ಕರಾವಳಿ

‘ವಾಮನ ಎಲ್ಲಿದ್ದೀಯಪ್ಪ’….ಯಕ್ಷಗಾನದಲ್ಲಿಯೂ ‘ನಿಖಿಲ್ ಎಲ್ಲಿದ್ದೀಯಪ್ಪ?’ ಡೈಲಾಗ್: ವಿಡಿಯೋ ವೈರಲ್

Pinterest LinkedIn Tumblr

ಉಡುಪಿ: ಇತ್ತೀಚೆಗೆ ಬಹಳಷ್ಟು ವೈರಲ್ ಹಾಗೂ ಟ್ರೋಲ್ ಆದ ವಿಡಿಯೋ ಅಂದರೆ ಅದು ‘ಮಗನೇ (ನಿಖಿಲ್) ಎಲ್ಲಿದ್ದೀಯಪ್ಪ’ ಎಂಬ ಸಿಎಂ ಎಚ್​​​.ಡಿ ಕುಮಾರಸ್ವಾಮಿ ಮತ್ತು ಪುತ್ರ ನಿಖಿಲ್​​​ ನಡುವಿನ ಸಂಭಾಷಣೆ ಹಳೆ ವಿಡಿಯೋ ತುಣುಕು.

ಕಳೆದ ವರ್ಷ(2018) ಸೆಪ್ಟೆಂಬರ್ 2 ರಂದು ನಿಖಿಲ್ ಕುಮಾರ್ ಅಭಿನಯದ ಜಾಗ್ವರ್ ಚಿತ್ರದ ಧ್ವನಿಸುರುಳಿ ಬಿಡುಗಡೆ ಕಾರ್ಯಕ್ರಮ ಅದ್ದೂರಿಯಾಗಿ ನಡೆದಿತ್ತು. ಮಂಡ್ಯದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಸಿಎಂ ಕುಮಾರಸ್ವಾಮಿ ಹಾಗೂ ಪುತ್ರ ನಿಖಿಲ್​​ ನಡುವೆ ಈ ರೀತಿಯಲ್ಲಿ ನಡೆದ ಸಂಭಾಷಣೆ ಕಳೆದೊಂದು ವಾರದಿಂದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​​ ಆಗಿದ್ದು ಅದಕ್ಕೆ ಬೇರೆಬೇರೆ ಪಂಚ್ ಹಾಗೂ ವಿಸ್ಯುವಲ್ಸ್ ಇಫೆಕ್ಟ್ ನೀಡಿಯೂ ವೈರಲ್ ಮಾಡಿ ಬಿಡಲಾಗಿತ್ತು.

ಸದ್ಯದ ಬೆಳವಣಿಗೆಯಲ್ಲಿ ಯಕ್ಷಗಾನದಲ್ಲಿಯೂ ಇದೇ ಡೈಲಾಗ್ ಬಳಸಿಕೊಂಡಿದ್ದು ‘ಮಗ ವಾಮನ ಕಾಣಿಸುತ್ತಿಲ್ಲ, ಮಗ ವಾಮನ ಎಲ್ಲಿದ್ದೀಯಾ? ಈಗಲೇ ಜನರ ಮದ್ಯೆ ಸೇರಿಕೊಂಡು ಬಿಟ್ಟೆಯಾ ಎಂದು ಹಾಸ್ಯಧಾರಿ ಕಲಾವಿದ ಮಗನನ್ನುದ್ದೇಶಿಸಿ ಯಕ್ಷಗಾನ ಶೈಲಿಯಲ್ಲಿ ಕೇಳಿದ್ದು ಅದಕ್ಕೆ ಮಗ ಉತ್ತರಿಸಿವುದು ಮತ್ತು ತಮ್ದೆ ಮಗನನ್ನು ವೇದಿಕೆಗೆ ಆಹ್ವಾನಿಸುವ ಮಾತಿನ ತುಣುಕು ಇದೀಗಾ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿಬಿಟ್ಟಿದೆ.

Comments are closed.