೂರಿಗೆ ಭೇಟಿ ನೀಡಿದ ವೇಳೆ ಪತ್ನಿ ಶಾಂತ, ಪುತ್ರಿ, ಕುಟುಂಬಿಕರು ಇದ್ದರು.

(ವರದಿ- ಯೋಗೀಶ್ ಕುಂಭಾಸಿ)

Comments are closed.